ಗ್ರಾಮ ಪಂಚಾಯಿತಿ ಚುನಾವಣೆ: ಅಭ್ಯರ್ಥಿ ಚಿಹ್ನೆ ಅದಲು ಬದಲು, ಡಿ. 24ಕ್ಕೆ ಮರು ಮತದಾನ

0
87

ಕಲಬುರಗಿ: ಜಿಲ್ಲೆಯ ಕಮಲಾಪೂರ ತಾಲೂಕಿನ 2-ಕಿಣ್ಣಿಸಡಕ್ ಗ್ರಾ.ಪಂ.ಯ 1-ಕಿಣ್ಣಿಸಡಕ್ ಕ್ಷೇತ್ರದ ಮತಗಟ್ಟೆ ಸಂ-7ರಲ್ಲಿ ಮಂಗಳವಾರ ನಡೆದ ಚುನಾವಣೆ ಸಂದರ್ಭದಲ್ಲಿ  ಮತಪತ್ರದಲ್ಲಿ ಅಭ್ಯರ್ಥಿಯೋರ್ವರ ಚಿನ್ಹೆ ತಪ್ಪಾಗಿ‌ ಮುದ್ರಿತವಾಗಿ ಮತದಾನ ಸ್ಥಗಿತಗೊಂಡ ಹಿನ್ನೆಲೆಯಲ್ಲಿ ಡಿ.24 ಕ್ಕೆ‌ ಇಲ್ಲಿ ಮರು ಮತದಾನ ನಡೆಸುವಂತೆ ‌ಚುನಾವಣಾ ಆಯೋಗ ಆದೇಶ ಹೊರಡಿಸಿದೆ.

ಅಭ್ಯರ್ಥಿ ಜೈರಾಜ ಎ ಹಲಗಿ ಅವರ ನಾಮ ಪತ್ರ ಸಲ್ಲಿಸಿದ ನಂತರ ಆಯೋಗ ತುತ್ತೂರಿ ಗುರುತಿನ ಚಿಹ್ನೆ ನೀಡಿತ್ತು. ನಿನ್ನೆ ನಡೆದ ಮೊದಲ ಹಂತದ ಗ್ರಾಮ ಪಂಚಾಯತಿ ಚುನಾವಣೆ ಮತದಾನದ ವೇಳೆಯಲ್ಲಿ ಮತದಾನ ಪತ್ರದಲ್ಲಿ ತುತ್ತೂರಿ ಬದಲು, ಕಹಳೆ ಉದುವ ಮನುಷ್ಯನ ಚಿಹ್ನೆ ಮುದ್ರಿಸಲಾಗಿತ್ತು.

Contact Your\'s Advertisement; 9902492681

ಇದರಿಂದ ಆಘತಗೊಂಡ ಅಭ್ಯರ್ಥಿ ಮತದಾನಕ್ಕೆ ಅಕ್ಷೇಪ ವ್ಯಕ್ತಪಡಿಸಿ, ಪ್ರಚಾರದಲ್ಲಿ ತುತ್ತೂರಿ ಚಿಹ್ನೆಯ ಹೆಸರಲ್ಲಿ ಪ್ರಚಾರ ಕೈಗೊಂಡಿರುವ ಬಗ್ಗೆ ತಿಳಿಸಿದ ಜೈರಜ ಆಗಿರುವ ಕೋಪಕ್ಕೆ ಅಸಮಧಾನ ವ್ಯಕ್ತಪಡಿಸಿದರು ಎನ್ನಲಾಗಿದೆ.

ಕೇಲಹೊತ್ತು ಮತಕೇಂದ್ರದಲ್ಲಿ ಗೊಂದಲದ ವಾತಾವರಣ ನಿರ್ಮಾಣವಾಗಿದ್ದು, ನಂತರ ಚುನಾವಣೆ ಅಧಿಕಾರಿಗಳು ಹಾಗೂ ತಹಶೀಲ್ದಾರ್ ಅವರಿಂದ ಪರಿಶೀಲನೆ ನಂತರ ಮರು ಮತದಾನಕ್ಕೆ ಚುನಾವಣೆ ಆಯೋಗ ಅವಕಾಶ ನೀಡಿದೆ.

ಮರು ಮತದಾನ : ಕಲಬುರಗಿ ಜಿಲ್ಲೆಯ ಕಮಲಾಪೂರ ತಾಲೂಕಿನ 2-ಕಿಣ್ಣಿ ಸಡಕ ಗ್ರಾಮ ಪಂಚಾಯತಿಯ 1-ಕಿಣ್ಣಿ ಸಡಕ ಕ್ಷೇತ್ರಕ್ಕೆ ಅನುಸೂಚಿತ ಜಾತಿ ಮೀಸಲಾತಿಗೆ ಸ್ಪರ್ಧಿಸಿರುವ ಅಭ್ಯರ್ಥಿಯ ಚಿನ್ಹೆ ಬದಲಾವಣೆ ಆಗಿರುವ ಹಿನ್ನೆಲೆಯಲ್ಲಿ  24.12.2020 ರಂದು ಈ ಕ್ಷೇತ್ರಕ್ಕೆ ಮರು ಮತದಾನ ಮಾಡಲು ಪರವಾನಿಗಿ ನೀಡಲು ಕೋರಿ ರಾಜ್ಯ ಚುನಾವಣಾ ಆಯೋಗಕ್ಕೆ ಕೋರಿಕೆ ಸಲ್ಲಿಸಲಾಗಿತ್ತು.

ಇದೇ ಡಿಸೆಂಬರ್ 24 ರಂದು ಮರು ಮತದಾನ ಮಾಡುವಂತೆ ಚುನಾವಣಾ  ಆದೇಶ ನೀಡಿದೆ ಎಂದು ಜಿಲ್ಲಾಧಿಕಾರಿಗಳು ತಿಳಿಸಿದ್ದಾರೆ.

ಜಿಲ್ಲೆಯಲ್ಲಿ ಮೊದಲನೆ ಹಂತದ ಚುನಾವಣೆಯಲ್ಲಿ ಒಟ್ಟು 141 ಸದಸ್ಯರು ಅವಿರೊಧವಾಗಿ ಆಯ್ಕೆಯಾಗಿರುವ ಹಿನ್ನೆಲೆಯಲ್ಲಿ 36 ಮತಗಟ್ಟೆಗಳಲ್ಲಿ ಚುನಾವಣೆ ಜರುಗಿರುವುದಿಲ್ಲ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here