ಅಜಾತಶತ್ರು ಮಾಜಿ ಮುಖ್ಯಮಂತ್ರಿ ದಿ. ಧರ್ಮಸಿಂಗ್ ಅವರ 84 ನೇ ಜನ್ಮ: ಹಳ್ಳಿಯಿಂದ ದಿಲ್ಲಿವರಿಗೆ ನಡೆದು ಬಂದ ಹಾದಿ 

0
56

ಈ ನಾಡು, ರಾಷ್ಟ್ರಕಂಡ ರಾಜಕೀಯ ನಾಯಕರು ಮತ್ತು ಅಜಾತ ಶತ್ರು… ಮಾಜಿ ಮುಖ್ಯಮಂತ್ರಿ ದಿ.ಡಾ.ಎನ್. ಧರ್ಮಸಿಂಗ್ ಅವರು 81 ಸಮೃದ್ಧಿ ಜೀವನ, 50 ವರ್ಷಗಳ ರಾಜಕೀಯ ಜೀವನದಲ್ಲಿ ಸಾಧನೆ ಮಾಡಿದ ಏಕೈಕ ವ್ಯಕ್ತಿ. ಇತಿಹಾಸದಲ್ಲಿ ಅವರ ಕ್ಷೇತ್ರದಲ್ಲಿ ಒಂದೇ ಮನೆ, ಒಬ್ಬನೇ ವ್ಯಕ್ತಿ ಈ ರಾಜ್ಯದ ಮುಖ್ಯಮಂತ್ರಿ ಆಗಿದ್ದು ಇತಿಹಾಸ ಪುಟದಲ್ಲಿ ಸೇರಿದೆ. ಅವರ ಮಾಹಿತಿ ಜೊತೆಗೆ ವಿವರಣೆ.
ಕಲಬುರಗಿ ಜಿಲ್ಲೆಯ ಜೇವರ್ಗಿ ತಾಲೂಕಿನ ನೆಲೋಗಿ ಗ್ರಾಮ ಹುಟ್ಟೂರು. ಪ್ರಾಥಮಿಕ, ಪ್ರೌಢ ಶಿಕ್ಷಣ, ಪದವಿ ಪೂರ್ವ, ಉನ್ನತ ಪದವಿ ಶಿಕ್ಷಣ ಕಲಬುರಗಿಯಲ್ಲಿ ನಂತರ ಹೈದರಾಬಾದ್ ನಲ್ಲಿ ಕಾನೂನು ಪದವಿ, ನಂತರ ವಕೀಲರಾಗಿ ಸೇವೆ ಮಾಡಿದರು.

ಅವರ ಧರ್ಮಪತ್ನಿ ಪ್ರಭಾವತಿ, ಇಬ್ಬರು ಮಕ್ಕಳು, ಒಬ್ಬರು ಪುತ್ರಿ, ಅವರ ಹಿರಿಯ ಸುಪುತ್ರರಾದ ವಿಜಯಸಿಂಗ್ ಅವರು, ಈಗಿನ ವಿಧಾನ ಪರಿಷತ್ ಸದಸ್ಯರು, ಬೀದರ ಜಿಲ್ಲೆ. ಕಿರಿಯ ಪುತ್ರ ಈಗಿನ ವಿರೋಧ ಪಕ್ಷದ ಮುಖ್ಯ ಸಚೇತಕರು, ಜೇವರ್ಗಿ ವಿಧಾನ ಸಭಾ ಕ್ಷೇತ್ರದಿಂದ ಎರಡು ಬಾರಿ ಶಾಸಕರಾದ, ನಗುಮುಖದ ಮತ್ತು ಇಡೀ ರಾಜ್ಯದ ಜನರಿಗೆ ಪ್ರೀತಿಗೆ ಪಾತ್ರರಾದ ಡಾIIಅಜಯಸಿಂಗ್ ಅವರು ಅತ್ಯಂತ ಸರಳ ವ್ಯಕ್ತಿತ್ವ ರಾಜಕಾರಣದಲ್ಲಿ. ಧರ್ಮಸಿಂಗ್ ಅವರ ಸುಪುತ್ರಿಯಾದ ಪ್ರೀರ್ಯದರ್ಶಿನಿ ಚಂದ್ರಸಿಂಗ್ ಅವರು, ದಿ.ಡಾ.ಎನ್.ಧರ್ಮಸಿಂಗ್ ಅವರ ಚಿಕ್ಕ ಕುಟುಂಬ, ಚೊಕ್ಕ ಕುಟುಂಬ, ಜೊತೆಗೆ ಸಂತೋಷದ ಜೀವನವಾಗಿತ್ತು. ಅಜಾತಶತ್ರು ಮಾಜಿ ಮುಖ್ಯಮಂತ್ರಿ ದಿ.ಡಾ.ಎನ್.ಧರ್ಮಸಿಂಗ್ ಸಾಹೇಬರು ಸುಮಾರು 50 ವರ್ಷಗಳ ಕಾಲ ರಾಜಕೀಯದಲ್ಲಿ ಇದು ಸಾರ್ವಜನಿಕರ ಸೇವೆ ಮಾಡಿದವರು.

Contact Your\'s Advertisement; 9902492681

ಅವರು 13 ಬಾರಿ ಸಾರ್ವತ್ರಿಕ ಚುನಾವಣೆಯಲ್ಲಿ ಸ್ಪರ್ಧಿಸಿ, 11 ಬಾರಿ ಗೆಲುವು ಸಾಧಿಸಿದ ಏಕೈಕ ರಾಜಕೀಯ ವ್ಯಕ್ತಿ. ಅವರು ರಾಜಕೀಯ ಶಕ್ತಿ ಆಗಿದ್ದರು. ಪ್ರಥಮ ಚುನಾವಣೆಯಿಂದ 10 ಚುನಾವಣೆಗಳು ಸತತ ಅವರ ಗೆಲುವಿನ ಜೊತೆಗೆ, ವಿಜಯದ ಲಕ್ಷ್ಮಿ ಎಂಬ ಮಾತು ಅವರದು ಆಗಿತ್ತು. ಒಂದು ಬಾರಿ ವಿಧಾನ ಸಭೆಯ ಚುನಾವಣೆಯಲ್ಲಿ ಸೋಲು, ಒಂದು ಬಾರಿ ಲೋಕಸಭೆಯಲ್ಲಿ ಗೆಲುವು, ನಂತರ ಸೋಲು ಕಂಡರು.

ಅವರ ಪ್ರಥಮ ಚುನಾವಣೆ ಕಲಬುರಗಿ ಮಹಾನಗರ ಪಾಲಿಕೆ ಸದಸ್ಯರಾಗುವ ಮೂಲಕ ಗೆಲುವು, ನಂತರ ಕಲಬುರಗಿ ಜಿಲ್ಲೆಯ ಜೇವರ್ಗಿ ತಾಲೂಕಿನ ವಿಧಾನಸಭಾ ಕ್ಷೇತ್ರದಿಂದ ಸತತವಾಗಿ ಎಂಟು ಬಾರಿ ಶಾಸಕರಾಗಿ ಆಯ್ಕೆಯಾಗಿದ್ದಾರೆ. ಒಂದು ಬಾರಿ ಕಲಬುರಗಿ ಲೋಕಸಭಾ ಸದಸ್ಯರಾಗಿ, ಇನ್ನೊಂದು ಬಾರಿ ಬೀದರ್ ಲೋಕಸಭಾ ಸದಸ್ಯರಾಗಿ ಗೆಲುವು ಸಾಧಿಸಿದ್ದಾರೆ. ನಂತರ ಅವರು ರಾಜಕೀಯವಾಗಿ ಹಂತ ಹಂತವಾಗಿ ಕಾಂಗ್ರೆಸ್ ಪಕ್ಕದಲ್ಲಿ ಮತ್ತು ಸರ್ಕಾರದಲ್ಲಿ ಬೆಳೆದು ನಾಯಕರಾದ್ದರು. ಜಿಲ್ಲಾ ಕಾಂಗ್ರೆಸ್ ನಿಂದ ಹಂತ ಹಂತವಾಗಿ ಪಕ್ಷದ ಕೆಲಸ ಮಾಡಿದನ್ನು ಹೈಕಮಾಂಡ್ ಗುರುತಿಸಿ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ (KPCC) ಅಧ್ಯಕ್ಷರಾಗಿ ಮಾಡಿದರು. ಶಾಸಕರಾಗಿ ಕ್ಷೇತ್ರದ ಜನತೆಗೆ ಸೇವೆ ಮಾಡಿದರು. ನಂತರ ವಿರೋಧ ಪಕ್ಷದ ನಾಯಕರಾಗಿ ಕೆಲಸ ಮಾಡಿದ್ದಾರು, ಹಲವಾರು ಬಾರಿ ಕರ್ನಾಟಕ ಸರ್ಕಾರದಲ್ಲಿ ಸಚಿವರಾಗಿ ರಾಜ್ಯದ ಜನತೆ ಸೇವೆ ಮಾಡಿದ್ದಾರೆ.

ರಾಜ್ಯದ ನಾಲ್ಕು ಪ್ರಭಾವಿ ಮುಖ್ಯಮಂತ್ರಿಗಳಾಗಿದ ದಿ.ದೇವರಾಜ ಅರಸು, ದಿ. ಎಸ್. ಬಂಗಾರಪ್ಪ, ವೀರಪ್ಪ ಮೊಯ್ಲಿ, ಎಸ್. ಎಂ.ಕೃಷ್ಣ ಅವರ ಎಲ್ಲರ ಕಾಲದಲ್ಲಿ ಶಾಸಕರಾಗಿ, ಸಚಿವರಾಗಿ, ಸಚಿವ ಸಂಪುಟ ಸಚಿವರಾಗಿ ಕಾರ್ಯನಿರ್ವಾಹಿಸಿದ್ದಾರೆ. ಹಲವಾರು ಖಾತೆಯ ಸಚಿವರು ಆಗಿದ್ದರು. ಗೃಹ ಸಚಿವರಾಗಿ, ಲೋಕೋಪಯೋಗಿ ಮಂತ್ರಿಯಾಗಿ, ಕಂದಾಯ ಸಚಿವರಾಗಿ, ಅಬಕಾರಿ, ಸಮಾಜ ಕಲ್ಯಾಣ ಮಂತ್ರಿಯಾಗಿ ಮತ್ತು ನಗರಾಭಿವೃದ್ಧಿ ಸಚಿವರಾಗಿ ಇನ್ನೂ ಹಲವಾರು ಖಾತೆಯ ಮಂತ್ರಿಗಳಾಗಿ ಸೇವೆ ಸಲ್ಲಿಸಿದ್ದಾರೆ. ನಂತರ ಅವರೆ ಕರ್ನಾಟಕ ರಾಜ್ಯದ 17 ನೇಯ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದರು. ಅವರು ಸುಮಾರು 20 ತಿಂಗಳು ಕಾಲ ಸಮ್ಮಿಶ್ರ ಸರ್ಕಾರ ನಡೆಸಿದ ಕೀರ್ತಿ ದಿ.ಧರ್ಮಸಿಂಗ್ ಅವರಿಗೆ ಸಲ್ಲುತ್ತದೆ. ಕಲ್ಯಾಣ ಕರ್ನಾಟಕದ ಹೆಮ್ಮೆಯ ನಾಯಕರು ರಾಮ- ಲಕ್ಷ್ಮಣ, ಆಪ್ತ-ಮಿತ್ರ, ಲವ- ಕುಶ ಎಂದು ರಾಜ್ಯದ ಜನರು ಧರ್ಮಸಿಂಗ್ ಮತ್ತು ಮಲ್ಲಿಕಾರ್ಜುನ ಖರ್ಗೆ ಅವರಿಗೆ ಕರೆಯುತ್ತಿದ್ದರು.

ರಾಜಕೀಯ ಜೀವನದಲ್ಲಿ ಹೆಸರು ಮಾಡಿದರು. ನಮ್ಮ ಭಾಗದಲ್ಲಿ ಕಲಬುರಗಿಯಲ್ಲಿ ಹೈಕೋರ್ಟ್ ಪೀಠ, ಶ್ರೀರಂಗ ಪಟ್ಟಣದಿಂದ ಬೀದರ್ ವರೆಗೆ ರಸ್ತೆ, ವಿವಿಧ ಕಾಮಗಾರಿಗಳು, ಸರ್ಕಾರದ ಕಛೇರಿ ಮತ್ತು ಇತೀ ಕಟ್ಟಡಗಳು, ಆರೋಗ್ಯ, ಶಿಕ್ಷಣ, ಸಾಮಾಜಿಕ ಸೇವೆ ಮಾಡಿದ್ದಾರೆ. ಕೇಂದ್ರ ಸರ್ಕಾರದಲ್ಲಿ ನಮ್ಮ ಹೈದರಾಬಾದ್ ಕರ್ನಾಟಕ ಭಾಗದ ಸಂವಿಧಾನದ 371(J) ಕಲಂ ತಿದ್ದುಪಡಿ ಮಾಡಿದ ರೂವಾರಿಗಳು ಎನ್ನಬಹುದು. ಇಡೀ ಜೀವನ ಪೂರ್ತಿ ಒಂದೇ ರಾಜಕೀಯ ಕಾಂಗ್ರೆಸ್ ಪಕ್ಷಕ್ಕೆ ನಿಷ್ಠೆಯಾಗಿದ್ದು ಅತ್ಯಂತ ಶ್ಲಾಘನೀಯ ಮತ್ತು ಹೆಮ್ಮಯ ವಿಷಯವಾಗಿದೆ. ರಾಜ್ಯದಲ್ಲಿ ಎಲ್ಲಾ ರಾಜಕೀಯ ಪಕ್ಷದ ನಾಯಕರು ಮತ್ತು ಮುಖಂಡರಿಗೆ ದಿ.ಡಾ.ಎನ್.ಧರ್ಮಸಿಂಗ್ ಅವರು ಚಿರಪರಿಚಿತರು ಆಗಿದ್ದರು. ರಾಜ್ಯದ ಸಾಮಾನ್ಯ ಪ್ರಜೆಗಳಿಗೆ ಮತ್ತು ಕ್ಷೇತ್ರದ ಎಲ್ಲಾ ಕಾರ್ಯಕರ್ತರಿಗೆ ಆತ್ಮೀಯತೆಯಿಂದ ಮಾತನಾಡಿಸುವ ಮಹಾನ್ ವ್ಯಕ್ತಿ ಆಗಿದ್ದರು. ರಾಜಕೀಯದಲ್ಲಿ ಅತ್ಯಂತ ಸರಳ, ಸಜ್ಜನ, ರಾಜಕಾರಣಿಗಳು ಎಂದು ಹೇಳಲು ಹೆಮ್ಮೆ ಎನಿಸುತ್ತದೆ.

ಸಹೃದತೆಯ ರಾಜಕಾರಣಿಗಳಲ್ಲಿ ಇವರು ಒಬ್ಬರು ಎನ್ನಬಹುದು, ಇಡೀ ರಾಜ್ಯದ ನಾಯಕರು, ರಾಷ್ಟ್ರಮಟ್ಟದ ನಾಯಕರು ಮತ್ತು ಹೈಕಮಾಂಡ್ ನಲ್ಲಿ ಅವರ ಹೆಸರು ಮತ್ತು ಅವರ ಜೊತೆಗೆ ಉತ್ತಮ ಒಡನಾಟದವರು ಆಗಿದ್ದರು. ಕರ್ನಾಟಕ ರಾಜ್ಯದಲ್ಲಿ ಅತಿ ಹೆಚ್ಚು ಅಭಿಮಾನಿಗಳ ಬಳಗ ಹೊಂದಿದ ರಾಜಕಾರಣಿ ಎಂದರೆ ತಪ್ಪಾಗಲಾರದು. ಅಜಾತಶತ್ರು ಎಂಬ ಬಿರುದು ಅವರಿಗೆ ಸಲ್ಲುತ್ತದೆ.

ಮಾಜಿ ಮುಖ್ಯಮಂತ್ರಿ ದಿ.ಡಾ.ಎನ್. ಧರ್ಮಸಿಂಗ್ ಅವರು ಕಲಬುರಗಿಯಲ್ಲಿ ಅವರ ಆತ್ಮೀಯ ಬಳಗ ಇತ್ತು. ಮಾಜಿ ವಿಧಾನ ಪರಿಷತ್ ಸದಸ್ಯರಾದ ಅಲ್ಲಮಪ್ರಭು ಪಾಟೀಲ, ಸಿ.ಬಿ.ಪಾಟೀಲ ಓಕಳಿ, ನಾರಾಯಣರಾವ ಕಾಳೆ, ಜವಳಕರ್, ಜಾಹೀಗಿದಾರ, ದುಮ್ಮದ್ರಿ ಶಾಂತಗೌಡ, ಸೀರಿ, ಅಬ್ದುಲ್ ಸತಾರ್, ಭೈಲಪ್ಪ ನೆಲೋಗಿ, ಶಿವಶರಣಪ್ಪ ಕೋಬಾಳ, ದೇವಿಂದ್ರಪ್ಪ ಪೂಜಾರಿ, ಇನ್ನೂ ಅನೇಕ ಗ್ರಾಮದ ಗೌಡರು, ಮತ್ತು ಹಲವಾರು ನಾಯಕರು ಒಡನಾಡಿ ಆಗಿದ್ದರು ಎನ್ನಬಹುದು. ಇಂದಿನ ಆಧುನಿಕ ಯುಗದಲ್ಲಿ ಯುವಕರಿಗೆ ಧರ್ಮಸಿಂಗ್ ಮಾದರಿ ಆಗಬಹುದು. ಆದರೆ ಈಗ ಅವರ ನೆನಪು ಮಾತ್ರ.

ಮಾಜಿ ಮುಖ್ಯಮಂತ್ರಿ ದಿ.ಡಾ.ಎನ್. ಧರ್ಮಸಿಂಗ್ ಅವರ 84ನೇಯ ವರ್ಷದ ಜನ್ಮ ದಿನ. ದಿನಾಂಕ 25.12.2020 ಶುಕ್ರವಾರ ಕುಟುಂಬಕ್ಕೆ ಸೀಮಿತವಾಗದೆ. ಸಾರ್ವಜನಿಕವಾಗಿ ನಡೆಯಲಿದೆ. ಕೊರೋನಾ ಎಂಬ ವೈರಸ್ ನಿಂದ. ಕೋವಿಡ್19, ಸಾಮಾಜಿಕ ಅಂತರ, ಮಾಸ್ಕ್ ಕಡ್ಡಾಯವಾಗಿ ಧರಿಸಿ, ಸ್ಯಾನಿಟೆಜರ್ ಉಪಯೋಗಿಸಿ, ಆರೋಗ್ಯ ಕಾಪಾಡಿಕೊಳ್ಳುವುದರ ಜೊತೆಗೆ ಸರಳವಾಗಿ ಅವರ ಜನ್ಮ ದಿನಾಚರಣೆ ಕಾರ್ಯಕ್ರಮಗಳು ನಡೆಯಲಿದೆ. ಅವರ ಅಭಿಮಾನಿ ಬಳಗ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕಾಗಿ ವಿನಂತಿ.

– ಬಿ.ಎಂ.ಪಾಟೀಲ ಕಲ್ಲೂರ
9845268676.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here