ಕಲಬುರಗಿ: ಫುಟ್ಬಾಲ್ ಆಟವು ವಿಶ್ವದ ಅತ್ಯಂತ ಜನಪ್ರಿಯ ಕ್ರೀಡೆಯೆಂದು ಪರಿಗಣಿಸಲಾಗಿದೆ ಎಂದು ಗುಲ್ಬರ್ಗ ವಿಶ್ವವಿದ್ಯಾಲಯದ ಪ್ರಭಾರ ಕುಲಪತಿ ಪ್ರೊ, ಚಂದ್ರಕಾಂತ ಯಾತನೂರ ಹೇಳಿದರು. ಗುಲ್ಬರ್ಗ ಜಿಲ್ಲಾ ಫುಟ್ಬಾಲ್ ಅಸ್ಸೋಸಿಯೆಷನ್ ಮತ್ತು ಗುಲ್ಬರ್ಗ ವಿವಿ ದೈಹಿಕ ಶಿಕ್ಷಣ ವಿಭಾಗದ ಸಹಯೋಗದಲ್ಲಿ ನಡೆದ ಫುಟ್ಬಾಲ್ ಪಂದ್ಯಾವಳಿಯನ್ನು ಗಿಡಕ್ಕೆ ನೀರು ಹಾಕುವ ಮೂಲಕ ಉದ್ಘಾಟಿಸಿ ಅವರು ಮಾತನಾಡಿದರು.
ಕೆಲವು ಜನರಿಗೆ, ಇದು ಕೇವಲ ಒಂದು ಹವ್ಯಾಸ ಅಥವಾ ಒಂದು ಭಾವೋದ್ರೇಕ, ಮತ್ತು ಜೀವನದ ಅರ್ಥ ಇಲ್ಲಿದೆ. ಆಟಗಾರರು ಮತ್ತು ಅಭಿಮಾನಿಗಳು ಎಲ್ಲಾ ತನ್ನ ಬಿಡುವಿನ ಸಮಯದಲ್ಲಿ ಅತ್ಯಾಕರ್ಷಕ ಕ್ರೀಡಾ ವಿನಿಯೋಗಿಸಲು ಮಾಡುತ್ತದೆ. ಅಂತರರಾಷ್ಟ್ರೀಯ ಫುಟ್ಬಾಲ್ ಡೇ ಡಿಸೆಂಬರ್ 10 ರಂದು ಆಚರಿಸಲಾಗುತ್ತಿದೆ. ಹೀಗಾಗಿ ಯುವಕರು ಅತಿ ಹೆಚ್ಚು ಕ್ರೀಡಾ ಮನೋಭಾವನೆ ಬೆಳೆಸಿಕೊಳ್ಳಬೇಕು ಎಂದು ಅವರು ಸಲಹೆ ನೀಡಿದರು.
ಗುಲ್ಬರ್ಗ ವಿಶ್ವವಿದ್ಯಾಲಯದ ದೈಹಿಕ ಶಿಕ್ಷಣ ವಿಭಾಗದ ನಿರ್ದೇಶಕ ಡಾ. ಎಂ. ಎಸ್. ಪಾಸೋಡಿ ಮಾತನಾಡಿ
ವಾಸ್ತವವಾಗಿ, ಇತಿಹಾಸ ಮತ್ತು ಅಭಿವೃದ್ಧಿಗೆ ಈ ಕ್ರೀಡೆಯ ಬಹಳ ಕುತೂಹಲಕಾರಿಯಾಗಿದೆ ಆರೋಗ್ಯವಾದ ದೇಹವಿದ್ದರೆ ಎಲ್ಲವೂ ಸರಳ. ಮನಸ್ಸು ಕೂಡ ಸಕಾರಾತ್ಮಕವಾಗಿರುತ್ತದೆ. ಆದರೆ ಹೊರಗೆ ಓಗಿ ಆಟ, ಬೆಟ್ಟ ಹತ್ತುವುದು ಮುಂತಾದ ಕ್ರಿಯೆಯಲ್ಲಿಯೂ ತೊಡಗಿಸಿಕೊಳ್ಳಿ. ಅಲ್ಲದೆ ಮೈದಾನದಲ್ಲಿ ಆಡುವುದರಿಂದ ನೀವು ಕಲಿಯುವುದು ಹೆಚ್ಚು. ಗೆಲ್ಲುವ ಅಥವಾ ಸೋಲುವುದರ ಅರಿವಾಗುತ್ತದೆ. ಕ್ರೀಡಾಂಗಣದಲ್ಲಿ ವ್ಯಕ್ತಿತ್ವ ರೂಪಿಸಿಕೊಳ್ಳಬಹುದು. ಮತ್ತೊಬ್ಬರ ಪ್ರತಿಭೆಯನ್ನು ಮೆಚ್ಚುವುದೂ ಸಾಧ್ಯವಾಗುತ್ತದೆ ಎಂದು ಅವರು ಹೇಳಿದರು.
ಕಲಬುರ್ಗಿ ಪೊಲೀಸ್ ಆಯುಕ್ತರಾದ ಎನ್ ಸತೀಶಕುಮಾರ, ಎಸ್ ಪಿ ಅರುಣ್ ರಂಗರಾಜನ್, ಡೆಪ್ಯುಟಿ ಕಮಿಷನರ್ ಆಫ್ ಪೊಲೀಸ್ ಡಿ. ಕಿಶೋರ್ ಬಾಬು, ಮಹಾನಗರ ಪಾಲಿಕೆ ಆಯುಕ್ತ ಸ್ನೇಹಲ್ ಎಸ್. ಲೋಖಂಡೆ, ಡಾ. ಆಕಾಶ, ಗುಲ್ಬರ್ಗ ವಿವಿ ಮೌಲ್ಯಮಾಪನ ಕುಲಸಚಿವ ಪ್ರೊ, ಸಂಜೀವಕುಮಾರ ಕೆ. ಎಂ., ಕಲಬುರ್ಗಿ ಪೊಲೀಸ್ ತರಬೇತಿ ಕಾಲೇಜು ಅಧೀಕ್ಷಕರು ಮತ್ತು ಪ್ರಿನ್ಸಿಪಾಲ ಯಡಾ ಮಾರ್ಟಿನ್, ಡಾ. ಹಣಮಂತ ಜಂಗೆ, ಡಾ. ಎನ್ ಜಿ ಕಣ್ಣೂರ, ಇತರರು ಇದ್ದರು.