“ಜಾತಿ ವ್ಯವಸ್ಥೆಗೆ ಪ್ರೇಮ ವಿರಾಗಿಯ ಸವಾಲು”

0
68

 

ಮಂಜುನಾಥ ದಾಸನಪುರ

Contact Your\'s Advertisement; 9902492681

ಪ್ರೀತಿ…

ಅವಳ ಮುಂಗುರುಳು

ನನ್ನದೇ ಕುಡಿಮೀಸೆ ಸಂಧಿಸಿದ ಸಮಯ.

ಪ್ರೀತಿ …

ಬಡವನ ಮನೆಯ ವಾರಾಂತ್ಯದ

ಬಾಡೂಟದಂತೆ

ಅಂದು ಮನೆಯಲ್ಲ ಸಂಭ್ರಮ

ಮಕ್ಕಳ ಕಣ್ಣಲ್ಲಿ ಉತ್ಸಾಹ.

ಇಲ್ಲಿ ತರುಣ ಕವಿ ಪ್ರೀತಿಯನ್ನು ಸಂಗಾತಿಯ ಸಾಂಗತ್ಯದಲ್ಲೂ, ಬಡವನ ಮನೆಯ ಬಡೂಟದಲ್ಲೂ ಕಾಣುತ್ತಿದ್ದಾನೆ. ಇವತ್ತಿನ ಆಧುನಿಕ ಯುಗದಲ್ಲಿ ಪ್ರೀತಿಯನ್ನ ಬಡವನ ಮನೆಯ ವಾರಂತ್ಯದ ಬಾಡೂಟದಲ್ಲಿ ಕಾಣುವುದಿದೆಯಲ್ಲ; ಇವತ್ತಿನ ಮಧ್ಯಮ ವರ್ಗದ ಯುವ ಜನತೆಯ ಚಿಂತನೆಗೆ ಚಿಕಿತ್ಸೆಯನ್ನು ನೀಡುವಂತಹದ್ದಾಗಿದೆ….

ಯುವ ಕವಿ ಎಂ.ಜಿ.ಕೃಷ್ಣಮೂರ್ತಿ ಇಂಡ್ಲವಾಡಿ ತಮ್ಮ ಪ್ರೇಮ ವಿರಾಗಿಯ ನಡುಗತ್ತಲ ಕವಿತೆಯೆಂಬ ಕವನ ಸಂಕಲವನ್ನು ಪ್ರಕಟಿಸಿದ್ದಾರೆ. ಕವಿ ತನ್ನ ಯೌವ್ವನದಲ್ಲಿನÀ ಪ್ರೀತಿ, ಪ್ರಣಯದ ಭಾವನೆ, ಚಳವಳಿಯ ಒಡನಾಟದ ಅರಿವು, ಸ್ನೇಹಿತೆಯ ಸಾಮೀಪ್ಯದ ಪ್ರೀತಿಯ ಪ್ರಸಂಗಗಳನ್ನು ಧ್ಯಾನಿಸಿ ಕವಿತೆಯಾಗಿಸಿದ್ದಾರೆ.

ಕವನ ಸಂಕಲದಲ್ಲಿರುವ ಒಂದೊಂದೇ ಕವಿತೆಗಳನ್ನು ವಿಮರ್ಶಿಸಬೇಕಾದ ಕಾಲಘಟ್ಟದಲ್ಲಿ ನಾವಿಲ್ಲ. ಇವತ್ತಿನ ಹಲವು ಸಂದಿಗ್ಧ, ಆತಂಕದ ಸಂದರ್ಭದಲ್ಲಿ ಯುವಕನೊಬ್ಬ ಕವಿತೆಗಾಗಿ ಧ್ಯಾನಿಸುವುದೇ ಹೆಚ್ಚುಗಾರಿಕೆಯ ಸಂದರ್ಭವಿದು. ಆಳುವವರೇ ಕತ್ತಿ ಮಸಿಯುತ್ತಿರುವ ಸಂದರ್ಭದಲ್ಲಿ, ತೂಗು ಕತ್ತಿಯ ನೆರಳಿನಲ್ಲಿ ಪ್ರೀತಿಯ ಕುರಿತು ಮಾತನಾಡುವುದೇ ಕವಿಯೊಬ್ಬನ ಶ್ರೇಷ್ಟತೆಯ ಮಾನದಂಡವಾಗಿದೆ.

ಕವಿ ಎಂ.ಜಿ.ಕೃಷ್ಣಮೂರ್ತಿ ಇಂಡ್ಲವಾಡಿ ತನ್ನ ಪ್ರೇಮ ವಿರಾಗಿಯ ನಡುಗತ್ತಲ ಕವಿತೆ ಕವನ ಸಂಕಲದ ಕುರಿತು, ‘ನನ್ನ ಕವಿತೆಗಳು ನಾ ತಲುಪದ ತಾಣಗಳನ್ನು ಸಂಧಿಸಿದ ವಾಹಕ’ಗಳೆಂದು ಅಭಿಪ್ರಾಯಿಸಿದ್ದಾನೆ. ಭಾರತದಂತಹ ಜಾತಿ, ಮೌಢ್ಯವಸ್ಥೆಯನ್ನೇ ಹಾಸಿಹೊದ್ದು ಕೊಂಡಿರುವ ದೇಶದಲ್ಲಿ ಯುವಕ, ಯುವತಿಯರು ತಮ್ಮಲ್ಲಿ ಮೂಡುವ ಪ್ರೇಮವನ್ನು ಮುಕ್ತವಾಗಿ ವ್ಯಕ್ತಪಡಿಸಲು ಸಾಧ್ಯವೇ?. ಇಂತಹ ಹೊತ್ತಿನಲ್ಲಿ ಕವಿ ತನ್ನ ಕವತೆಯ ಮೂಲಕ, ಚಿತ್ರಕಾರ ತನ್ನ ಕಲಾಕೃತಿಯ ಮೂಲಕ ತನ್ನ ಭಾವನೆಗಳಿಗೆ ಸೃಜನಶೀಲತೆ ಕೊಡಲು ಹವಣಿಸುತ್ತಾರೆ. ಅಂತಹ ಕವನ ಸಂಕಲನವೇ ಪ್ರೇಮ ವಿರಾಗಿಯ ನಡುಗತ್ತಲ ಕವಿತೆ ಕೃತಿಯಾಗಿದೆ.

ಯುವ ಕವಿ ಎಂಜಿಕೆ ಇಲ್ಲಿಯವರೆಗೂ ತಾವು ಒಡನಾಡಿರುವ ಸ್ನೇಹ ವಲಯ, ಸಮಾಜದ ಕುರಿತು ಪ್ರೇಮ ವಿರಾಗಿಯ ನಡುಗತ್ತಲ ಕವಿತೆ ಕವನ ಸಂಕಲನದ ಮೂಲಕ ಸುಮಾರು 53 ಕವಿತೆಗಳನ್ನು ಓದುಗರಿಗೆ ನೀಡಿದ್ದಾರೆ. ಅರಮನೆ, ಬರಿದಾದ ಮನ, ಶಾಂತಿ ಮಂತ್ರ, ಗೋಡೆ ಮಾಸಿದೆ, ಹೊಸ ಹನಿಯ ಮುತ್ತು ಸೇರಿದಂತೆ ಹಲವು ಕವಿತೆಯ ಶೀರ್ಷಿಕೆಗಳು ಓದಲು ಪ್ರೇರಿಪಿಸದೆ ಇರದು.

ಇನ್ನು ಈ ಕವನ ಸಂಕಲನಕ್ಕೆ ಹಿರಿಯ ರಂಗಕರ್ಮಿ ಕೆ.ವೈ.ನಾರಾಯಣಸ್ವಾಮಿ ಮುನ್ನುಡಿ ಬರೆದಿದ್ದು, ಪದಕ್ಕೆ ಪದವಿಟ್ಟು ಕವಿತೆಯ ರೂಪದ ಪದ್ಯ ಸಾಲುಗಳನ್ನು ಬರೆಯುವುದು ಸುಲಭ. ಈ ಸುಲಭ ಮಾರ್ಗದಿಂದ ಕಾವ್ಯ ಚಮತ್ಕಾರ ಹಾದಿಯನ್ನು ಕವಿ ಸಂಂಧಿಸಬೇಕಿರುವ ಕಟುವಾದ ಸತ್ಯವನ್ನು ಕವಿ ಮನಗಾಣಬೇಕು. ಉಕ್ಕುಕ್ಕಿ ಬರುವ ಭಾವ ಪ್ರವಾಹಗಳಿಗೆ ತಡೆ ಒಡ್ಡಿ ಕಾಸಿ ಸೋಸಿ ಅನುಭವವನ್ನು ಅಪರಂಜಿ ಮಾಡುವ ಕವಿತಾ ರಚನೆಯ ಅಸಲು ಕಸುಬವನ್ನು ತಮ್ಮ ಮುಂದಿನ ಕವಿತೆಗಳ ರಚನೆಯ ಸಂದರ್ಭವನ್ನು ಪಾಲಿಸಬೇಕೆಂದು ಕವಿ ಸಲಹೆ ನೀಡಿದ್ದಾರೆ. ಇವರ ಮುನ್ನುಡಿಯು ಯುವ ಕವಿಗಳಿಗೆ ಮಾರ್ಗದರ್ಶನದಂತಿದೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here