ಹಳ್ಳಿಗಳಿಗೆ ಬಸ್ ಸೌಕರ್ಯ ಒದಗಿಸಲು SFI ಆಗ್ರಹ

0
58

ದೇವದುರ್ಗ: ಭಾರತ ವಿದ್ಯಾರ್ಥಿ ಫೆಡರೇಷನ್‌ ( SFI ) ದೇವದುರ್ಗ ತಾಲ್ಲೂಕು ಸಮಿತಿಯಿಂದ ತಾಲ್ಲೂಕಿನ ವಿವಿಧ ಹಳ್ಳಿಗಳಿಗೆ ಬಸ್ ಸೌಕರ್ಯ ಹಾಗೂ ಪಾಸ್ ನೀಡಲು ಆಗ್ರಹಿಸಿ ಘಟಕ ವ್ಯವಸ್ಥಾಪಕರಿಗೆ ಮನವಿ ಸಲ್ಲಿಸಿದರು.

ಎಲ್ಲೆಡೆಯೂ ಶಾಲಾ, ಕಾಲೇಜುಗಳು ಆರಂಭವಾದ ಕಾರಣ ತಾಲ್ಲೂಕಿನ ವಿವಿಧ ಹಳ್ಳಿಗಳಿಂದ ನೂರಾರು ವಿದ್ಯಾರ್ಥಿಗಳು ನಿತ್ಯವೂ ತಾಲೂಕು ಕೇಂದ್ರವಾದ ದೇವದುರ್ಗಕ್ಕೆ ವಿದ್ಯಾಭ್ಯಾಸಕ್ಕಾಗಿ ತರಗತಿಗೆ ಹಾಜರಾಗಲು ಬರುತ್ತಿದ್ದಾರೆ. ಆದರೆ ಕೋವಿಡ್ ನಂತರ ತಾಲ್ಲೂಕಿನ ಅನೇಕ‌ ಗ್ರಾಮಗಳಿಗೆ ಓಡಾಡುತ್ತಿದ್ದ ಬಸ್ ಸೇವೆ ನಿಂತಿದೆ‌ ಕೆಲವೆಡೆ ವಿದ್ಯಾರ್ಥಿಗಳ ಸಂಖ್ಯೆಗೆ ಅನುಗುಣವಾಗಿ ಬಸ್ ಇಲ್ಲ‌ ಹಾಗಾಗಿ ಕೂಡಲೇ ಇದರಿಂದಾಗಿ ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳಿಗೂ ತಾಲ್ಲೂಕು ಕೇಂದ್ರ ಕ್ಕೆ ಬಂದು ಅಧ್ಯಯನ ಮಾಡಲು ಸಾಧ್ಯವಾಗುತ್ತಿಲ್ಲ.

Contact Your\'s Advertisement; 9902492681

ಸರಿಯಾದ ಸಾರಿಗೆ ವ್ಯವಸ್ಥೆ ಇಲ್ಲದ ಕಾರಣ‌ ಹಾಗೂ ಹಣಕಾಸಿನ ತೊಂದರೆರ ಪರಿಣಾಮ ವಿದ್ಯಾರ್ಥಿಗಳು ಶಾಲಾ – ಕಾಲೇಜು ಬಿಟ್ಟು ಶಿಕ್ಷಣ ವನ್ನು ಅರ್ಧಕ್ಕೆ ನಿಲ್ಲಿಸುತ್ತಿದ್ದಾರೆ ಮತ್ತೊಂದೆಡೆ ಶಿಕ್ಷಣದಿಂದ ವಂಚಿತರಾಗುತ್ತಿದ್ದಾರೆ ಆದ್ದರಿಂದ ಕೂಡಲೇ ತಾವುಗಳು ತಾಲ್ಲೂಕಿನ ಕಮಲದಿನ್ನಿ, ಗೂಗಲ್, ಹಟ್ಟಿ, ಜೋಳದಹೆಡಗಿ, ಅಂಜಸ್ಗೂರು, ಶಾವಂತಗೇರಾ, ರಾಮದುರ್ಗ, ಕೋಣಚಪ್ಪಳ್ಳಿ, ಚಿಕ್ಕ ಬೂದುರು, ಗೋಪಳಾಪುರ ಸೇರಿ ಇತರೆ ಗ್ರಾಮಗಳಿಗೆ ಬಸ್ ಸೌಕರ್ಯ ಕಲ್ಪಿಸಬೇಕು ನಿರ್ಲಕ್ಷ್ಯ ತೋರಿದರೆ ವಿದ್ಯಾರ್ಥಿ ಗಳೊಂದಿಗೆ ‌ಸೇರಿ ಉಗ್ರವಾದ ಹೋರಾಟಕ್ಕೆ ಮುಂದಾಗಬೇಕಾಗುತ್ತದೆಂದು  ಎಚ್ಚರಿಸಿದರು.

ಈ ಸಂಧರ್ಭದಲ್ಲಿ SFI ದೇವದುರ್ಗ ತಾಲ್ಲೂಕು ಕಾರ್ಯದರ್ಶಿ ಮಹಾಲಿಂಗ ದೊಡ್ಡಮನಿ ಮುಖಂಡರಾಸ ಸುನೀಲ್ ಕಲಂಗೃರಾತ, ವಿಶ್ವನಾಥ್, ನಾಗರಾಜ, ಮೌನೇಶ್, ರಮೇಶ್ ಸೇರಿದಂತೆ ಇತರರು ಇದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here