ಕಲಬುರಗಿ ವಿಮಾನ ನಿಲ್ದಾಣಕ್ಕೆ ಮತ್ತೊಂದು ಗರಿ: ಕಾರ್ಗೋ ಸೇವೆ ಪ್ರಾರಂಭಕ್ಕೆ ಪ್ರಯತ್ನ

0
332

ಕಲಬುರಗಿ: ಕಲಬುರಗಿ ವಿಮಾನ ನಿಲ್ದಾಣದಿಂದ ರಾಷ್ಟ್ರೀಯ ಹಾಗೂ ಅಂತರ್‌ರಾಷ್ಟ್ರೀಯ ಕಾರ್ಗೋ ಸೇವೆಯನ್ನು ಪ್ರಾರಂಭಿಸಲು ಪ್ರಯತ್ನಿಸಲಾಗುವುದು ಎಂದು ಕಲಬುರಗಿ ವಿಮಾನ ನಿಲ್ದಾಣ ಪ್ರಾಧಿಕಾರದ ನಿರ್ದೇಶಕರಾದ ಜ್ಞಾನೇಶ್ವರ ರಾವ್ ಅವರು ಹೇಳಿದರು.

ಕಲಬುರಗಿ ವಿಮಾನ ನಿಲ್ದಾಣ ಪ್ರಾಧಿಕಾರ ಹಾಗೂ ಹೈದ್ರಾಬಾದ್ ಕರ್ನಾಟಕ ವಾಣಿಜ್ಯೋದಮ ಮಂಡಳಿ ಇವರ ಸಂಯುಕ್ತಾಶ್ರಯದಲ್ಲಿ ಶನಿವಾರ ಕಲಬುರಗಿ ವಿಮಾನ ನಿಲ್ದಾಣದಲ್ಲಿ ಕರೆಯಲಾಗಿದ್ದ ಸಭೆಯಲ್ಲಿ ಮಾತನಾಡಿದ ಅವರು, ಪ್ರಸ್ತುತ ಹಗಲಿನಲ್ಲಿ ಮಾತ್ರ ವಿಮಾನ ಸೇವೆಗಳು ಚಾಲನೆಯಲ್ಲಿವೆ. ಮುಂಬರುವ ದಿನಗಳಲ್ಲಿ ರಾತ್ರಿ ವಿಮಾನ ಸೇವೆಗಳನ್ನು ಸಹ ಪ್ರಾರಂಭಿಸಲಾಗುವುದು. ಕಲಬುರಗಿಯಿಂದ ಮುಂಬಯಿ, ಅಹ್ಮದಾಬಾದ್, ಹೈದ್ರಾಬಾದ್ ವಿಮಾನ ನಿಲ್ದಾಣಗಳಿಗೆ ಸಂಪರ್ಕ ಸೇವೆಗಳನ್ನು ಪ್ರಾರಂಭಿಸಲಾಗುವುದು ಎಂದು ಹೇಳಿದರು.

Contact Your\'s Advertisement; 9902492681

ಹೈದ್ರಾಬಾದ್ ಕರ್ನಾಟಕ ವಾಣಿಜ್ಯೋದಮ ಮಂಡಳಿ ಅಧ್ಯಕ್ಷರಾದ ಅಮರನಾಥ ಪಾಟೀಲ್ ಅವರು ಮಾತನಾಡಿ, ಕಲಬುರಗಿ ವಿಮಾನ ನಿಲ್ದಾಣದಿಂದ ರಾಷ್ಟ್ರೀಯ ಹಾಗೂ ಅಂತರ್‌ರಾಷ್ಟ್ರೀಯ ಕಾರ್ಗೋ ಸೇವೆ ಪ್ರಾರಂಭದಿಂದ ಕಲಬುರಗಿ ಜಿಲ್ಲೆಯು ಅಭಿವೃದ್ಧಿಯತ್ತ ಸಾಗಲಿದೆ. ಜಿಲ್ಲೆಯಲ್ಲಿ ಹೊಸ ಕೈಗಾರಿಕೆಗಳು ಪ್ರಾರಂಭವಾಗುವುದಕ್ಕೆ ಸಹಾಯಕವಾಗಲಿದೆ. ಇದರಿಂದ ಉದ್ಯೋಗಾವಕಾಶಗಳು ಹೆಚ್ಚಾಗಿ ನಿರುದ್ಯೋಗ ನಿವಾರಣೆಯಾಗಲಿದೆ. ಕೂಡಲೇ ಇತರೆ ವಿಮಾನ ನಿಲ್ದಾಣಗಳಿಗೆ ಸಂಪರ್ಕ ಸೇವೆಯನ್ನು ಪ್ರಾರಂಭಿಸಬೇಕು ಎಂದು ಅವರು ಮನವಿ ಮಾಡಿದರು.

ಸಭೆಯಲ್ಲಿ ಕರ್ನಾಟಕ ಸಣ್ಣ ಕೈಗಾರಿಕೆಗಳ ಮಾಲಿಕರ ಸಂಘದ ಕಲಬುರಗಿ ಜಿಲ್ಲಾ ಅಧ್ಯಕ್ಷ ಭೀಮಾಶಂಕರ್ ಬಿ. ಪಾಟೀಲ್, ಏರ್ ಅಲೈನ್ಸ್ ಸಂಸ್ಥೆಯ ಉಪೇಂದ್ರ ಸೇಖಾವತ್, ಸ್ಟಾರ್ ಏರ್ ಸಂಸ್ಥೆಯ ಸ್ವಪ್ನಿಲ್, ಅಂಚೆ ಇಲಾಖೆ, ಪ್ರೋಫೆಶನಲ್ ಕೋರಿಯರ್, ಪ್ರೀತಮ್ ಟೂರ‍್ಸ್ ಮತ್ತು ಟ್ರಾವೆಲ್ಸ್‌ನ ವಿರೇಶ ಎಸ್.ಮಾಲಗಾರ, ಎಸ್‌ಬಿಜಿ ಟೂರ‍್ಸ್ ಮತ್ತು ಟ್ರಾವೆಲ್ಸ್‌ನ ಆರ್. ಕೋಸ್ಟಿ, ಸಿದ್ರಾ ಟ್ರಾವೆಲ್‌ನ ಫರ್ಮಾನ್ ಖುರೇಶಿ, ಸ್ಪೀಡ್ ಮನಿ ಟ್ರಾನ್ಸಫರ್‌ನ ರಿಯಾಜುದ್ದೀನ್ ಶೇಖ್ ಸೇರಿದಂತೆ ಮುಂತಾದವರು ಉಪಸ್ಥಿತರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here