ತಾಲೂಕು ಆಡಳಿತ ಪೊಲೀಸ್ ಶಾಂತಿ ಸಭೆ: ಮತ ಎಣಿಕೆ ಬಳಿ ಶಾಂತಿ ಕಾಪಾಡಲು ಸಲಹೆ

0
25

ಸುರಪುರ: ತಾಲೂಕು ಆಡಳಿತ ಮತ್ತು ಪೊಲೀಸ್ ಇಲಾಖೆ ವತಿಯಿಂದ ನಗರದ ಗರುಡಾದ್ರಿ ಕಲಾ ಮಂದಿರದಲ್ಲಿ ಗ್ರಾಮ ಪಂಚಾಯತಿ ಚುನಾವಣೆಯಲ್ಲಿನ ಅಭ್ಯಾರ್ಥಿಗಳು ಮತ್ತು ಏಜೆಂಟರ ಶಾಂತಿ ಸಭೆಯನ್ನು ನಡೆಸಲಾಯಿತು.

ಸಭೆಯಲ್ಲಿ ಭಾಗವಹಿಸಿ ತಹಸೀಲ್ದಾರ್ ಸುಬ್ಬಣ್ಣ ಜಮಖಂಡಿ ಮಾತನಾಡಿ,ಈಗಾಗಲೆ ಮತ ಎಣಿಕೆಗಾಗಿ ಎಲ್ಲಾ ರೀತಿಯ ವ್ಯವಸ್ಥೆಯನ್ನು ಮಾಡಿಕೊಳ್ಳಲಾಗಿದೆ,ಮತ ಕೇಂದ್ರದ ಒಳಗೆ ಯಾವುದೇ ರೀತಿಯ ಸಮಸ್ಯೆ ಉಂಟಾಗದಂತೆ ವ್ಯವಸ್ಥೆ ಮಾಡಲಾಗಿದ್ದು ಎಣಿಕೆ ಕೇಂದ್ರದ ಒಳಗೆ ಅಭ್ಯಾರ್ಥಿಯಾಗಲಿ ಅಥವಾ ಏಜೆಂಟರಾಗಲಿ ಒಬ್ಬರಿಗೆ ಅವಕಾಶವಿದೆ, ಒಬ್ಬರಿಗಿಂತಲೂ ಹೆಚ್ಚು ಜನರು ಬರುವಂತಿಲ್ಲ ಎಂದು ತಿಳಿಸಿದರು.ಇನ್ನು ಎಣಿಕೆ ಕೇಂದ್ರದ ಒಳಗಡೆ ನೀರಿನ ಬಾಟಲಿಯಾಗಲಿ,ಹರಿತವಾದ ಆಯುಧ ಅಥವಾ ವಸ್ತುವಾಗಲಿ ಮತ್ತು ಮೊಬೈಲ್ ಫೋನ ತರುವಂತಿಲ್ಲ ಎಂದು ಕಟ್ಟು ನಿಟ್ಟಾಗಿ ಸೂಚನೆ ನೀಡಿದರು.

Contact Your\'s Advertisement; 9902492681

ಸಭೆಯ ನೇತೃತ್ವ ವಹಿಸಿದ್ದ ಸುರಪುರ ಉಪ ವಿಭಾಗದ ಡಿವೈಎಸ್ಪಿ ವೆಂಕಟೇಶ ಹುಗಿಬಂಡಿ ಮಾತನಾಡಿ,ಮತ ಎಣಿಕೆ ಕೇಂದ್ರದ ಬಳಿಯಲ್ಲಿ ಅನಾವಶ್ಯಕವಾಗಿ ಹೆಚ್ಚು ಜನರನ್ನು ಕರೆತರದಂತೆ ತಿಳಿಸಿದರು,ಸಂಭ್ರಮಾಚರಣೆ ಬದಲಾಗಿ ಸೋತ ಅಭ್ಯಾರ್ಥಿಗಳಿಗೆ ಒಂದು ಸಾಂತ್ವಾನದ ಮಾತನ್ನು ಹೇಳಿ ಅದರಿಂದ ಗೆದ್ದವರ ದೊಡ್ಡತನ ಹೆಚ್ಚಲಿದೆ,ಅಲ್ಲದೆ ಅಭ್ಯಾರ್ಥಿಗಳಾದವರು ನಿಮ್ಮ ಸ್ನೇಹಿತರು ನಿಮ್ಮ ಸಂಬಂಧಿಗಳಾಗಿರಲಿದ್ದಾರೆ ಅಥವಾ ನಿಮ್ಮ ಊರಿನವರಾಗಿರುತ್ತಾರೆ,ಸೋತವರ ಮುಂದೆ ನೀವು ಸಂಭ್ರಮಾಚರಿಸುವ ಬದಲಾಗಿ ಅವರಿಗೆ ಒಂದು ಸಾಂತ್ವಾನದ ಮಾತು ಮುಖ್ಯ ಎಂದರು.

ಪೊಲೀಸ್ ಇನ್ಸ್ಪೇಕ್ಟರ್ ಎಸ್.ಎಮ್.ಪಾಟೀಲ್ ಮಾತನಾಡಿ,ಮತ ಎಣಿಕೆ ಕೇಂದ್ರದ ಬಳಿಯಲ್ಲಿ ಹೆಚ್ಚು ಜನ ಸೇರುವುದರಿಂದ ಗದ್ದಲ ಉಂಟಾಗಬಹುದು ಅದರಿಂದ ಸಮಸ್ಯೆಯಾಗಲಿದೆ ಅಲ್ಲದೆ ಯಾರೇ ಮಾಸ್ಕ್ ಧರಿಸದಿದ್ದರೆ ದಂಡ ಹಾಕಲಾಗುವುದು ಮತ್ತು ಸಾಮಾಜಿಕ ಅಂತರ ಕಾಪಾಡದಿದ್ದರೆ ದಂಡ ಹಾಗು ಸಂಚಾರಿ ನಿಯಮಗಳನ್ನು ಪಾಲಿಸದಿದ್ದಲ್ಲಿ ದಂಡ ಬೀಳಲಿದೆ ಆದ್ದರಿಂದ ಅನಾವಶ್ಯಕವಾಗಿ ಹೆಚ್ಚು ಜನ ಸೇರದಂತೆ ಅಭ್ಯಾರ್ಥಿಗಳು ಮತ್ತು ಏಜೆಂಟ್‍ರು ಜನರನ್ನು ಕಡಿಮೆ ತರುವಂತೆ ತಿಳಿಸಿದರು.
ಈ ಸಂದರ್ಭದಲ್ಲಿ ವಿವಿಧ ಗ್ರಾಮಗಳ ಚುನಾವಣಾ ಅಭ್ಯಾರ್ಥಿಗಳು ಏಜೆಂಟರು ಮತ್ತು ಪೊಲೀಸ್ ಸಿಬ್ಬಂದಿಗಳು ಸಭೆಯಲ್ಲಿ ಭಾಗವಹಿಸಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here