ಕಲಬುರಗಿ: ರಾಜ್ಯ ಚುನಾವಣಾ ಆಯೋಗವು ಕಲಬುರಗಿ ಜಿಲ್ಲೆ ತಾಲೂಕುವಾರು ಗ್ರಾಮ ಪಂಚಾಯಿತಿಗಳ ಅಧ್ಯಕ್ಷ ಹಾಗೂ ಉಪಾಧ್ಯಕ್ಷರ ಪ್ರವರ್ಗವಾರು ಮೀಸಲಾತಿಯನ್ನು ನಿಗದಿಪಡಿಸಿ ಅಧಿಸೂಚಿಸಿದ್ದು, ಈ ನಿಟ್ಟಿನಲ್ಲಿ ಮೀಸಲಾತಿಯನ್ನು ಗ್ರಾಮ ಪಂಚಾಯಿತಿವಾರು ನಿಯಮಾನುಸಾರ ಮರು ಹಂಚಿಕೆ ಮಾಡಬೇಕಾಗಿದೆ. ಈ ಪ್ರಕ್ರಿಯೆ ನಡೆಯಲು ಜಿಲ್ಲೆಯ ಈ ಕೆಳಕಂಡ ತಾಲೂಕುವಾರು ದಿನಾಂಕ, ಸಮಯ ಹಾಗೂ ಸ್ಥಳವನ್ನು ನಿಗದಿಪಡಿಸಲಾಗಿದೆ ಎಂದು ಕಲಬುರಗಿ ಜಿಲ್ಲಾಧಿಕಾರಿಗಳಾದ ವಿ.ವಿ.ಜೋತ್ಸ್ನಾ ಅವರು ತಿಳಿಸಿದ್ದಾರೆ.
ಶಹಾಬಾದ ತಾಲೂಕು: ಜನವರಿ 15 ರಂದು ಬೆಳಿಗ್ಗೆ 10 ಗಂಟೆಗೆ ಶಹಾಬಾದ ತಹಶೀಲ್ದಾರರ ಕಚೇರಿ ಎದುರಿಗೆಯಿರುವ ಗಂಗಮ್ಮ ಮರಗೋಳ ಕಾಲೇಜು.
ಚಿಂಚೋಳಿ ತಾಲೂಕು: ಜನವರಿ 16 ರಂದು ಬೆಳಿಗ್ಗೆ 10 ಗಂಟೆಗೆ ಚಿಂಚೋಳಿಯ ಸಿ.ಬಿ. ಪಾಟೀಲ್ ಪಿ.ಯು.ಕಾಲೇಜು.
ಕಾಳಗಿ ತಾಲೂಕು: ಜನವರಿ 16 ರಂದು ಮಧ್ಯಾಹ್ನ 2 ಗಂಟೆಗೆ ಕಾಳಗಿಯ ಕಾಳೇಶ್ವರ ದೇವಸ್ಥಾನದ ಕಾಳೇಶ್ವರ ಕಲ್ಯಾಣ ಮಂಟಪ.
ಜೇವರ್ಗಿ ತಾಲೂಕು: ಜನವರಿ 17 ರಂದು ಮಧ್ಯಾಹ್ನ 2 ಗಂಟೆಗೆ ಜೇವರ್ಗಿಯ ಭೂತಪೂರ ಕಲ್ಯಾಣ ಮಂಟಪ.
ಯಡ್ರಾಮಿ ತಾಲೂಕು: ಜನವರಿ 17 ರಂದು ಬೆಳಿಗ್ಗೆ 10 ಗಂಟೆಗೆ ಯಡ್ರಾಮಿಯ ಕಲ್ಯಾಣಿ ಕಾಂಪ್ಲೆಕ್ಸ್‍ನ ಕಲ್ಯಾಣಿ ಕಲ್ಯಾಣ ಮಂಟಪ.
ಆಳಂದ ತಾಲೂಕು: ಜನವರಿ 18 ರಂದು ಬೆಳಿಗ್ಗೆ 10 ಗಂಟೆಗೆ ಆಳಂದ ಗುರು ಭವನ.
ಅಫಜಲಪುರ ತಾಲೂಕು: ಜನವರಿ 18 ರಂದು ಮಧ್ಯಾಹ್ನ 2 ಗಂಟೆಗೆ ಅಫಜಲಪುರದ ನ್ಯಾಷನಲ್ ಫಂಕ್ಷನ್ ಹಾಲ್.
ಸೇಡಂ ತಾಲೂಕು: ಜನವರಿ 21 ರಂದು ಬೆಳಿಗ್ಗೆ 10 ಗಂಟೆಗೆ ಸೇಡಂ ಸುವರ್ಣ ಸೌಧ ಕಟ್ಟಡ.
ಚಿತ್ತಾಪುರ ತಾಲೂಕು: ಜನವರಿ 21 ರಂದು ಮಧ್ಯಾಹ್ನ 2 ಗಂಟೆಗೆ ಚಿತ್ತಾಪುರ ರಾವೂರ ರಸ್ತೆಯಲ್ಲಿರುವ ಕಿಂಗ್ ಪ್ಯಾಲೇಸ್ ಫಂಕ್ಷನ್ ಹಾಲ್.
ಕಲಬುರಗಿ ತಾಲೂಕು: ಜನವರಿ 22 ರಂದು ಮಧ್ಯಾಹ್ನ 2 ಗಂಟೆಗೆ ಕಲಬುರಗಿ ನಗರದ ಡಾ.ಎಸ್.ಎಂ.ಪಂಡಿತ ರಂಗಮಂದಿರ
ಕಮಲಾಪುರ ತಾಲೂಕು: ಜನವರಿ 22 ಬೆಳಿಗ್ಗೆ 10 ಗಂಟೆಗೆ ಕಮಲಾಪುರದ ಬಸವೇಶ್ವರ ಸರ್ಕಲ್ ಬಳಿ ಇರುವ ರೇವಣಸಿದ್ದೇಶ್ವರ ಕಲ್ಯಾಣ ಮಂಟಪ.
ಸಂಬಂಧಪಟ್ಟ ತಾಲೂಕಿನ ಎಲ್ಲಾ ಚುನಾಯಿತರಾದ ಗ್ರಾಮ ಪಂಚಾಯಿತಿಗಳ ಸದಸ್ಯರು ಚುನಾವಣಾಧಿಕಾರಿಗಳಿಂದ ನೀಡಲಾದ ಪ್ರಮಾಣಪತ್ರದೊಂದಿಗೆ ನಿಗದಿಪಡಿಸಿದ ಸಮಯಕ್ಕಿಂತ 1 ಗಂಟೆ ಮುಂಚಿತವಾಗಿ ಅವರವರ ಗ್ರಾಮ ಪಂಚಾಯಿತಿಗೆ ನಿಗದಿಪಡಿಸಲಾದ ಸ್ಥಾನದಲ್ಲಿ ಕೋವಿಡ್-19 ಸುರಕ್ಷತಾ ಕ್ರಮಗಳೊಂದಿಗೆ ಕುಳಿತುಕೊಳ್ಳಲು ಲಿಖಿತವಾಗಿ ಆಹ್ವಾನ ನೀಡಬೇಕು. ಎಲ್ಲರೂ ಕಡ್ಡಾಯವಾಗಿ ಮಾಸ್ಕ್ ಧರಿಸಲು ಸಂಬಂಧಪಟ್ಟ ತಾಲೂಕು ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿಗಳು ತಿಳಿಸಬೇಕು.
ಕಾರ್ಯನಿರ್ವಾಹಕ ಅಧಿಕಾರಿಗಳು ಕಡ್ಡಾಯವಾಗಿ ಪ್ರೊಜೆಕ್ಟರ್, ಪ್ರಿಂಟರ್, ಕಂಪ್ಯೂಟರ್, ಲ್ಯಾಪ್‍ಟಾಪ್, ಸ್ಕ್ರೀನ್, ಎರಡು ಆಪರೇಟರ್ ಹಾಗೂ ಇನ್ನಿತರ ಮೂಲಭೂತ ಲೇಖನ ಸಾಮಗ್ರಿಗಳು ಕಲ್ಪಿಸಬೇಕು. ಚುನಾವಣಾ ಆಯೋಗದ ಸೂಚನೆಯಂತೆ ಮೀಸಲಾತಿ ನಿಗದಿಪಡಿಸುವ ಪ್ರಕ್ರಿಯೆಯನ್ನು ಸೆರೆ ಹಿಡಿಯಲು ವಿಡಿಯೋಗ್ರಾಫರ್ ವ್ಯವಸ್ಥೆ ಮಾಡಿ, ಚಿತ್ರೀಕರಣದ ಸಿಡಿ ಸಿದ್ಧಪಡಿಸಿ ಕಲಬುರಗಿ ಜಿಲ್ಲಾಧಿಕಾರಿಗಳ ಕಾರ್ಯಾಲಯಕ್ಕೆ ಸಲ್ಲಿಸಬೇಕು.
ಸಂಬಂಧಪಟ್ಟ ಆಯಾ ತಾಲೂಕಿನ ಕಾರ್ಯನಿರ್ವಾಹಕ ಅಧಿಕಾರಿಗಳು ತಾಲೂಕು ಆರೋಗ್ಯಾಧಿಕಾರಿಗಳ ನೇತೃತ್ವದಲ್ಲಿ ಹ್ಯಾಂಡ್ ಸ್ಯಾನಿಟೈಜರ್ ಹಾಗೂ ಮಾಸ್ಕ್ ವ್ಯವಸ್ಥೆ ಮಾಡಿಸಬೇಕು. ಚುನಾಯಿತ ಗ್ರಾಮ ಪಂಚಾಯಿತಿ ಸದಸ್ಯರನ್ನು ಮಾತ್ರ ಗುರುತಿಸಿ ಅವರು ಒಳಗಡೆ ಬೀಡಲು ಸೂಕ್ತ ಸಿಬ್ಬಂದಿಗಳನ್ನು ನೇಮಿಸಬೇಕು. ಈ ಸ್ಥಳದಲ್ಲಿ ನಿರಂತರ ವಿದ್ಯುತ್ ಸಂಪರ್ಕ ಕಡಿತಗೊಳ್ಳದಂತೆ ಹಾಗೂ ವಿದ್ಯುತ್ ವ್ಯತ್ಯಯವಾದಲ್ಲಿ ಜನರೇಟರ್ ವ್ಯವಸ್ಥೆ ಮಾಡಬೇಕಲ್ಲದೇ ಕುಡಿಯುವ ನೀರಿನ ಸೌಲಭ್ಯ ಸಹ ಕಲ್ಪಿಸಬೇಕು.
ಸಂಬಂಧಪಟ್ಟ ಆಯಾ ತಾಲೂಕಿನ ಕಾರ್ಯನಿರ್ವಾಹಕ ಅಧಿಕಾರಿಗಳು ಹಾಗೂ ತಹಶೀಲ್ದಾರರ ಸಹಯೋಗದೊಂದಿಗೆ ಯಾವುದೇ ಲೋಪದೋಷವಾಗದಂತೆ ಮೇಲ್ಕಂಡ ವ್ಯವಸ್ಥೆ ಮಾಡಬೇಕೆಂದು ಜಿಲ್ಲಾಧಿಕಾರಿಗಳು ತಿಳಿಸಿದ್ದಾರೆ.