ಕಲಬುರಗಿ: ನಗರದ ಡಾ. ಅಂಬೇಡ್ಕರ ಕಲಾ ವಾಣಿಜ್ಯ ಮತ್ತು ಸ್ನಾತಕೋತ್ತರ ಮಹಾವಿದ್ಯಾಲಯದಲ್ಲಿ ಹಮ್ಮಿಕೊಂಡಿದ ಸ್ವಾಮಿ ವಿವೇಕಾನಂದರ ಜನ್ಮ ದಿನಾಚರಣೆಯ ಅಂಗವಾಗಿ ರಾಷ್ಟ್ರೀಯ ಯುವದಿನ ಕಾರ್ಯಾಕ್ರಮವನ್ನು ರಾಮಕೃಷ್ಣ ವಿವೇಕಾನಂದ ಆಶ್ರಮ ಮುಖ್ಯಸ್ಥರಾದ ಪರಮ ಪೂಜ್ಯ ಸ್ವಾಮಿ ಮಹೇಶ್ವರಾನಂದಜಿ ಮಹಾರಾಜರು ಉದ್ಘಾಟಿಸಿದರು.
ನಂತರ ಮಾತನಾಡಿದ ಅವರು ವಿವೇಕಾನಂದರು ಬುದ್ಧನನ್ನು ಆರಾಧಿಸುತ್ತಿದ್ದರು. ವಿದ್ಯಾರ್ಥಿಗಳು ಧ್ಯಾನ, ತಪಸ್ಸು ಮಾಡುವುದರ ಮೂಲಕ ಮನಸ್ಸು ಏಕಾಗ್ರತೆ ಮಾಡಿಕೊಳ್ಳುವ ಮೂಲಕ ಜೀವನದಲ್ಲಿ ಗುರಿ ಮುಟ್ಟಲು ಸಾಧ್ಯವೆಂದು ಹೇಳಿದರು.
ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿದ ಕೆಪಿಇ ಸಂಸ್ಥೆಯ ಪ್ರಧಾನ ಕಾರ್ಯದರ್ಶಿಗಳಾದ ಡಾ. ಮಾರುತಿರಾವ ಡಿ. ಮಾಲೆ ಮಾತನಾಡಿ ನಮ್ಮ ದೇಶನ ಯುವಕರು ವ್ಯಸನಗಳಿಂದ ಮುಕ್ತರಾಗಿ ಬುದ್ಧ, ಬಸವ, ಡಾ. ಅಂಬೇಡ್ಕರ ಮತ್ತು ವಿವೇಕಾನಂದರ ವಿಚಾರಧಾರೆಗಳನ್ನು ಬೆಳೆಸಿಕೊಳ್ಳಬೇಕು ಎಂದು ಹೇಳಿದರು.
ಕಾಲೇಜಿನ ಪ್ರಾಚಾರ್ಯರಾದ ಡಾ. ಐ.ಎಸ್ ವಿದ್ಯಾಸಾಗರ, ಐಕ್ಯೂಎಸಿಸಂಯೋಜಕರಾದ ಪ್ರೋ. ಗಿರೀಶ ಮೀಶಿ, ಅಧೀಕ್ಷಕರಾದ ನರೇಂದ್ರ ಪಾಟೀಲ ಹಾಗೂ ಕಾಲೇಜಿನ ಎನ್‌ಎಸ್‌ಎಸ್ ಅಧಿಕಾರಿಗಳಾದ ಪ್ರೋ. ಸಿದ್ದಪ್ಪಾ ಎಮ್. ಕಾಂತಾ ಉಪಸ್ಥಿತರಿದ್ದರು, ಕಾರ್ಯಾಕ್ರಮದ ಸ್ವಾಗತವನ್ನು ಡಾ. ಗಾಂಧಿಜಿ ಮೋಳಕೇರೆ. ನಿರೂಪಣೆ ಪ್ರೊ. ಜ್ಯೋತಿ ರೇಷ್ಮಿ, ವಂದನೆ ಸಿದ್ದಪ್ಪ ಎಮ್ ಕಾಂತಾ ನೇರವೇರಿಸಿದರು.