ಹೆಮ್ಮಾರಿ ಕೊರೊನಾ ದರ್ಬಾರ್ ನ ಕಹಿ ನೆನಪುಗಳು

0
83

ಮಹಾಮಾರಿ ಕೊರೊನಾ ಎಂಬ ವೈರಸ್ ಬಂದು ಒಬ್ಬರಿಂದ ಒಬ್ಬರಿಗೆ ಹರಡಿ, ಪ್ರಪಂಚವನ್ನೇ ತನ್ನ ಮುಷ್ಟಿಯಲ್ಲಿ ಇಟ್ಟುಕೊಂಡು ತನ್ನ ಸಾಮ್ರಾಜ್ಯವನ್ನಾಗಿಸುತ್ತಿರುವ  ಭಿತ್ತಿಯ ಆ ಕಹಿ ನೆನಪು ಮರೆಯಲಾಗದು.

ಪೂರ್ತಿ ಜಗತ್ತಿನಲ್ಲೇ ಎಲ್ಲರಿಗೂ ಹರಡಿಕೊಂಡು ಎಲ್ಲರ ಬದುಕಲ್ಲಿ ಅದರಲ್ಲೂ ಮುಖ್ಯವಾಗಿ ಬಡ ನಿರ್ಗತಿಕರ ಜೀವನದಲ್ಲಿ ಆಟವಾಡ ತೊಡಗಿತ್ತು. ಎಲ್ಲೆಲ್ಲೂ ನೋಡಿದರು, ಕೇಳಿದರು, ಕೇವಲ  ಕೊರೊನಾ ಆರ್ಭಟದ ಮಾತುಗಳು ವೈರಲ್ ಆಗತೊಡಗಿತ್ತು. ಹೊರಗಡೆ ಓಡಾಡೋ ಹಾಗಿಲ್ಲ. ಯಾರ ಜೊತೆನೂ ಸಂಪರ್ಕ ಸೇತುವೆಯನ್ನು ಬೆಳೆಸೋ ಹಾಗಿರಲಿಲ್ಲ. ಅದಕ್ಕಿಂತ ಮುಖ್ಯವಾಗಿ ಯಾರನ್ನು ಕೈ ಕುಲುಕುವಂತಿರಲಿಲ್ಲ.

Contact Your\'s Advertisement; 9902492681

ಈ ವೈರಸ್ ತನ್ನದೆ ಆದ್ ಲಕ್ಷಣಗಳನ್ನು ಹೊಂದಿದೆ…. ಕೆಮ್ಮು, ಸೀತ, ಜ್ವರ ಹೀಗೆ ಅನೇಕ ರೀತಿಯಲ್ಲಿ ವಿವಿಧ ಲಕ್ಷಣ ಹೊಂದಿತ್ತು. ದೇಶದೆಲ್ಲೆಡೆ ತನ್ನ ರಾಜ್ಯಬಾರವೆ ಕೊರೊನಾ ದಾಗಿತ್ತು. ಈ ಕರೋನ ಎಂಬುದು…… ಬರೆದಿದೆಲ್ಲಾ ಕವನವಲ್ಲ, ಕೆಮ್ಮಿದೆಲ್ಲ ಕೊರೊನಾವಲ್ಲ, ಕೇಳಿದೆಲ್ಲ ಸತ್ಯವಲ್ಲ ಎಂಬ ಮಾತಿನಂತಾತ್ತಿದರು, ವೈರಸ್ ಬಂದು ಯಾರು ಮನೆಯಿಂದ ಹೊರಗಡೆ ಬಾರದಂತಾಗಿದೆ ಮತ್ತೆ ಯಾವುದೇ ವಹಿವಾಟುಗಳಿಗೆ ಅವಕಾಶ ನೀಡದಂತೆ ತಡೆ ಗೋಡೆ ಸೃಷ್ಠಿ ಸಿತು.

ಹೈವೋಲ್ಟ್ ವಿದ್ಯುತ್ ತಂತಿ ಸ್ಪರ್ಷ: ಇಬ್ಬರು ಗಂಭೀರ

ಲಕ್ಡೌನ ಸಂದರ್ಭದಲ್ಲಿ ಯುವಕ ಯುವತಿಯರು ಯಾವ ಕಡೆನೂ ತಿರಗಾಡದಂತೆ ಅವರನ್ನ ಪಂಜರದಲ್ಲಿರುವಂತ ಗಿಳಿಯ ಹಾಗೆ ಮನೆಯಲ್ಲೇ ಕೂಡಿಹಾಕಿರುವ ಸಮಯ ಅದಾಗಿತ್ತು. ವಿದ್ಯಾರ್ಥಿಗಳಿಗೆ ಯಾವ ರೀತಿ ಇದ್ದರು ಕೂಡ ಸಮಾಧಾನ ಎಂಬುದು ಇರುವುದಿಲ್ಲ, ಏಕೆಂದರೆ ಕಾಲೇಜಿಗೆ ಹೋಗುವ ಸಂದರ್ಭದಲ್ಲಿ ಯಾವಾಗಪ್ಪ ರಜೆ ಕೊಡತಾರೆ, ಬಿಂದಾಸ ಆಗಿ ಯಾವಾಗ ಇರೋದು  ಅನ್ನುತ್ತಾರೆ.  ಆದರೆ ಕೊರೊನಾ ಇಂದ ಇಷ್ಟು ರಜೆ ಅನುಭವಿಸಿದ ನಂತರ ಮತ್ತೆ ಯಾವಾಗ ಕಾಲೇಜು ಸುರುಮಾಡುತ್ತಾರೆ ಎಂಬ ಶಾಲಾ, ಕಾಲೇಜಿನಿಂದ ಬೇಸರ ಗೊಂಡ ಮಕ್ಕಳಿಗೆ, ವಿದ್ಯಾರ್ಥಿಗಳಲ್ಲಿ ಆಶಾ ಭಾವನೆ ಬದಲಾಯಿಸುವ ಕ್ರೆಡಿಟ್ ಸಹ ಕೊರೊನಾಗೆ ಸಲ್ಲಬೇಕು.

ಎಲ್ಲಾ ಅಂಶಗಳು ಗಮನಿಸಿದರೆ ಒಂದು ಮಾತು ನೆನಪಾಗುತ್ತೆ….. ಕಾಲೇಜ್ ಇದ್ರೆ ಕ್ಲಾಸ್ ಬೋರ್. ಕ್ಲಾಸ್ ಇದ್ರೆ ಕಾಲೇಜ್ ಬೋರ್. ರಜೆ ಇದ್ರೆ ಮನೆ ಬೋರ್. ಮನೇಲಿದ್ರೆ ರಜೆ ಬೋರ್.

ಈ ಸಂದರ್ಭದಲ್ಲಿ ಪ್ರಾಣಿಪಕ್ಷಿ ಗಳಿಗೆ ಯಾವುದೇ ರೀತಿಯ ಆಹಾರ ಧಾನ್ಯ ಹಾಗೂ ನೀರು ಸಿಗದೇ ಎಲ್ಲೆಂದರಲ್ಲಿ ಸಾವು ಬದುಕಿನ ಮದ್ಯೆ ನಿಟ್ಟುಸಿರು ಬಿಡುತ್ತಿದವು. ಮಹಾಮಾರಿ ಇಂದು ತೊಲಗುತ್ತೆ ನಾಳೆ ಹೋಗುತ್ತೆ ಅಂದಿನಿಂದ ಇಲ್ಲಿವರೆಗೂ ಬಂದು ನಿಂತಿದೆ.

ರಾಜ್ಯಸಭೆ ವಿರೋಧ ಪಕ್ಷ ನಾಯಕರಾಗಿ ಡಾ. ಖರ್ಗೆ ಆಯ್ಕೆ: ಯುವ ಕಾಂಗ್ರೆಸ್ ದಿಂದ ವಿಜಯೋತ್ಸವ

ಚಿಕಿತ್ಸೆ ಫಲಕಾರಿಯಾಗದೆ ಹರಸಾಹಸ ಪಟ್ಟರು ಯಾರಿಂದಲೂ ತಡೆಗಟ್ಟಲು ಸಾಧ್ಯವಾಗಿರಲಿಲ್ಲ.  ಔಷದಿಗಳ ಪ್ರಯತ್ನ ನಡೆಯುತ್ತಲೇ ಇತ್ತು. ಇದಕ್ಕೆ ಒಂದೇ ಪರಿಹಾರ ಸದ್ಯಕ್ಕೆ ಎಲ್ರು ಮನೇಲಿರೋದು ಒಂದೇ ಪರಿಹಾರ ಎಂದು ಸರಕಾರ ತಿಳಿಸಿವೆ.

ಇಷ್ಟ ಆದರೂ ಸರಕಾರದ ಮಾತನ್ನು ಲೆಕ್ಕಿಸದೆ ಜನರು ಅವರ ಮಾತಿಗೆ ಯಾವುದೇ ರೀತಿಯ ಸ್ಪಂದನೆ ನೀಡಿದೆ ದಿನದಿಂದ ದಿನಕ್ಕೆ ತಮ್ಮ ಜೀವನವೇ ಲೆಕ್ಕಿಸದೆ ಮನೆಯಿಂದ ಹೊರಗಡೆ ಹೋಗುವುದನ್ನು ಬಿಡುತ್ತಿರಲಿಲ್ಲ. ಹಾಗೆ ಸಾಮಾಜಿಕ ಅಂತರ ಕಾಪಾಡಿಕೊಳ್ಳುತಿರಲಿಲ್ಲ. ದೇಶವನ್ನು ರಕ್ಷಿಸುವ ಪರಿಪಾಠದಿಂದಾಗಿ ಕಟ್ಟು ನಿಟ್ಟಿನಲ್ಲಿ ಕ್ರಮ ಕೈಗೊಂಡು ಲಕ್ಡೌನ ಜಾರಿಗೆ ತಂದರು. ಕಠಿಣ ಪರಿಸ್ಥಿತಿಯಲ್ಲೂ ಕಲಬುರಗಿ ನಗರದ ಶರಣಬಸವ ವಿಶ್ವವಿದ್ಯಾಲಯದವರು ಕಾಲೇಜು ವಿದ್ಯಾರ್ಥಿಗಳಿಗೆ ಯಾವುದೇ ರೀತಿಯ ವಿದ್ಯಾಭ್ಯಾಸ ಹಾಳಾಗಬಾರದು ಎಂಬ ಹಿತ ದೃಷ್ಟಿಯಿಂದ ಇಡೀ ಉತ್ತರ ಕರ್ನಾಟಕದಲ್ಲಿ ಆನ್ಲೈನ್ ತರಗತಿ ನಡೆಸಿರುವುದು ಹೆಮ್ಮೆಯ ಹೆಗ್ಗಳಿಕೆಗೆ ಮೊಟ್ಟ ಮೊದಲು ಪಾತ್ರದಾರಿ ಆಗಿದೆ. ಅದರ ಜೊತೆಗೆ ಈ ಕೋವಿಡ -19 ತಡೆಗಟ್ಟಲು ರಾಜ್ಯ ಸರಕಾರವು ತೆಗೆದುಕೊಂಡ ನಿರ್ಧಾರಕ್ಕೆ ವಿಶ್ವವಿದ್ಯಾಲಯ ಸಹಕರಿಸುವುದು ಎಂದರು.

ಒಟ್ಟಾರೆಯಾಗಿ ಇಡೀ ಉತ್ತರಕರ್ನಾಟಕದಲ್ಲಿ ಈ ಆನ್ಲೈನ್ ತರಗತಿಗಳನ್ನು ತೆಗೆದುಕೋಲುವುದರ ಮೂಲಕ ಶರಣಬಸವ ವಿಶ್ವವಿದ್ಯಾಲಯವು ಮೆಚ್ಚುಗೆಗೆ ಪಾತ್ರವಾಗಿದೆ. ಕೊರೊನಾ ವೈರಸ್ ತಡೆಗಟ್ಟುವಲ್ಲಿ ಜನರ ಪ್ರಾಣ, ದೇಶದ ಹಿತದೃಷ್ಟಿ ಇಂದ ನಮ್ಮ ಸರಕಾರ ಆಡಳಿತದಲ್ಲಿರುವ ಪ್ರಧಾನಿ ಯವರು ಎಲ್ಲರ ಸಹಭಾಗಿತ್ವದಲ್ಲಿ ತಮ್ಮ ಕಾರ್ಯವನ್ನು ನಿರ್ವಹಿಸುತ್ತಿರುವುದು ಅಮೂಲ್ಯವಾಗಿತ್ತು.

ಪಂಚಾಯತ್ ರಾಜ್ ಇಂಜಿನಿಯರಿಂಗ್ ವಿಭಾಗದಲ್ಲಿ ಅವ್ಯವಸ್ಥೆ: ಕ್ರಮ ಆಗ್ರಹ

‌ಇಂತಹ ಸಂದಿಗ್ದ ಪರಿಸ್ಥಿತಿಯಲ್ಲೂ ಪ್ರಧಾನಿ, ಮುಖ್ಯ ಮಂತ್ರಿ ಅದಕ್ಕಿಂತ ಮುಖ್ಯವಾಗಿ ತಮ್ಮ ಜೀವನ ಮನೆ ಮಠ ಬಿಟ್ಟು ಸದಾ ಸೇವೆಯಲ್ಲಿ ತೊಡಗಿರುವಂತಹ ಆರಕ್ಷಕ ಠಾಣೆಯ ಸಿಬ್ಬಂದಿ, ವೈದ್ಯರ ಪಾತ್ರ, ಆಶಾ ಕಾರ್ಯ ಕರ್ತರ ಪಾತ್ರ ಹಿರಿದಾಗಿದೆ. ಇವರೆಲ್ಲರ ಜೊತೆಗೆ ಮಾಧ್ಯಮ ಮಿತ್ರರು ಕೂಡ ತಮ್ಮ ಕರ್ತವ್ಯವನ್ನು ಸ್ವಇಚ್ಛೆ ಇಂದ ನಿರ್ವಹಿಸುತ್ತಿರುವುದು ತುಂಬಾ ದೊಡ್ಡದಾಗಿದೆ. ಇಂತಹ ಮಹಾನ ಸಾಧಕರಿಗೆ ಮನಪೂರ್ವಕ ಅಭಿನಂದನೆಗಳು ಸಲ್ಲುಸುವುದು ಹೆಮ್ಮೆಯ ವಿಷಯವೇ ಸರಿ. ಅಂತೂ ಇಂತೂ ಕೊನೆ ಸಂದರ್ಭದಲ್ಲಿ ಕಾಲೇಜು ಪುನರಾರಂಭವಾಯಿತು ಎಂದು ವಿದ್ಯಾರ್ಥಿಗಳಿಗೆ ಎಲ್ಲಿಲ್ಲದ ಉಲ್ಲಾಸ ಉಸ್ತವ ತುಂಬಿ ತುಳುಕಿತು ಇಷ್ಟುದಿನದಿಂದ ಮನೇಲೆ ಕಾಲ ಕಳೆದು ಬೇಸರಗೊಂಡ ಯುವಜನತೆಗೆ ಇದೊಂದು ಸಂತೋಷಕರ ವಿಷಯವಾಯಿತು ಎಂದು ಹೇಳಬಹುದು.

ಕಾಶಿಬಾಯಿ. ಸಿ. ಗುತ್ತೇದಾರ.
ಪತ್ರಿಕೋದ್ಯಮ ವಿದ್ಯಾರ್ಥಿನಿ

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here