ಭ್ರಷ್ಟ ಅಧಿಕಾರಿಗಳನ್ನು ಕೂಡಲೇ ಅಮಾನತ್ತು ಮಾಡಿ: ಸಾಯಬಣ್ಣಾ ಜಮಾದಾರ

0
41

ಕಲಬುರಗಿ: ಜಿಲ್ಲೆಯ ಉಪ ನೊಂದಣಿ ಇಲಾಖೆ, ಕೊಳಗೇರಿ ಅಭಿವೃದ್ಧಿ ಮಂಡಳಿ ಸೇರಿದಂತೆ ಹಲವಾರು ಸರ್ಕಾರಿ ಇಲಾಖೆಗಳಲ್ಲಿ ಭ್ರಷ್ಟಾಚಾರ ತಾಂಡವಾಡುತ್ತಿದ್ದು, ಕೂಡಲೇ ಸಂಭಂದಪಟ್ಟ ಅಧಿಕಾರಿಗಳನ್ನು ಅಮಾನತ್ತು ಮಾಡಬೇಕೆಂದು ಅಹಿಂದ ಚಿಂತಕರ ವೇದಿಕೆ ರಾಜ್ಯಾಧ್ಯಕ್ಷ ಸಾಯಬಣ್ಣಾ ಜಮಾದಾರ ಆಗ್ರಹಿಸಿದ್ದಾರೆ.

ಅವರು ನಗರದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿ, ಯಾರದೋ ಆಸ್ತಿಯನ್ನು ಯಾರಿಗೋ ಮಾರಾಟ ಮಾಡುವ ಪೃವತ್ತಿಯನ್ನು ಬೆಳೆಸಿಕೊಂಡಿದ್ದಾರೆ. ಇದರಿಂದ ಎಷ್ಟೋ ಜನ ಮನೆ ಇಲ್ಲದೇ ಕಂಗಾಲಿದ್ದಾರೆ. ಈ ದುಷ್ಕøತ್ಯವನ್ನು ಕೆಲ ರೂಪಾಯಿಗಳಿಗಾಗಿ ಅಧಿಕಾರಿಗಳು ಈ ಕೃತ್ಯವನ್ನು ಮಾಡುತ್ತಿದ್ದು, ಇದು ಯಾವ ನ್ಯಾಯ ಎಂದು ಪ್ರಶ್ನಿಸಿದರು. ಹಣಕ್ಕಾಗಿ ಕೊಳಗೇರಿ ನಿವಾಸಿಗಳ ಮನೆಗಳನ್ನು ಪುಡಾರಿಗಳಿಗೆ ಸರ್ಕಾರಿ ನೌಕರರ ಕುಟುಂಬಸ್ಥರಾಗಿ ಸೂಕ್ತ ದಾಖಲಾತಿ ಮತ್ತು ಸರ್ಕಾರದ ನಿಯಮಗಳನ್ನು ಪಾಲಿಸದೇ ಮಾರಾಟ ಮಾಡಿದ್ದಾರೆ ಎಂದು ಆರೋಪಿಸಿದರು.

Contact Your\'s Advertisement; 9902492681

ಈ ಸಂಭಂಧಪಟ್ಟಂತೆ ಜಿಲ್ಲಾಧಿಕಾರಿಗಳ ಗಮನಕ್ಕೆ ತಂದರೂ ಜಿಲ್ಲಾಡಳಿತ ಯಾವುದಕ್ಕೆ ಮೌನ ವಹಿಸಿದೆ ಎಂದು ತಿಳಿಯುತ್ತಿಲ್ಲ ಎಂದರು.

ಸೂಕ್ತ ದಾಖಲಾತಿ ಇಲ್ಲದೇ ಮತ್ತು ಬೇರೆಯವರ ಆಸ್ತಿಯನ್ನು ಪರಿಶಿಲಿಸಿದೇ ಬೇಕಾ ಬಿಟ್ಟಿ ಹಣಕ್ಕಾಗಿ ಆಸ್ತಿ ನೊಂದಣೆ ಮಾಡಿ ಭ್ರಷ್ಟಾಚಾರ ಎಸಗಿರುವ ಉಪ ನೊಂದಣೆ ಅಧಿಕಾರಿ ಕಲಬುರಗಿ ಇವರನ್ನು ಕೂಡಲೇ ಅಮಾನತ್ತು ಮಾಡಿ, 420 ಕೇಸ್ ದಾಖಲಿಸಬೇಕೆಂದರು. ಬಡವರ ಕೊಳಗೇರಿ ನಿವಾಸಿಗಳ ಮನೆಗಳನ್ನು ಅಕ್ರಮವಾಗಿ ಉಳ್ಳವರಿಗೆ ಮನೆ ಹಂಚಿಕೆ ಮಾಡಿರುವ ಅಧಿಕಾರಿಗಳನ್ನು ಸಹ ಅಮನಾತ್ತು ಮಾಡಬೇಕು ಎಂದರು.

ಸರ್ಕಾರವಾಗಲಿ ಅಥವಾ ಜಿಲ್ಲಾಡಳಿತವಾಗಲಿ ಕೂಡಲೇ ಎಚ್ಚೆತ್ತುಕೊಂಡು ಈ ಭ್ರಷ್ಟ ಅಧಿಕಾರಿಗಳ ವಿರುದ್ದ ಕ್ರಮಕೈಗೊಳ್ಳದಿದ್ದರೆ ನಾವು ಮುಂದಿನ ದಿನಗಳಲ್ಲಿ ಜಿಲ್ಲಾಧಿಕಾರಿಗಳ ಕಚೇರಿಯನ್ನು ಮುತ್ತಿಗೆ ಹಾಕುತ್ತೇವೆ ಎಂದು ಹೇಳಿದರು.

ಈ ಸಂದರ್ಭದಲ್ಲಿ ಜ್ಯೋತಿರ್ಲಿಂಗ್, ಮಹೇಶ, ಯಶವಂತರಾಯ, ವಿಜಯಕುಮಾರ ಸೇರಿದಂತೆ ಅನೇಕರು ಇದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here