ಕುವೆಂಪು ಅವರ ಸಾಹಿತ್ಯದ ಕೊಡುಗೆ ಅಪಾರವಾದದ್ದು : ಮಾನಪ್ಪ ಹಡಪದ

0
22

ಶಹಾಪುರ :ಕನ್ನಡ ಭಾಷೆ,ನಾಡು ನುಡಿ,ನೆಲ ಜಲದ,ಬಗ್ಗೆ ಕನ್ನಡಿಗರ ನರನಾಡಿಗಳಲ್ಲಿ ರೋಷ ಉಕ್ಕುವಂತೆ ಮಾಡಿ,ಕನ್ನಡಕ್ಕೆ ಮೊದಲ ಜ್ಞಾನಪೀಠ ಪ್ರಶಸ್ತಿ ತಂದುಕೊಟ್ಟ ಮಹಾನ್ ಕವಿ ವಿಶ್ವಮಾನವ ಕುವೆಂಪು ಅವರ ಕೊಡುಗೆ ಸಾಹಿತ್ಯ ಕ್ಷೇತ್ರಕ್ಕೆ ಅಪಾರವಾದದ್ದು ಎಂದು ಟ್ರಸ್ಟ್ ನ ಅಧ್ಯಕ್ಷರಾದ ಮಾನಪ್ಪ ಹಡಪದ ಹೇಳಿದರು.

ಗೋಗಿ ಗ್ರಾಮದ ಸವಿತಾ ಸಮಾಜ ಕಲ್ಯಾಣ ಮಂಟಪದಲ್ಲಿ ಶ್ರೀ ರಶ್ಮಿ ಅರುಂಧತಿ ಜನಜಾಗೃತಿ ಹೋರಾಟ ಟ್ರಸ್ಟ್ ವತಿಯಿಂದ ಹಮ್ಮಿಕೊಂಡಿರುವ ವಿಶ್ವ ಮಾನವ ದಿನಾಚರಣೆ ಪ್ರಯುಕ್ತವಾಗಿ ಕುವೆಂಪು ಅವರ ಒಂದು ನೆನಪು ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.

Contact Your\'s Advertisement; 9902492681

ಇನ್ನೋರ್ವ ಅತಿಥಿಗಳು ಹಾಗೂ ಕನ್ನಡ ಉಪನ್ಯಾಸಕರಾದ ಮಡಿವಾಳಪ್ಪ ಪಾಟೀಲ ಮಾತನಾಡಿ ಕನ್ನಡದ ಮೇರು ಕವಿಯಾಗಿ ನುಡಿದಂತೆ ನಡೆದು ಸಾರ್ಥಕ ಬದುಕು ಸಾಗಿಸಿ ಈ ನಾಡಿನ ಸಾಹಿತ್ಯ ಸಿರಿಯನ್ನು ಉತ್ತುಂಗಕ್ಕೇರಿಸಿದ ಮಹಾನ್ ಮೇಧಾವಿ ಎಂದು ಬಣ್ಣಿಸಿದರು. ಅಲ್ಲದೆ ಕುವೆಂಪು ಅವರು ರಚಿಸಿದ ಗ್ರಂಥಗಳು ಹೆಚ್ಚೆಚ್ಚು ಓದುವುದರ ಜೊತೆಗೆ ಅವರ ವೈಚಾರಿಕತೆಯ ನಿಲುವುಗಳನ್ನು ಇಂದಿನ ಯುವಜನತೆ ಮೈಗೂಡಿಸಿಕೊಳ್ಳುವುದು ಅತ್ಯವಶ್ಯಕವಾಗಿದೆ ಎಂದು ಹೇಳಿದರು.

ಈ ಸಂದರ್ಭದಲ್ಲಿ ಕುವೆಂಪುರವರ ರಚಿಸಿದ ಹಲವಾರು ಕೃತಿಗಳನ್ನು ಬಹುಮಾನವಾಗಿ ಟ್ರಸ್ಟ್ ವತಿಯಿಂದ ನೀಡಲಾಯಿತು ಈ ಸಮಾರಂಭದ ವೇದಿಕೆ ಮೇಲೆ ಗ್ರಾಮದ ಹಿರಿಯ ಮುಖಂಡರಾದ ಯಮನಪ್ಪ ಹಡಪದ ಜಿಲ್ಲಾ ಚಟುಕು ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ರಾದ ಬಸವರಾಜ ಸಿನ್ನೂರ ಹಾಗೂ ಕಾಂತಪ್ಪ ಉಪಸ್ಥಿತರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here