ವರ್ಷದ ಮೊದಲ ಹಬ್ಬ ಸಂಕ್ರಾಂತಿ ವಿಶೇಷತೆ

0
196

 

ಸಂಕ್ರಾಂತಿ ಬಂತು ಸುಗ್ಗಿ ತಂತು
ಎಲ್ಲರ ಚಳಿಯನ್ನು ಬಿಡಿಸಿ
ಸೂರ್ಯ ತನ್ನ ಪತವನ್ನ ಬದಲಿಸಿ
ಎಲ್ಲರಲ್ಲಿಯೂ ಬದಲಾವಣೆ ಬಯಸಿ
ಹಗಲು ಇರುಳನ್ನು ಹಿಗ್ಗಿಸಿ
ಎಳ್ಳು ಬೆಲ್ಲದಲ್ಲಿ ಸಿಹಿಯನ್ನು ಬೆರೆಸಿ
ಸಂಭ್ರಮಿಸಲು ಎಲ್ಲರ ತನು ಮನ ಒಂದು ಗುಡಿಸುವ ಮೊದಲ ಹಬ್ಬದ ಆಗಮನವೇ ಈ ಸಂಕ್ರಾಂತಿ ಹಬ್ಬವಾಗಿದೆ.

Contact Your\'s Advertisement; 9902492681

ವರ್ಷದ ಆರಂಭದಲ್ಲಿ ಬರುವ ಹಬ್ಬವೇ ಸಂಕ್ರಾಂತಿ ಹಬ್ಬಗಳಲ್ಲಿ ಹಬ್ಬವೆಂದರೆ ಸಂಕ್ರಾಂತಿ ಹಬ್ಬವೇ ತುಂಬಾ ಅದ್ದೂರಿ ಹಬ್ಬವಾಗಿದೆ.

ಸಾಮಾನ್ಯವಾಗಿ ಸಂಕ್ರಾಂತಿ ಎಂದರೆ ಎಲ್ಲರಿಗೂ ನೆನಪಾಗುವುದು ಎಳ್ಳು ಬೆಲ್ಲದ ಹಬ್ಬ ಎಂದು. ಅದೇ ರೀತಿ ರೈತಾಪಿ ಜನರು ತಾವು ಬೆಳೆದ ಬೆಳೆಗಳನ್ನು ಒಂದೆಡೆ ರಾಶಿ ಹಾಕಿ ಅದಕ್ಕೆ ಪೂಜೆ ಮಾಡುವ ವಾಡಿಕೆ ಇದೆ. ಹೀಗೆ ಮಾಡುವುದರಿಂದ ಸಂಕ್ರಾಂತಿಯನ್ನು ಸುಗ್ಗಿಯ ಹಬ್ಬವೆಂದು ಕರೆಯುತ್ತಾರೆ. ಹಿಂದಿನ ಕಾಲದಿಂದಲು ಆಚರಣೆಯಲ್ಲಿರುವಂತಹ ಪದ್ಧತಿ ಎಂದರೆ ಎಳ್ಳು ದಾನ ಮಾಡುವುದು ಎಳ್ಳು ಶನಿ ಗ್ರಹದ ದಾನ್ಯವಾಗಿದೆ ಹಳ್ಳಿ, ನಗರ್ ಪ್ರದೇಶಗಳಲ್ಲಿ ಏಳನ್ನು ದಾನ ಮಾಡಲು ಹೋದಾಗ ಅದನ್ನು ತೆಗೆದುಕೊಳ್ಳಲು ಹೆಚ್ಚು ಇಷ್ಟ ಪಡುವುದಿಲ್ಲ, ಏಕೆಂದರೆ ಆ ದಾನ್ಯವನ್ನು ಶನಿಗೆ ಹೋಲಿಸುತ್ತಾರೆ.

ಅದನ್ನು ತೆಗೆದುಕೊಂಡರೇ ನಮಗೆ ಪಾಪ, ದೋಷ ಉಂಟಾಗುತ್ತದೆ ಎಂಬ ನಂಬಿಕೆ ಇದೆ ಹೀಗೆ ಭಾವಿಸುವ ಕಾರಣದಿಂದ ಜನರು ಅದರ ಜೊತೆಗೆ ಬೆಲ್ಲ, ಕೊಬ್ಬರಿಯನ್ನು ಮಿಶ್ರ ಮಾಡಿ ನೀಡುತ್ತಾರೆ. ಈ ಸಂಕ್ರಾಂತಿಯ ಸಂದರ್ಭದಲ್ಲಿ ಬೆಳೆ ಬೆಳೆದು ಮಾರಾಟಕ್ಕೆ ಬಂದಿರುತ್ತವೆ. ಅದನ್ನು ದಾನ ಮಾಡುವುದರಿಂದ ಫಲ ಅಧಿಕವಾಗುವುದು ಎಂದು ಹೇಳುತ್ತಾರೆ.

ಈ ರೀತಿ ನಮ್ಮ ಭಾರತದಲ್ಲಿ ಆಚರಿಸುತ್ತಿರುವಂತಹ ಪ್ರತಿಯೊಂದು ಧರ್ಮದ ಹಬ್ಬಗಳಿಗೆ ತನ್ನದೇ ಆದ ಪೌರಾಣಿಕ ಇತಿಹಾಸ ಇರುತ್ತದೆ, ಇತ್ತೀಚಿನ ದಿನಗಳಲ್ಲಿ ಕೆಲಸದ ಒತ್ತಡಗಳಿಂದಾಗಿ ಜೀವನದಲ್ಲಿ ಹಬ್ಬಗಳ ಆಚರಣೆ ಕಡಿಮೆಯಾಗುತ್ತಾ ಬರತಿದೆ ಇದರಿಂದಾಗಿ ಇಂದಿನ ಯುವಜನತೆಗೆ ನಮ್ಮ ಹಬ್ಬಗಳು ಯಾವುವು ಎಂಬುದು ತಿಳಿಯದಂತಾಗಿದೆ.

ಪರಂಪರೆಯಿಂದ ಆಚರಿಸಿಕೊಂಡು ಬಂದ ಹಬ್ಬಗಳತ್ತ ಗಮನಹರಿಸಿ ತಮ್ಮ ಮಕ್ಕಳಿಗೂ ಅದರ ಮಹತ್ವದ ಬಗ್ಗೆ ತಿಳಿಸಿ ಮುಂದಿನ ಯುವ ಪೀಳಿಗೆಗೆಮುಂದುವರಿಯುವಂತೆ ಮಾಡುವುದು ಎಲ್ಲರದು ಪ್ರಮುಖಕರ್ತವ್ಯವಾಗಬೇಕು. ನಾಡಿನ ವಿವಿಧ ಭಾಗಗಳಲ್ಲಿ ಹಲವಾರು ರೀತಿಯ ವಿಶೇಷವಾಗಿ ಪೂಜೆ ಪುನಸ್ಕಾರ ಮಾಡಿ ಸಿಹಿ ಅಡುಗೆ ಮಾಡಿ ವೈವಿದ್ಯಮಾಯವಾಗಿ ಆಚರಣೆ ಮಾಡಲಾಗುತ್ತದೆ.

ಈ ಹಬ್ಬದಂದು ನದಿಗಳಲ್ಲಿ ಸ್ನಾನ ಮಾಡಿ ಪೂಜೆ ಮುಗಿದ ನಂತರ ಊಟ ಮಾಡುವ ಸಂಸ್ಕೃತಿ ನಮ್ಮ ಭಾರತೀಯರದಾಗಿದೆ ಎಲ್ಲರು ಸುಖ ಸಮೃದ್ಧಿ ಇಂದ ಹಬ್ಬ ಆಚರಣೆ ಮಾಡಲಿ ಎನ್ನುವುದೇ ನನ್ನ ಆಶಯವಾಗಿದೆ ಮತ್ತೊಮ್ಮೆ ಎಲ್ಲರಿಗೂ ಸಂಕ್ರಾಂತಿ ಹಬ್ಬದ ಶುಭಾಶಯಗಳು.ಈ ಹಬ್ಬವು ಸಮೃದ್ಧಿಯ ಸಂಕೇತವಾಗಿದೆ.

ಕಾಶಿಬಾಯಿ. ಸಿ. ಗುತ್ತೇದಾರ ಪಾಳಾ
ಪತ್ರಿಕೋದ್ಯಮ ವಿದ್ಯಾರ್ಥಿನಿ ಶರಣಬಸವ ವಿಶ್ವ ವಿದ್ಯಾಲಯ ಕಲಬುರಗಿ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here