ಸುರಪುರ: ತಾಲೂಕು ನೇಕಾರರ ಸೌಹಾರ್ಧ ಸಹಕಾರ ಸಂಘದ ಮೊದಲ ವಾರ್ಷಿಕ ಸಮಾನ್ಯ ಸಭೆಯನ್ನು ನಗರದ ತಿಮ್ಮಾಪುರದ ಶ್ರೀ ಚೌಡೇಶ್ವರಿ ದೇವಸ್ಥಾನದ ಆವರಣದಲ್ಲಿ ನಡೆಸಲಾಯಿತು.
ಸಭೆಯನ್ನು ಉದ್ಘಾಟಿಸಿದ ಹಿರಿಯ ಸಹಕಾರಿ ಧುರಿಣ ರಾಜಾ ರಂಗಪ್ಪ ನಾಯಕ ಪ್ಯಾಪ್ಲಿ ಮಾತನಾಡಿ, ಸಹಕಾರ ರಂಗ ಪ್ರತಿಯೊಂದು ಸಮುದಾಯದ ಬೆಳವಣಿಗೆಗೆ ತುಂಬಾ ಅವಶ್ಯಕವಾಗಿದೆ.ಆ ನಿಟ್ಟಿನಲ್ಲಿ ತಾಲೂಕು ನೇಕಾರರ ಸೌಹಾರ್ಧ ಸಹಕಾರಿ ಸಂಘ ಒಂದೇ ವರ್ಷದಲ್ಲಿ ಉತ್ತಮವಾದ ಬೆಳವಣಿಗೆಯನ್ನು ಕಂಡಿರುವುದು ಸಂತೋಷದ ಸಂಗತಿಯಾಗಿದೆ ಎಂದರು.
ಅಧ್ಯಕ್ಷತೆ ವಹಿಸಿದ್ದ ವೀರಸಂಗಪ್ಪ ಹಾವೇರಿ ಮಾತನಾಡಿ,ಯಾವುದೇ ಒಂದು ಸಹಕಾರಿ ಸಂಘ ಬೆಳೆಯಲು ಸದಸ್ಯರ ಸಹಕಾರ ತುಂಬಾ ಮುಖ್ಯ ಹಾಗು ಸಾಲ ಪಡೆದವರು ಸಕಾಲಕ್ಕೆ ಮರಳಿಸಿ ಮತ್ತೆ ಸಾಲ ಪಡೆಯುವುದರಿಂದ ಆ ಸಂಘದ ಬೆಳವಣಿಗೆಗೆ ಉತ್ತಮವಾದ ನೆರವು ಸಿಗಲಿದೆ.ಆ ನಿಟ್ಟಿನಲ್ಲಿ ನಮ್ಮ ಸಂಘದ ಎಲ್ಲಾ ಸದಸ್ಯರು ಸಂಘದ ಬೆಳವಣಿಗೆಗೆ ಸಹಕಾರ ನೀಡಬೇಕೆಂದರು.
ನಂತರ ಎಸ್‌ಎಸ್‌ಎಲ್‌ಸಿ ಮತ್ತು ಪಿಯುಸಿಯಲ್ಲಿ ಉತ್ತಮ ಅಂಕಗಳಿಸಿದ ಸಮುದಾಯದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರವನ್ನು ನೀಡಿ ಗೌರವಿಸಲಾಯಿತು.ಅಲ್ಲದೆ ಎಮ್‌ಎಸ್‌ಸಿ ಪದವಿಯಲ್ಲಿ ಕಲಬುರ್ಗಿ ವಿಶ್ವವಿದ್ಯಾಲಯದಿಂದ ಚಿನ್ನದ ಪದಕ ಪಡೆದ ರುಕ್ಮಾಫುರ ಗ್ರಾಮದ ಯುವಕ ಅಭಿಷೇಕ ಬಡಗಾಗೆ ವಿಶೇಷವಾಗಿ ಸನ್ಮಾನಿಸಿ ಗೌರವಿಸಲಾಯಿತು.
ಸಂಘದ ಎಲ್ಲಾ ನಿರ್ದೇಶಕರು ಮತ್ತು ಷೇರುದಾರರು ಉಪಸ್ಥಿತರಿದ್ದರು.ಸಂಗಪ್ಪ ಸಿರಗೋಜಿ ಕಾರ್ಯಕ್ರಮ ನಿರೂಪಿಸಿದರು,ರಾಚಪ್ಪ ಹಾವೇರಿ ವಂದಿಸಿದರು.