ಕಲಬುರಗಿ: ಗಡಿನಾಡಿನ ಹಿರಿಯ ರಾಜಕೀಯ ಧುರೀಣರಾಗಿದ್ದ ತಡೋಳಾ ಗ್ರಾಮದ ದಿ. ವಿಠ್ಠಲ ಶಿಂಧೆಯವರ ಪುತ್ರ, ನೂತನ ಗ್ರಾಮ ಪಂಚಾಯತ ಸದಸ್ಯ ಮಹಾದೇವ ವಿಠ್ಠಲ ಶಿಂಧೆ, ಅವರ ಬೆಂಬಲಿಗ ನೂತನ ಸದಸ್ಯರಾದ ಪ್ರವೀಣ ಕಾಂಬಳೆ. ಸೂರಜ ಪಾಟೀಲ, ಮುಖಂಡರಾದ ದೊಂಢಿಬಾ ಜಾಧವ, ಮಾರುತಿ ಜಾಧವ, ಯಾದವ ಜಾಧವ, ಶಿವಾಜಿ ಬಿರಾದಾರ, ಮಲಂಗ ಕಾಂಬಳೆ, ನಿತೀನ ಗಾಯಕವಾಡ, ಹುಸೇನಿ ಕಾಂಬಳೆ ಸೇರಿದಂತೆ ತಡೋಳಾ ಗ್ರಾಮದ ನೂರಾರು ಜನರು ಕಾಂಗ್ರೆಸ್ ಪಕ್ಷವನ್ನು ತೊರೆದು ಆಳಂದ ಶಾಸಕರಾದ ಸುಭಾಷ್ ಆರ್ ಗುತ್ತೇದಾರ ಸಮ್ಮುಖದಲ್ಲಿ ಭಾರತೀಯ ಜನತಾ ಪಕ್ಷಕ್ಕೆ ಸೇರ್ಪಡೆಯಾದರು.
ಈ ಸಂದರ್ಭದಲ್ಲಿ ಮಾತನಾಡಿದ ಶಾಸಕ ಸುಭಾಷ್ ಆರ್ ಗುತ್ತೇದಾರ ಅವರು, ತಡೋಳಾ ಗ್ರಾಮಸ್ಥರು ಹೆಚ್ಚಿನ ಸಂಖ್ಯೆಯಲ್ಲಿ ಭಾರತೀಯ ಜನತಾ ಪಕ್ಷಕ್ಕೆ ಸೇರ್ಪಡೆಯಾಗಿರುವುದರಿಂದ ಗಡಿನಾಡಿನಲ್ಲಿ ಬಿಜೆಪಿ ಮತ್ತಷ್ಟು ಬಲಶಾಲಿಯಾಗಿದೆ. ಪಕ್ಷಕ್ಕೆ ಸೇರ್ಪಡೆಯಾದವರಿಗೆ ಆಡಳಿತದಲ್ಲಿ ಮತ್ತು ಪಕ್ಷದಲ್ಲಿ ಸೂಕ್ತ ಸ್ಥಾನಮಾನ ದೊರಕಿಸಿ ಕೊಡಲಾಗುವುದು ಎಂದು ಹೇಳಿದರು.
ಮಂಡಲ ಅಧ್ಯಕ್ಷ ಆನಂದರಾವ ಪಾಟೀಲ ಕೊರಳ್ಳಿ, ಮಲ್ಲಿಕಾರ್ಜುನ ಕಂದಗೂಳೆ, ರಾಜಶೇಖರ ಮಲಶೆಟ್ಟಿ, ಪ್ರಫುಲ ಬಾಬಳಸುರೆ, ಬಾಬುರಾವ ಮೂಲಗೆ, ಜ್ಞಾನೇಶ್ವರ ಚವ್ಹಾಣ, ಬಳವಂತ ಬಿರಾದಾರ, ವಿಜಯ ಕಾರಭಾರಿ, ಇಂದ್ರಜೀತ ಕನಗರ, ಕಮಲಾಕರ ಪಾಟೀಲ, ಹಾಬು ಮುಲ್ಲಾ, ರಮೇಶ ಪೂಜಾರಿ ಸೇರಿದಂತೆ ಇತರರು ಇದ್ದರು.