ಸುರಪುರ: ಬಸವೇಶ್ವರ ಪತ್ತಿನ ಸಹಕಾರ ಸಂಘದ ವಾರ್ಷಿಕ ಮಹಾಸಭೆ

0
35

ಸುರಪುರ: ನಗರದ ವೀರಶೈವ ಕಲ್ಯಾಣ ಮಂಟಪದಲ್ಲಿ ಬಸವೇಸ್ವರ ಪತ್ತಿನ ಸಹಕಾರ ಸಂಘದ ವಾರ್ಷಿಕ ಮಹಾಸಭೆಯನ್ನು ನಡೆಸಲಾಯಿತು.ಕಾರ್ಯಕ್ರಮದ ಆರಂಭದಲ್ಲಿ ಬಸವೇಶ್ವರರ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡಿ ನಮಿಸಿ ನಂತರ ಇತ್ತೀಚಿಗೆ ನಿಧನರಾದ ಎಲ್ಲಾ ಗಣ್ಯರಿಗೆ ಎರಡು ನಿಮಿಷಗಳ ಮೌನಾಚರಣೆಯೊಂದಿಗೆ ಶ್ರದ್ಧಾಂಜಲಿ ಸಲ್ಲಿಸಲಾಯಿತು.

ನಂತರ ನಡೆದ ವಾರ್ಷಿಕ ವರದಿ ಮಂಡನೆಯಲ್ಲಿ ಸಂಘದ ಅಧ್ಯಕ್ಷ ಸುರೇಶ ಸಜ್ಜನ್ ಮಾತನಾಡಿ,ಯಾವುದೇ ಸಹಕಾರ ಸಂಘ ಬೆಳೆಯಬೇಕಾದರೆ ಷೇರುದಾರರ ಮತ್ತು ಸದಸ್ಯರ ಸಹಕಾರ ತುಂಬಾ ಮುಖ್ಯ ಅದರಂತೆ ನಮ್ಮ ಪತ್ತಿನ ಸಹಕಾರ ಸಂಘದ ಎಲ್ಲರ ನೆರವಿನಿಂದ ಸಂಘವು ಉತ್ತಮವಾಗಿ ಕೆಲಸ ಮಾಡುತ್ತಿದೆ ಎಂದರು.

Contact Your\'s Advertisement; 9902492681

2019-20ನೇ ಸಾಲಿನಲ್ಲಿ ಕೊರೊನಾ ಹಾವಳಿಯಿಂದಾಗಿ ವ್ಯವಹಾರವು ಒಂದಿಷ್ಟು ಸಂಕಷ್ಟಕ್ಕೆ ಸಿಲುಕಿದೆ ಇದರಿಂದಾಗಿ ಸಾಲ ಪಡೆದವರಿಗು ಸಕಾಲಕ್ಕೆ ಮರಳಿಸಲು ಸಾಧ್ಯವಾಗುತ್ತಿಲ್ಲ ಆದರು ಸಾಲ ಪಡೆದವರು ಶೀಘ್ರವಾಗಿ ಮರಳಿಸಿದರೆ ಸಂಘದ ಬೆಳವಣಿಗೆಗೆ ಅನುಕೂಲವಾಗಲಿದೆ ಎಂದರು.

ಇಂತಹ ಲಾಕ್‍ಡೌನ್ ಸಂದರ್ಭದಲ್ಲಿಯೂ ನಮ್ಮ ಸಂಘವು ಸುರಪುರ ಕೆಂಭಾವಿ ಹುಣಸಗಿ ಕಕ್ಕೇರಾ ಮತ್ತು ಕೊಡೇಕಲ್ ಶಾಖೆಗಳೆಲ್ಲವು ಸೇರಿ 12 ಲಕ್ಷ 51 ಸಾವಿರ 751 ರೂಪಾಯಿಗಳ ನಿವ್ವಳ ಲಾಭ ಪಡೆದಿದೆ ಎಂದರು.

ಅಲ್ಲದೆ ಇದೇ ಸಂದರ್ಭದಲ್ಲಿ 2020-21ನೇ ಸಾಲಿನಲ್ಲಿ ನಮ್ಮ ಸಂಘವು 1 ಕೋಟೊ 69 ಲಕ್ಷ 19 ಸಾವಿರದ 800 ರೂಪಾಯಿಗಳ ಲಾಭದ ನಿರೀಕ್ಷೆಯನ್ನು ಹೊಂದಿದೆ,ಈ ಲಾಭ ಬರಬೇಕಾದರೆ ಎಲ್ಲಾ ನಿರ್ದೇಶಕರು ಮತ್ತು ಸಲಹಾ ಸಮಿತಿ ಹಾಗು ಷೇರುದಾರರ ಸಹಕಾರ ತುಂಬಾ ಮುಖ್ಯವಾಗಿದೆ. ಆದ್ದರಿಂದ ಎಲ್ಲರ ಸಹಕಾರದಿಂದ ಮುಂದಿನ ವರ್ಷದಲ್ಲಿ ಉತ್ತಮ ಲಾಭದತ್ತ ಬ್ಯಾಂಕ್ ಕೊಂಡೊಯ್ಯುವುದಾಗಿ ತಿಳಿಸಿದರು.

ನಾನು ನಮ್ಮ ಬಸವೇಶ್ವರ ಪತ್ತಿನ ಸಹಕಾರ ಸಂಘದ ಪ್ರತಿನಿಧಿಯಾಗಿ ಈಬಾರಿಯ ಕಲಬುರ್ಗಿ ಯಾದಗಿರಿ ಡಿಸಿಸಿ ಬ್ಯಾಂಕ್ ನಿರ್ದೇಶಕ ಸ್ಥಾನದ ಚುನಾವಣೆಗೆ ಸ್ಪರ್ಧಿಸಲು ಅವಕಾಶ ನೀಡಿದ ಹಾಗು ಅವಿರೋಧವಾಗಿ ಆಯ್ಕೆಯಾಗಲು ಕಾರಣಿಭೂತರಾದ ಎಲ್ಲಾ ನಿರ್ದೇಶಕರು ಮತ್ತು ಸಲಹಾ ಸಮಿತಿ ಸದಸ್ಯರು ಮತ್ತು ತಮ್ಮೆಲ್ಲರಿಗು ಧನ್ಯವಾದ ಸಲ್ಲಿಸುವುದಾಗಿ ತಿಳಿಸಿದರು.

ಕಾರ್ಯಕ್ರಮದ ವೇದಿಕೆ ಮೇಲೆ ಸಂಘದ ಉಪಾಧ್ಯಕ್ಷರಾದ ಮನೋಹರ ಎಂ.ಜಾಲಹಳ್ಳಿ ನಿರ್ದೇಶಕರಾದ ಹೆಚ್.ಸಿ.ಪಾಟೀಲ್ ಸೂಗುರೇಶ ವಾರದ ವಿಶ್ವರಾಧ್ಯ ಎಲ್.ಹುಗ್ಗಿ ಡಿ.ಸಿ.ಪಾಟೀಲ್ ಕೆಂಭಾವಿ ರವೀಂದ್ರ ಅಂಗಡಿ ಕೊಡೇಕಲ್ ನೊಂದಯ್ಯಸ್ವಾಮಿ ಮಠಪತಿ ಶರಣಪ್ಪ ಕಳ್ಳಿಮನಿ ವಿಜಯಕುಮಾರ ಬಂಡೋಳಿ ಎಸ್.ಎಮ್.ಕನಕರಡ್ಡಿ ಸಂಗನಬಸಪ್ಪ ಪಾಟೀಲ್ ಸಿದ್ದಲಿಂಗಯ್ಯಸ್ವಾಮಿ ಕಡ್ಲಪ್ಪನಮಠ ಬಸಲಿಂಗಯ್ಯ ಹಿರೇಮಠ ಹೊನ್ನಪ್ಪ ದೇಸಾಯಿ ಜಯಲಲಿತ ಪಾಟೀಲ್ ಜಗದೀಶ ಪಾಟೀಲ ವೀರೇಂದ್ರ ಕುಮಾರ ನಿಷ್ಠಿ ದೇಶಮುಖ ಇದ್ದರು.

ಕಾರ್ಯಕ್ರಮದಲ್ಲಿ ಬಸವರಾಜ ಜಮದ್ರಖಾನಿ ಶಿವಶರಣಪ್ಪ ಸಾಹುಕಾರ ಸಂಗಣ್ಣ ಎಕ್ಕೆಳ್ಳಿ ಸೋಮಶೇಖರ ಶಾಬಾದಿ ಮಂಜುನಾಥ ಜಾಲಹಳ್ಳಿ ಮಂಜುನಾಥ ಬಳಿ ಪ್ರಕಾಶ ಕಕ್ಕೇರಾ ಸೇರಿದಂತೆ ಎಲ್ಲಾ ಉಪ ಸಮಿತಿ ಸದಸ್ಯರು ಹಾಗು ಸಲಹಾ ಸಮಿತಿ ಸದಸ್ಯರು ಮತ್ತು ಷೇರುದಾರರು ಭಾಗವಹಿಸಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here