ವಾಡಿ: ಏರಡನೇ ಹಂತದ ಗ್ರಾಮ ಪಂಚಾಯತಿ ಚುನಾವಣೆಗೆ ಡಿ.೨೭ ರಂದು ಮತದಾನ ನಡೆಯಲಿದ್ದು, ತಾಲೂಕು ಆಡಳಿತ ಮತದಾನ ಚೀಟಿಗಳನ್ನೆ ವಿರಣೆ ಮಾಡಿಲ್ಲ ಎಂದು ಲಾಡ್ಲಾಪುರ ಗ್ರಾಮದ ಬಿಜೆಪಿ ಮುಖಂಡ ಶಾಂತಕುಮಾರ ಎಣ್ಣಿ ದೂರಿದ್ದಾರೆ.
ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು ಚುನಾವಣಾಧಿಕಾರಿಗಳ ನಿರ್ಲಕ್ಷ್ಯ ಧೋರಣೆ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಪ್ರತಿ ಚುನಾವಣೆಯಲ್ಲಿ ಅಂಗನವಾಡಿ ಕಾರ್ಯಕರ್ತೆಯರ ಮೂಲಕ ಮತದಾರರಿಗೆ ಮತಗಟ್ಟೆ ಸಂಖ್ಯೆ ಮತ್ತು ಮತದಾರ ಪಟ್ಟಿಯ ಸಂಖ್ಯೆಯ ಮಾಹಿತಿ ಇರುವ ಚೀಟಿ ಮನೆ ಮನೆಗೂ ತೆರಳಿ ವಿತರಿಸಲಾಗುತ್ತಿತ್ತು.
ಆದರೆ ಚುನಾವಣೆಗೆ ಮೂರೇ ದಿನ ಬಾಕಿ ಉಳಿದಿದೆಯಾದರೂ ಯಾರೊಬ್ಬರೂ ಮತದಾನ ಚೀಟಿ ವಿತರಿಸಲು ಮುಂದಾಗಿಲ್ಲ ಎಂದು ಆರೋಪಿಸಿದ್ದಾರೆ.