ಸೇಡಂ: ತಮ್ಮ ಬುದ್ಧಿಶಕ್ತಿ ಮತ್ತು ಕಾರ್ಯಕ್ಷಮತೆಯಿಂದಾಗಿ ಕುಟುಂಬದ ಏಳಿಗೆಯ ಜೊತೆಗೆ ಸಮಾಜದ ಸ್ವಾಸ್ಥ್ಯವನ್ನು ಮಹಿಳೆಯರು ಕಾಪಾಡುತ್ತಿದ್ದಾರೆ ಎಂದು ಶ್ರೀ ಕೊತ್ತಲ ಬಸವೇಶ್ವರ ಭಾರತೀಯ ಶಿಕ್ಷಣ ಸಮಿತಿ ಸಂಚಾಲಿತ ನೃಪತುಂಗ ಪದವಿ ಕಾಲೇಜಿನ ಸಮಾಜಶಾಸ್ತ್ರ ಪ್ರಾಧ್ಯಾಪಕಿ ಪ್ರೊ.ಶೋಭಾದೇವಿ ಚೆಕ್ಕಿ ಹೇಳಿದರು.
ಪಟ್ಟಣದ ಮುಖಂಡರಾದ ಶ್ರೀಧರ ಐನಾಪುರ ಅವರ ಗೃಹದಲ್ಲಿ ನಡೆದ ಶಾಂಭವಿ ಸ್ತ್ರೀ ಶಕ್ತಿ ಸ್ವಸಹಾಯ ಸಂಘ ಆಯೋಜಿಸಿದ್ದ ‘ಮಹಿಳಾ ಸಬಲೀಕರಣ’ ಕುರಿತು ವಿಶೇಷ ಉಪನ್ಯಾಸ ಮತ್ತು ಸನ್ಮಾನ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಪ್ರಸ್ತುತ ಮಹಿಳೆಯರು ಜೀವನದ ಎಲ್ಲಾ ಕ್ಷೇತ್ರಗಳ ಅಭಿವೃದ್ಧಿಗಾಗಿ ಶ್ರಮಿಸುತ್ತಿದ್ದಾರೆ. ಮಹಿಳೆಯರ ಸಾಧನೆಯನ್ನು ಗುರುತಿಸಿ ಗೌರವಿಸುವ ಕಾರ್ಯವನ್ನು ಶಾಂಭವಿ ಸಂಘ ಮಾಡುತ್ತಿರುವುದು ಶ್ಲಾಘನೀಯ ಎಂದರು.
ಪುರಸಭೆ ಅಧ್ಯಕ್ಷೆ ಚೆನ್ನಮ್ಮ ಪಾಟೀಲ ಮಾತನಾಡಿ, ಮಹಿಳೆಯರು ಯಾವ ಕ್ಷೇತ್ರದಲ್ಲಿಯೂ ಹಿಂದೆ ಬಿದ್ದಿಲ್ಲ. ಶ್ರದ್ಧಾಪೂರ್ವಕವಾಗಿ ಕೆಲಸ ಮಾಡಿ ಹೆಸರು ಗಳಿಸುತ್ತಿದ್ದಾರೆ ಎಂದರು.
ವಿವಿಧ ಕೇತ್ರದಲ್ಲಿ ಸಾಧನೆ ಮಾಡಿದ ಮಹಿಳೆಯರಾದ ಪುರಸಭೆ ಅಧ್ಯಕ್ಷೆ ಚೆನ್ನಮ್ಮ ಪಾಟೀಲ ಮತ್ತು ಅಮ್ಮ ಪ್ರಶಸ್ತಿಯನ್ನು ನಾಡಿನಲ್ಲಿ ಚಿರಸ್ಥಾಯಿಯಾಗಿಸಿರುವ ಸಂಚಾಲಕಿ ರತ್ನಕಲಾ ಮಹಿಪಾಲರೆಡ್ಡಿ ಅವರನ್ನು ‘ಸೀರೆ ಕೊಡುಗೆ’ ನೀಡಿ ಗೌರವಿಸಲಾಯಿತು.
ಸಹನಾ ಐನಾಪುರ ಮತ್ತು ವಿಜಯಲಕ್ಷ್ಮೀ ಸುಜೀತಕುಮಾರ ಪ್ರಾರ್ಥನಾ ಗೀತೆ ಹಾಡಿದರು. ವಸಂತಾ ಮನೋಹರ ದೊಂತಾ ಸ್ವಾಗತಿಸಿದರು. ವಿಜಯಲಕ್ಷ್ಮೀ ಕೆರಳ್ಳಿ ವಂದಿಸಿದರು. ರಾಜೇಶ್ವರಿ ಬಿಲಗುಂದಿ ನಿರೂಪಿಸಿದರು.
ರಾಧಾ, ಜಯಶ್ರೀ ಐನಾಪುರ, ಈರಮ್ಮ ಪಾಟೀಲ್, ಲಲಿತಾ ಕಿರಣಗಿ, ಸಂಗಮ್ಮ ಕೆರಳ್ಳಿ, ಶೀಲಾ ನಿರ್ಣಿ, ಪಲ್ಲವಿ ಶಹಾ, ಸಂಧ್ಯಾ ಬೊಮ್ನಳ್ಳಿ, ಚೆಂದಮ್ಮ ಮೇಳಕುಂದಿ ಇತರರಿದ್ದರು.