ಸೇಡಂ : ತಾಲ್ಲೂಕಿನ ಊಡಗಿ ಗ್ರಾಮ ಪಂಚಾಯತಿ ಚುನಾವಣೆ ನಿಮಿತ್ತ ಕಾಂಗ್ರೆಸ್ ಹಿರಿಯ ನಾಯಕ ಹಾಗೂ ಹಾಪ್ಕಮ್ ರಾಜ್ಯ ಅಧ್ಯಕ್ಷ ಬಸವರಾಜ ಆರ್ ಪಾಟೀಲ್ ಅವರ ನೇತ್ರತ್ವದಲ್ಲಿ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಗಳ ಪರ ಬಿರುಸಿನ ಪ್ರಾಚರ ನಡೆಸಿದರು.
ಊಡಗಿ ಗ್ರಾಮ ಪಂಚಾಯತ್ ವಾರ್ಡ್ ನಂ.3 ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿ ಗಳಾದ ಆಶ್ವನಿ ಉಮೇಶ್ ತೆಲ್ಕೂರ್, ಜಗದೇವಿ ವೀರಭದ್ರ ದಪ್ಪ ಕಿವಡನೋರ್,ನಾಗೇಂದ್ರ ದಪ್ಪ ವೀರಣ್ಣ ಸರಡಗಿ ,ಶೇಕ್ ಹುಸೇನ್ ಕರೀಮ್ ಸಾಬ್ ಖುರೇಷಿ ,ಅಭ್ಯರ್ಥಿಗಳ ಪರ ಮತಯಚನೆ ಮಾಡಿದರು.
ಡಾ.ಶರಣಪ್ರಕಾಶ ಪಾಟೀಲ್ ಸಚಿವರಾಗಿದ್ದ ವೇಳೆ ಸೇಡಂ ಹಾಗೂ ಕಲಬುರಗಿ ಜಿಲ್ಲೆಯಲ್ಲಿ ಬಹಳಷ್ಟು ಅಭಿವೃದ್ಧಿ ಕಾರ್ಯಗಳನ್ನೂ ಮಾಡಿ ನಮ್ಮ ತಾಲ್ಲೂಕಿನ ಕೀರ್ತಿ ತಂದಿದ್ದು, ಪಕ್ಷದ ಮುಖಂಡರ ಅಭಿವೃದ್ಧಿ ಕಾರ್ಯಗಳನ್ನು ಗಮನದಲ್ಲಿಟ್ಟುಕೊಂಡು ಪಕ್ಷದ ಅಭ್ಯರ್ಥಿಗಳಿಗೆ ಪ್ರಚಂಡ ಬಹುಮತದಿಂದ ಆರಿಸಿ ತರಬೇಕಂದು ಅವರು ಮನವಿ ಮಾಡಿದರು.
ಈ ಸಂದರ್ಭದಲ್ಲಿ ಸಂಪತ್ ಕುಮಾರ ಭಾಂಜಿ ,ಸತೀಶ್ ಕುಮಾರ್ ಭಾಂಜಿ ,ನಾರಾಯಣ ಭುತಪೂರ್,ಬಸವರಾಜ್ ಹೂಗಾರ, ದೇವೆಂದ್ರಪ್ಪ ಕರನ್ ಕೋಟ್, ಸಂದಿಪ್ ಭಾಂಜಿ ,ಶೋಯೆಬ್ ಪಟೇಲ್,ಸಿದ್ದು ಭಜಂತ್ರಿ ಮತ್ತು ಆನೇಕ ಕಾರ್ಯಕರ್ತರು ಉಪಸ್ಥಿತರಿದ್ದರು.