ಬಸ್ ಪಾಸ ಪಡೆಯಲು ಸರಳ ವ್ಯವಸ್ಥೆ ಕಲ್ಪಿಸಬೇಕು: ನಾಗರಾಜ ಮಕಾಶಿ

0
59

ಸುರಪುರ: ಕಾಲೇಜು ಪ್ರಾರಂಭವಾಗಿರುವುದರಿಂದ ಹಳ್ಳಿಗಳಲ್ಲಿರುವ ಬಹುತೇಕ ವಿದ್ಯಾರ್ಥಿಗಳು ಕೆಎಸ್‌ಆರ್‌ಟಿಸಿ ಬಸ್ಸುಗಳ ಮೂಲಕವೆ ಕಾಲೇಜಿಗೆ ಬರುತ್ತಾರೆ ಈ ಮೂದಲು ಬಸ್ ಪಾಸ ಪಡೆಯಲು ಸರಳರೀತಿಯ ವ್ಯವಸ್ಥೆಯನ್ನು ಸರ್ಕಾರ ಮಾಡಿತ್ತು ಆದರೆ ಈಗ ಇಲ್ಲದ ಧಾಕಲಾತಿಗಳನ್ನು ಕೇಳಿ ಬಸ್ ಪಾಸಿನ ಅರ್ಜಿಯನ್ನು ತಿರಸ್ಕರಿಸುತ್ತಿದ್ದಾರೆ ಇದರಿಂದಾಗಿ ವಿದ್ಯಾರ್ಥಿಗಳು ತೊಂದರೆ ಅನುಭವಿಸುತ್ತಿದ್ದು ಸಂಬಂಧಿಸಿದ ಅಧಿಕಾರಿಗಳು ಪಾಸ ಪಡೆಯಲು ಸರಳ ರೀತಿಯ ವ್ಯವಸ್ಥೆ ಕಲ್ಪಸಬೇಕೆಂದು ಕಲಬುರ್ಗಿ ವಿಭಾಗೀಯ ಸಂಚಾಲಕ ನಾಗರಾಜ ಮಕಾಶಿ ಆಗ್ರಹಿಸಿದ್ದಾರೆ.

ನಗರದ ಕೆಎಸ್ ಆರ್‌ಟಿಸಿ ಬಸ್ ಘಟಕದಲ್ಲಿ ನಡೆದ ಪ್ರತಿಭಟನೆಯ ನೇತೃತ್ವ ವಹಿಸಿ ಮಾತನಾಡಿದ ಅವರು ಈ ಮೂದಲು ಬಸ್ ಪಾಸ ಪಡೆಯಲು ಅರ್ಜಿಯನ್ನು ಬಸ್ ನಿಲ್ದಾಣಗಳಲ್ಲಿ ಸಲ್ಲಿಸಿ ಪಾಸ ಪಡೆಯ ಬಹುದಾಗಿತ್ತು ಆದರೆ ಈಗ ಪಾಸ ಪಡೆಯಲು ಆನ್ ಲೈನ್ ನಲ್ಲಿ ಅರ್ಜಿಯನ್ನು ಹಾಕಬೇಕು ಇದರಲ್ಲಿ ಕಡ್ಡಾಯವಾಗಿ ಆಧಾರ ಕಾರ್ಡಗೆ ಮೊಬೈಲ ನಂಬರ ಲಿಂಕ ಇರುವ ಅರ್ಜಿಗಳಿಗೆ ಮಾತ್ರಾ ಪಾಸ ಪಡೆಯಬಹುದಾಗಿದೆ ಬಹಳಷ್ಟು ಗ್ರಾಮೀಣ ವಿದ್ಯಾರ್ಥಿಗಳು ತಮ್ಮ ಆಧಾರ ಕಾರ್ಡಗೆ ತಮ್ಮ ಮೊಬೈಲ ನಂಬರ ಲಿಂಕ ಮಾಡಿಸದೆ ಇರುವುದರಿಂದ ಅವರಿಗೆ ಬಸ್ ಪಾಸನ ಸೌಲಭ್ಯ ಪಡೆಯಲು ವಂಚಿತರಾಗುತ್ತಿದ್ದಾರೆ.

Contact Your\'s Advertisement; 9902492681

ಇಷ್ಟಲ್ಲದೆ ಒಂದು ಅರ್ಜಿಯನ್ನು ಆನ್ ಲೈನನಲ್ಲಿ ಸಲ್ಲಿಸಲು ನೂರು ವರೆಗೂ ತೆಗದುಕೊಳ್ಳುತ್ತಿದ್ದಾರೆ ಮೂದಲೆ ಕರೋನಾದಿಂದಾಗಿ ಆರ್ಥಿಕ ಸಂಕಷ್ಟದಲ್ಲಿರುವ ರೈತರು ಬಸ್ ಪಾಸನಿ ದರವನ್ನು ಹೊಂದಿಸಲು ಕಷ್ಟಪಡುತ್ತಿದ್ದಾರೆ ಇತಂಹದರಲ್ಲು ಹಣ ವಸೂಲಿ ಮಾಡುತ್ತಿರುವುದು ತೊಂಬಾ ನೋವಿನ ಸಂಗತಿಯಾಗಿದೆ ಈಗಲಾದರು ಸಂಬಂಧಿಸಿದ ಅಧಿಕಾರಿಗಳು ಎಚ್ಚೆತ್ತುಕೊಂಡು ಬಸ್‌ಪಾಸ ವಿತರಿಸುವಲ್ಲಿ ಎದುರಾಗಿರುವ ತಾಂತ್ರಿಕದೋಶವನ್ನು ಸರಿಪಡಿಸಿ ವಿದ್ಯಾರ್ಥಿಗಳಿಗೆ ಅನೂಕೂಲ ಕಲ್ಪಸಬೇಕು ಇಲ್ಲಾವಾದಲ್ಲಿ ಮುಂದಿನ ದಿನಗಳಲ್ಲಿ ಸಂಘಟನೆಯ ವತಿಯಿಂದ ಉಗ್ರವಾದ ಹೋರಾಟಕ್ಕೆ ಮುಂದಾಗಬೇಕಾಗುತ್ತದೆ ಎಂದು ಎಚ್ಚರಿಸಿದ್ದಾರೆ.

ಮನವಿಯನ್ನು ಘಟಕ ವ್ಯವಸ್ಥಾಪಕ ಭದ್ರಪ್ಪ, ತಿಮ್ಮಯ್ಯ, ಕ್ಯಾತಪ್ಪ ಮೇದಾ, ಪರಶುರಾಮ ಬೈಲಕುಂಟಿ, ಹುಲಗಪ್ಪ ಮುದ್ದನೂರ, ಬಾಲರಾಜ, ಹಣಮಂತ ಮಂಜಾಲಪುರ ಸೇರಿದಂತೆ ಇತರರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here