ಕಲಬುರಗಿ: ಕರ್ನಾಟಕ ಕೇಂದ್ರಿಯ ವಿಶ್ವವಿದ್ಯಾಲಯದಲ್ಲಿ ಇಂದು Engineering and Management ವಿಭಾಗಗಳ ಅಧ್ಯಾಪಕವರ್ಗದವರಿಗೆ NIRF Discipline Specific Ranking ಕುರಿತ ವಿಶೇಷ ಉಪನ್ಯಾಸವನ್ನು ಆಯೋಜಿಸಿತ್ತು.
ಕಾರ್ಯಕ್ರಮವನ್ನು ಊಧ್ಘಾಟಿಸಿದ ಕಲಪತಿಗಳಾದ ಪ್ರೊ. ಎಂ.ವಿ ಅಳಗವಾಡಿ ಅವರು ಇಂದು ತಾಂತ್ರಿಕ ಮತ್ತು ನಿರ್ವಹಣಾ ಶಾಸ್ತ್ರ ಯುವತಲೆಮಾರನ್ನು ಆಕರ್ಷಿಸುತ್ತಿರುವ ಶೈಕ್ಷಣಿಕ ಕ್ಷೇತ್ರವಾಗಿದೆ ಈ ಕ್ಷೇತ್ರಗಳು ಅತಿಹೆಚ್ಚು ಉದ್ಯೋಗಗಳನ್ನು ಸೃಜಿಸುವ ಸಾಮಥ್ರ್ಯವನ್ನು ಹೊಂದಿವೆ ಈ ಹಿನ್ನಲೆಯಲ್ಲಿ ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ರ್ಯಾಂಕಿಂಗ್ ಬಹಳ ಮುಖ್ಯವಾಗಲಿದೆ, ಕರ್ನಾಟಕ ಕೇಂದ್ರಿಯ ವಿವಿ ಈ ನಿಟ್ಟಿನಲ್ಲಿ ಮಹತ್ವದ ಹೆಜ್ಜೆಗಳನ್ನು ಇಡುತ್ತಿರುವುದು ಮಹತ್ವದ ಸಂಗತಿಯಾಗಿದೆ ಎಂದರು.
ಕಾರ್ಯಕ್ರಮದಲ್ಲಿ ಮಾತನಾಡಿದ ಕುಲಚಿವರಾದ ಪ್ರೊ, ಮುಸ್ತಾಕ್ ಅಹಮ್ಮದ್ ಐ ಪಟೇಲ್ ಅವರು ಇಂದು ರಾಷ್ಟ್ರೀಯ ರ್ಯಾಂಕಿಂಗ್ ವ್ಯವಸ್ಥೆ ಉನ್ನತ ಶಿಕ್ಷಣ ಸಂಸ್ಥೆಯ ಹೆಜ್ಜೆಗುರುತನ್ನು ಜಾಗತಿಕ ಮಟ್ಟದಲ್ಲಿ ದಾಖಲಾಗಲು ಸಹಕರಿಸುತ್ತಿವೆ, ಬಹಳ ಮುಖ್ಯವಾಗಿ ಇಟಿgiಟಿeeಡಿiಟಿg ಚಿಟಿಜ ಒಚಿಟಿಚಿgemeಟಿಣ ವಿಭಾಗಗಳು ಯಾವುದೇ ಸಂಸ್ಥೆಗೆ ಉತ್ತಮ ರ್ಯಾಂಕಿಂಗ್ ತರುವ ಸಾಮಥ್ರ್ಯವನ್ನು ಹೊಂದಿವೆ, ಈ ಹಿನ್ನಲೆಯಲ್ಲಿ ಕರ್ನಾಟಕ ಕೇಂದ್ರಿಯ ವಿವಿಯ ತಾಂತ್ರಿಕ ಮತ್ತು ನಿರ್ವಹಣಾ ಶಾಸ್ತ್ರ ವಿಭಾಗಗಳ ಪ್ರಯತ್ನ ವಿವಿಯ ಭವಿಷ್ಯದ ದೃಷ್ಟಿಯಿಂದ ಮಹತ್ವದ ಸಂಗತಿಯಾಗಿರಲಿದೆ ಎಂಬ ಅಭಿಪ್ರಾಯ ವ್ಯಕ್ತಪಡಿಸಿದರು.
ಸಂಪನ್ಮೂಲ ವ್ಯಕ್ತಿಯಾಗಿ ಉಪನ್ಯಾಸ ನೀಡಿದ ಉತ್ತರಾಕಂಡ್ ಪೆಟ್ರೋಲಿಯಂ ಮತ್ತು ಎನರ್ಜಿ ವಿಶ್ವವಿದ್ಯಾಲಯದ ಪ್ರೊ, ಪಂಕಜ್ ಶರ್ಮ ಅವರು ಮಾತನಾಡಿ 2015ರಿಂದ ಕೇಂದ್ರಸರ್ಕಾರದ ಮಾನವ ಸಂಪನ್ಮೂಲ ಇಲಾಖೆ ನಡೆಸುತ್ತಿರುವ ಓIಖಈ ಆisಛಿiಠಿಟiಟಿe Sಠಿeಛಿiಜಿiಛಿ ಖಚಿಟಿಞiಟಿg ರ್ಯಾಂಕಿಂಗ್ ಶೈಕ್ಷಣಿಕ ವ್ಯವಸ್ಥೆಯಲ್ಲಿ ಮಹತ್ವದ ಬದಲಾವಣೆಗೆ ಕಾರಣವಾಗಿದೆ, ಇಂದು ಇಟಿgiಟಿeeಡಿiಟಿg ಚಿಟಿಜ ಒಚಿಟಿಚಿgemeಟಿಣ ವಿಭಾಗಗಳಿಗೆ ಸೇರಬಯಸುವ ಪ್ರತಿ ವಿದ್ಯಾರ್ಥಿ ತನ್ನ ಆಯ್ಕೆಯನ್ನು ಶೈಕ್ಷಣಿಕ ಸಂಸ್ಥೆಯ ರ್ಯಾಂಕಿಂಗ್ ನೋಡಿ ನಿರ್ಧಸಿರುತ್ತಿದ್ದಾರೆ, ಈ ಕಾರಣಕ್ಕಾಗಿ ತಾಂತ್ರಿಕ ಮತ್ತು ನಿರ್ವಹಣಾ ಶಾಸ್ತ್ರಗಳ ರ್ಯಾಂಕಿಂಗ್ ಸ್ಪರ್ಧೆಯಲ್ಲಿ ಭಾಗವಹಿಸುವ ಶೈಕ್ಷಣಿಕ ಸಂಸ್ಥೆಗಳ ಸಂಖ್ಯೆ ದ್ವಿಗುಣಗೊಂಡಿದೆ ಎಂದರು.
ಇಂದು ಶಿಕ್ಷಣ ಎನ್ನುವುದು ಭೋಧನೆ, ಸಂಶೋಧನೆ ಮತ್ತು ಅನ್ವೇಷಣೆ ಎಲ್ಲಾ ಕೌಶಲ್ಯಗಳನ್ನು ವಿದ್ಯಾರ್ಥಿಗಳಿಗೆ ಕಲಿಸುವ ಮಹತ್ವದ ಪಾತ್ರ ನಿರ್ವಹಿಸುವ ವಿಶಾಲ ದೃಷ್ಟಿಕೋನವನ್ನು ಹೊಂದಬೇಕಿದೆ ಆಗ ಮಾತ್ರ ವರ್ತಮಾನದ ಸಮಾಲುಗಳಿಗೆ ಯುವ ಸಮುದಾಯವನ್ನು ಸಜ್ಜುಗೊಳಿಸಲು ಸಾಧ್ಯ ಎಂಬ ಅಭಿಪ್ರಾಯ ವ್ಯಕ್ತಪಡಿಸಿದರು.
ಕಾರ್ಯಕ್ರಮ ಕೇಂದ್ರಿಯ ವಿಶ್ವವಿದ್ಯಾಲಯದ ಐಕ್ಯುಎಸಿ ನಿರ್ದೆಶಕರಾದ ಪ್ರೊ. ರೊಮೇಟ್ ಜಾನ್ ಅವರು ಉಪಸ್ಥಿತರಿದ್ದರು, ಸಿಯುಕೆ ರ್ಯಾಂಕಿಂಗ್ ನ್ಯೂಡನ್ ಅಧಿಕಾರಿ ಡಾ. ಕಿರಣ್ ಎಂ ಗಾಜನೂರು ಕಾರ್ಯಕ್ರಮ ನಿರೂಪಿಸಿದರು, ಮಾಹಿತಿ ವಿಜಾÐನಿ ಅಂಕುಶ್ ಪಾಟೀಲ್ ಸ್ವಾಗತಿಸಿದರು ಕಾರ್ಯಕ್ರಮದಲ್ಲಿ ಇಟಿgiಟಿeeಡಿiಟಿg ಚಿಟಿಜ ಒಚಿಟಿಚಿgemeಟಿಣ ವಿಭಾಗದ ಐಕ್ಯುಎಸಿ ಸಂಯೋಜಕರಾದ ಡಾ. ಸುಷ್ಮ ಮತ್ತು ಡಾ.ಸಂತೋಷ್ ಹಾಜರಿದ್ದರು.