ಗ್ರಾಪಂ ಚುನಾವಣೆ:ಡಿಸೆಂಬರ್ 30ರಂದು ಮತದಾನ ಎಣಿಕೆ , ಎಲ್ಲರ ಚಿತ್ತ ಫಲಿತಾಂಶದತ್ತ

0
84

ಶಹಾಬಾದ:ಗ್ರಾಪಂ ಚುನಾವಣೆಯ ಅಬ್ಬರ ಪ್ರಚಾರ, ಮತದಾನ ಮುಗಿದ ಮೇಲೆ ಅಭ್ಯರ್ಥಿಗಳು ಭವಿಷ್ಯ ಮತಪೆಟ್ಟಿಗೆಯಲ್ಲಿ ಭದ್ರವಾಗಿದ್ದು, ಇಂದು ಮತದಾನ ಎಣಿಕೆ ನಡೆಯಲಿದ್ದು, ಎಲ್ಲರ ಚಿತ್ತ ಫಲಿತಾಂಶದತ್ತ ಮನೆಮಾಡಿದೆ.

ತಾಲೂಕಿನ ಭಂಕೂರ, ಮರತೂರ, ತೊನಸನಹಳ್ಳಿ(ಎಸ್) ಹಾಗೂ ಹೊನಗುಂಟಾ ಗ್ರಾಪಂಗಳ ಚುನಾವಣೆಯ ಮತ ಎಣಿಕೆ ಕಾರ್ಯ ಬುಧವಾರ ನಡೆಯಲಿದ್ದು, 4 ಗ್ರಾಪಂ ಚುನಾವಣೆಯ ಅಭ್ಯರ್ಥಿಗಳ ಫಲಿತಾಂಶ ನಾಳೆ ಮಧ್ಯಾನದೊಳಗೆ ಪ್ರಕಟಗೊಳ್ಳುವ ಸಾಧ್ಯತೆಯಿದೆ.

Contact Your\'s Advertisement; 9902492681

ಅಭ್ಯರ್ಥಿಗಳು ತುಸು ವಿರಾಮದಲ್ಲಿರುವಾಗಲೇ ಮತದಾನ ಎಣಿಕೆ ಸಮೀಪಿಸುತ್ತಿದ್ದಂತೆ, ಅಭ್ಯರ್ಥಿಗಳ ಕಾರ್ಯಕರ್ತರು ಸೋಲು, ಗೆಲುವಿನ ಲೆಕ್ಕಾಚಾರದಲ್ಲಿ ತೊಡಗಿದರೇ, ಫಲಿತಾಂಶ ಏನಾಗುವುದೋ ಎಂಬ ಚಿಂತೆಯಲ್ಲಿ ಅಭ್ಯರ್ಥಿಗಳ ಹೃದಯದ ಬಡಿತ ಹೆಚ್ಚಾಗಿದೆ.ಕೆಲ ಅಭ್ಯರ್ಥಿಗಳು ದೇವಾಲಯಗಳಿಗೆ ಬೇಟಿ ನೀಡಿ, ವಿಶೇಷ ಪೂಜೆ ಮೊರೆ ಹೋಗಿದ್ದಾರೆ.ಅಲ್ಲದೇ ಚುನಾವಣೆ ನಿಮಿತ್ತ ಸಾರ್ವಜನಿಕರು, ಅಭ್ಯರ್ಥಿಗಳು, ಕಾರ್ಯಕರ್ತರು ಸೋಲು-ಗೆಲುವಿನ ಲೆಕ್ಕಾಚಾರದಲ್ಲಿ ಮುಳುಗಿದರೇ, ಕೆಲವು ಜನರು ಬೆಟ್ಟಿಂಗ್ ದಂಧೆ ತೊಡಗಿರುವುದು ಸಾರ್ವಜನಿಕರಿಂದ ತಿಳಿದು ಬಂದಿದೆ.

ಮತ ಎಣಿಕೆ ಕೇಂದ್ರದ ಒಳಗೆ ಚುನಾವಣಾಧಿಕಾರಿಗಳು, ಚುನಾವಣಾ ಸಿಬ್ಬಂದಿ, ಪೊಲೀಸ್ ಅಧಿಕಾರಿಗಳು ಮತ್ತು ಸಿಬ್ಬಂದಿಗಳಿಗೆ ಹಾಗೂ ಅಭ್ಯರ್ಥಿಗಳಿಗೆ ಅಥವಾ ಅವರ ಪರವಾಗಿ ಒಬ್ಬರಿಗೆ ಮಾತ್ರ ಅವಕಾಶ ಕಲ್ಪಿಸಲಾಗಿದೆ.ಇವರನ್ನು ಬಿಟ್ಟು ಯಾರಿಗೂ ಪ್ರವೇಶಕ್ಕೆ ಅವಕಾಶ ನೀಡಿರುವುದಿಲ್ಲ. ಎಣಿಕೆ ಕೇಂದ್ರದ ಸುತ್ತಲೂ ಸುಮಾರು 100 ಮೀಟರ್ ಒಳಗಡೆ ಯಾರು ಬರದಂತೆ ನಿಷೇದಾಜ್ಞೆ ಹೊರಡಿಸಲಾಗಿದೆ.ಅಲ್ಲದೇ ಸಾರ್ವಜನಿಕರು ಯಾರು ಬಾರದಂತೆ ಗಂಗಮ್ಮ ಶಾಲೆಯ ಮತ ಎಣಿಕೆ ಕೇಂದ್ರದಿಂದ ಶರಣಬಸವೇಶ್ವರ ದೇವಾಲಯದವರೆಗೆ ಬ್ಯಾರಿಕೇಡ್ ನಿರ್ಮಾಣ ಮಾಡಲಾಗಿದೆ. ನಾಲ್ಕು ಗ್ರಾಪಂಗಳಲ್ಲಿ 11 ಜನ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. 79 ಸ್ಥಾನಗಳಿಗೆ ಸ್ಪರ್ಧೆ ಮಾಡಿದ 1279 ಅಭ್ಯರ್ಥಿಗಳ ಹಣೆಬರಹ ಮತ ಪೆಟ್ಟಿಗೆಯಲ್ಲಿ ಭದ್ರವಾಗಿದ್ದು, ಅಭ್ಯರ್ಥಿಗಳು, ಮುಖಂಡರಲ್ಲಿ ಫಲಿತಾಂಶ ವಿಷಯದಲ್ಲಿ ತಳಮಳ ಶುರುವಾಗಿದೆ. ಗೆಲುವಿನ ಅದೃಷ್ಟ ಯಾರಿಗಿದೆ ಎಂಬುದು ಡಿಸೆಂಬರ್ 30ರ ಮಧ್ಯಾಹ್ನದ ವೇಳೆಗೆ ಸ್ಪಷ್ಟ ಚಿತ್ರಣ ಹೊರಬೀಳಲಿದೆ.

ಬಿಗಿ ಪೊಲೀಸ್ ಭದ್ರತೆ:

ಮತ ಎಣಿಕೆ ಸೂಸುತ್ರವಾಗಿ ನಡೆಯಲು ಹಾಗೂ ಮತ ಎಣಿಕೆ ಕೇಂದ್ರದ ಸುತ್ತಲೂ ಬಿಗಿ ಪೊಲೀಸ್ ಭದ್ರತೆ ಒದಗಿಸಲಾಗಿದೆ.ಡಿವಾಯ್ಎಸ್ಪಿ-1, ಪಿಐ-2, ಪಿಎಸ್ಐ-4 ಎಎಸ್ಐ, ಪೊಲೀಸ್ ಸಿಬ್ಬಂದಿ, ಕೆಎಸ್ಆರ್ಪಿ ಹಾಗೂ ಡಿಆರ್ ತುಕಡಿ ಸೇರಿದಂತೆ ಒಟ್ಟು 150 ಸಿಬ್ಬಂದಿಗಳು ಕಾರ್ಯನಿರ್ವಹಿಸಲಿದ್ದಾರೆ – ಡಿವಾಯ್ಎಸ್ಪಿ ವೆಂಕನಗೌಡ ಪಾಟೀಲ ಶಹಾಬಾದ.


ಮತ ಎಣಿಕೆಗೆ ಎಲ್ಲಾ ಸಿದ್ಧತೆ ಮಾಡಿಕೊಳ್ಳಲಾಗಿದೆ.ಮತ ಎಣಿಕೆ ಕೇಂದ್ರದ ಸುತ್ತಲೂ ಪೊಲೀಸ್ ಸರ್ಪಗಾವಲು ಹಾಕಲಾಗಿದೆ. ಮತ ಎಣಿಕೆ ಕೇಂದ್ರದ ಮುಖ್ಯ ರಸ್ತೆಯಲ್ಲಿ ವಾಹನಗಳ ಸಂಚಾರ ಬಂದ್ ಮಾಡಲಾಗಿದೆ. ಡಿಸೆಂಬರ್ 29 ರ ಮಧ್ಯಾರಾತ್ರಯಿಂದ ಡಿಸೆಂಬರ್ 30 ರ ಮಧ್ಯರಾತ್ರಿ 12 ಗಂಟೆಯವರೆಗೆ ಮಧ್ಯ ಮಾರಾಟ ಸಂಪೂರ್ಣ ನಿಷೇಧಿಸಲಾಗಿದೆ- ಸುರೇಶ ವರ್ಮಾ ತಹಸೀಲ್ದಾರ ಶಹಾಬಾದ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here