ನಗರದ ಲಕ್ಷ್ಮಿಗಂಜನಲ್ಲಿ 47 ಲಕ್ಷ ರೂ. ವೆಚ್ಚದಲ್ಲಿ ಉದ್ಯಾವನ ನಿರ್ಮಾಣಕ್ಕೆ ಭೂಮಿ ಪೂಜೆ

0
79

ಶಹಾಬಾದ:ನಗರಸಭೆಯ 14ನೇ ಹಣಕಾಸು ಯೋಜನೆಯಡಿಯಲ್ಲಿ ಸುಮಾರು 47 ಲಕ್ಷ ರೂ. ವೆಚ್ಚದಲ್ಲಿ ಹಸಿರು ಉದ್ಯಾನವನ ನಿರ್ಮಿಸಲಾಗುತ್ತಿದೆ.ಇದರಿಂದ ನಗರದ ಅಂದವೂ ಇದರಿಂದ ಹೆಚ್ಚಲಿದೆ ಎಂದು ಕಲಬುರಗಿ ಗ್ರಾಮೀಣ ಮತಕ್ಷೇತ್ರದ ಶಾಸಕ ಬಸವರಾಜ ಮತ್ತಿಮಡು ಹೇಳಿದರು.

ಅವರು ಶನಿವಾರ ನಗರದ ಲಕ್ಷ್ಮಿಗಂಜನಲ್ಲಿ ನಗರಸಭೆಯಿಂದ ಆಯೋಜಿಸಲಾದ ಉದ್ಯಾವನ ನಿರ್ಮಾಣಕ್ಕೆ ಭೂಮಿ ಪೂಜೆ ನೇರವೇರಿಸಿ ಮಾತನಾಡಿದರು.

Contact Your\'s Advertisement; 9902492681

ಶಹಾಬಾದ ತಾಲೂಕಾ ಆಗಿದ್ದರಿಂದ ಅಭಿವೃದ್ಧಿಯೂ ಆಗಬೇಕಿದೆ.ಆ ದೃಷ್ಟಿಯಿಂದ ನಗರದಲ್ಲಿ ರಸ್ತೆ, ನೀರು, ಉದ್ಯಾನವನಗಳಂತಹ ಮಹತ್ವ ಕಾರ್ಯಗಳ ಪರಿಣಾಮಕಾರಿ ಅನುಷ್ಠಾನಗೊಳಿಸಲು ಜನತೆಯ ಸಹಾಯ ಸಹಕಾರ ನೀಡಬೇಕು.ನಗರವನ್ನು ಅಭಿವೃದ್ಧಿಗೊಳಿಸಬೇಕು.ಯೋಜನೆಗಳ ಲಾಭ ಜನತೆಗೆ ಮುಟ್ಟಬೇಕು ಎನ್ನುವ ನಿಟ್ಟಿನಲ್ಲಿ ಗುತ್ತಿಗೆದಾರರು ಪ್ರಾಮಾಣಿಕತೆಯಿಂದ ಕೆಲಸ ಮಾಡಿ ಉತ್ತಮವಾಗಿ ಕೆಲಸ ಮಾಡಿ, ನಿಗದಿತ ಸಮಯದಲ್ಲಿ ಗುಣಮಟ್ಟದ ಕಾಮಗಾರಿ ಮುಗಿಸಬೇಕೆಂದು ಹೇಳಿದರು.

ನಗರಸಭೆಯ ಅಧ್ಯಕ್ಷೆ ಅಂಜಲಿ ಗಿರೀಶ ಕಂಬಾನೂರ, ಉಪಾಧ್ಯಕ್ಷೆ ಸಲೀಮಾಬೇಗಂ, ಪೌರಾಯುಕ್ತ ಡಾ.ಕೆ.ಗುರಲಿಂಗಪ್ಪ,ಎಇಇ ಪುರುಷೋತ್ತಮ, ಬಿಜೆಪಿ ಅಧ್ಯಕ್ಷ ಅಣವೀರ ಇಂಗಿನಶೆಟ್ಟಿ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಡಾ.ರಶೀದ್ ಮರ್ಚಂಟ್,ಮಾಜಿ ನಗರಸಭೆಯ ಅಧ್ಯಕ್ಷ ಗಿರೀಶ ಕಂಬಾನೂರ, ಅರುಣ ಪಟ್ಟಣಕರ್, ನಗರಸಭೆಯ ಸದಸ್ಯರಾದ ಡಾ.ಅಹ್ಮದ್ ಪಟೇಲ,ಸೂರ್ಯಕಾಂತ ಕೋಬಾಳ,ನಾಗರಾಜ ಕರಣಿಕ್,ರಜನಿಕಾಂತ ಕಂಬಾನೂರ, ಭಾಗಿರಥಿ ಗುನ್ನಾಪೂರ, ಶರಣು ವಸ್ತ್ರದ್, ನಾಗರಾಜ ಮೇಲಗಿರಿ,ಆಶ್ರಯ ಸಮಿತಿ ಸದಸ್ಯರಾದ ಶಿವುಗೌಡ,ಭೀಮಯ್ಯ ಗುತ್ತೆದಾರ, ಬಸವರಾಜ ಮದ್ರಕಿ, ನಿಂಗಣ್ಣ ಹುಳಗೋಳಕರ್, ಸದಾನಂದ ಕುಂಬಾರ,ಹಾಷಮ್ ಖಾನ, ಜಯಶ್ರೀ ಸೂಡಿ ಸೇರಿದಂತೆ ಅನೇಕರು ಹಾಜರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here