ಕಲಬುರಗಿ: ಜಿಲ್ಲೆಯಲ್ಲಿ ಮೊದಲ ಹಂತದ ಮತದಾನ ಆರಂಭವಾಗಿದ್ದು, ಬಹುತೇಕ ಗ್ರಾಮ ಪಂಚಾಯತ್ ಮತ ಕೇಂದ್ರದಲ್ಲಿ ಬಿರುಸಿನ ಮತದಾನ ನಡೆಯುತ್ತಿದೆ.
ಇಲ್ಲಿನ ಚಿಂಚೋಳಿ ತಾಲ್ಲೂಕಿನ ರಟಕಲ್ ಗ್ರಾಮದ ಗ್ರಾಮ ಪಂಚಾಯತಿ ಆವರಣದಲ್ಲಿನ ಮತ ಗಟ್ಟೆ 1,2, 3 ಹಾಗೂ 4 ರಲ್ಲಿ ಬೆಳಿಗ್ಗೆಯಿಂದಲ್ಲೆ ಮತಗಟ್ಟೆಗಳಿ ಭಾರಿ ಸಂಖ್ಯೆಯಲ್ಲಿ ಮತದಾರರು ಉತ್ಸಾಹದಿಂದ ಮತದಾನ ನಡೆಸಿದ್ದು, ಮಧ್ಯಾಹ್ನದ ವರೆಗೆ ಉಸಿರು ಬಿಡದೆ ಮತದಾನ ನಡೆಯುತ್ತಿದೆ.
ಗ್ರಾಮದಲ್ಲಿ ನಾಲ್ಕು ಮತದಾನದ ಕೆಂದ್ರಗಳು ಸ್ಥಾಪಿಸಲಾಗಿದೆ. ಸರತಿ ಸಾಲಿನಲ್ಲಿ ನಿಂತು ಮತದಾರರು ಮತದಾನಕ್ಕೆ ನಿಂತಿರುವ ದೃಶ್ಯ ಕಂಡುಬಂದಿದ್ದು, ಅಭ್ಯರ್ಥಿಗಳು ಮತದಾರರ ಮನವೊಲಿಸಲು ಸಾಕಷ್ಟು ಕಸರತು ನಡೆಸಿರುವ ಘಟನೆಗಳು ಮತದಾನ ಕೇಂದ್ರ ಸುತ್ತಮುತ ಕಂಡುಬಂತು.
ಈ ವೇಳೆಯಲ್ಲಿ ಮತ ಕೇಂದ್ರದಿಂದ ಅಭ್ಯರ್ಥಿಗಳ ಪ್ರಚಾರ ನಡೆಸುತ್ತಿರುವ ಕಾರ್ಯಕರ್ತರನ್ನು ಚದುರಿಸಲು ಪೊಲೀಸರು ಹರಸಾಹಸ ಪಡುವ ಸನ್ನಿವೇಶ ಸಹ ನಡೆಯಿತು.
ಸದ್ಯ ಬಿರುಸಿನ ಮತದಾನ ನಡೆಯುತಿದ್ದು, ಸಂಜೆವರೆಗೆ ಪ್ರತಿಶತ ಮತದಾನ ನಡೆಯುವ ನಿರೀಕ್ಷೆ ಇದೆ.