ಕೋಲಾರ: ಶನಿವಾರ ಸಂತೆ ಹೋಬಳಿಗೆ ಸೇರಿದ ಗೋಪಾಲಪುರ ಕ್ಯಾಥೋಲಿಕ್ ಚರ್ಚ್‌ನ ಕ್ರೈಸ್ತ ಬಾಂಧವರು ಸರ್ಕಾರದ ನಿಯಮದಂತೆ ಕ್ರಿಸ್ ಮಸ್ ಹಬ್ಬವನ್ನು ವಿಜ್ರಂಭಣೆಯಿಂದ ಆಚರಣೆ ಮಾಡಲಾಯಿತು.
ಚರ್ಚ್‌ನ ದೀಪಾಲಂಕೃತದಿಂದ ಮತ್ತು ಸ್ಟಾರ್ ನಿಂದ ಕಂಗೊಳಿಸುತ್ತಿತ್ತು. ರಾತ್ರಿ 10.30 ಗಂಟೆಗೆ ಕ್ರಿಸ್ಮಸ್ ಗೀತಾ ಭಜನೆಯಿಂದ ಪ್ರಾರಂಭವಾಯಿತು. 11 ಗಂಟೆಗೆ ದೇವಾಲಯದ ಬಲಿಪೂಜೆ ಜರುಗಿದ್ದು, ಬಾಲಯೇಸುವಿನ ಪ್ರತಿಮೆಯನ್ನು ಸುಂದರವಾಗಿ ಅಲಂಕೃತಗೊಂಡ ಗೋದಲಿಯೊಳಗೆ ಇಟ್ಟು ಆರಾಧಿಸಲಾಯಿತು.
ಈ ಸಂದರ್ಭದಲ್ಲಿ ಚರ್ಚ್ ಫಾದರ್ ಜಾಕಪ್ ಕೊಳನೂರು ಮಾತನಾಡಿ ಕ್ರೈಸ್ತ ಬಂದರಿಗೆ ಕ್ರಿಸ್ಮಸ್ ಹಬ್ಬದ ಶುಭಾಶಯ ತಿಳಿಸಿದ ಅವರು ಕೊರೊನಾ ಕಾಯಿಲೆಯಿಂದ ಯಾರಿಗೂ ಬಾಧಿಸದಂತೆ ಪ್ರಾರ್ಥಿಸಿದರು. ಚರ್ಚೆಗೆ ಬರುವ ಭಕ್ತಾದಿಗಳಿಗೆ ಕೈಗಳಿಗೆ ಸ್ಯಾನಿಟೈಸರ್ ಸಿಂಪಡಿಸಿ, ಮಾಸ್ ಕಡ್ಡಾಯ ಮಾಡುವ ಮೂಲಕ ಸರ್ಕಾರದ ನಿಯಮದಂತೆ ಹಬ್ಬ ಆಚರಿಸಲಾಯಿತು.
ಈ ವೇಳೆಯಲ್ಲಿ ಕೇಕ್ ಕತ್ತರಿಸಿ ಹಬ್ಬವನ್ನು ಸರಳ ರೀತಿಯಲ್ಲಿ ಆಚರಿಸಿ ಭಗವಂತ ಯೇಸುವಿಗೆ ಸ್ಮರಿಸಲಾಯಿತು.