ಕಲಬುರಗಿ: ಸ್ವಾಮಿ ವಿವೇಕಾನಂದರ ಜೀವನ ಪಾಠ ಪ್ರತಿಯೊಬ್ಬರಿಗೆ ಸೇವೆ ಮತ್ತು ತ್ಯಾಗವನ್ನು ತಿಳಿಸುತ್ತದೆ. ಅವರ ಸಂದೇಶಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳುವುದರಿಂದ ಉತ್ತಮ ಪ್ರಜೆಗಳಾಗಿ ರೂಪುಗೊಳ್ಳಲು ಸಾಧ್ಯ ಎಂದು ಶರಣ ಸಾಹಿತಿ ವಿಜಯಕುಮಾರ ತೇಗಲತಿಪ್ಪಿ ಹೇಳಿದರು.
ವಿವೇಕ ಸೋಶಿಯಲ್ ಫೌಂಡೇಷನ್ ಟ್ರಸ್ಟ್ ವತಿಯಿಂದ ನಗರದ ನಂದಿ ಕಾಲೋನಿಯಲ್ಲಿನ ನಂದೇಶ್ವರ ದೇವಾಲಯದ ಕಲ್ಯಾಣ ಮಂಟಪದಲ್ಲಿ ಶನಿವಾರ ಏರ್ಪಡಿಸಿದ ಸ್ವಾಮಿ ವಿವೇಕಾನಂದರ ೧೫೮ ನೇ ಜನ್ಮದಿನೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಸ್ವಾಮಿ ವಿವೇಕಾನಂದರು ನಮ್ಮ ದೇಶದ ಕೀರ್ತಿ ಪತಾಕೆಯನ್ನು ಜಗತ್ತಿಗೆ ಹಾರಿಸಿದ ಧೀರ ಸನ್ಯಾಸಿ ಎಂದು ಮಾರ್ಮಿಕವಾಗಿ ಹೇಳಿದರು.
ಪ್ರಾಸ್ತಾವಿಕ ನುಡಿಗಳನ್ನಾಡಿದ ಬಿಜೆಪಿ ನಗರ ಜಿಲ್ಲಾಧ್ಯಕ್ಷ ಸಿದ್ಧಾಜೀ ಪಾಟೀಲ, ವೀರ ಸನ್ಯಾಸಿ ಸ್ವಾಮಿ ವಿವೇಕಾನಂದರು ತಮ್ಮ ದೂರದೃಷ್ಠಿಯ ಆಲೋಚನೆಗಳು ಹಾಗೂ ಚಿಂತನೆಗಳಿಂದ ಸರ್ವ ಕಾಲಕ್ಕೂ ಪ್ರಸ್ತುತವೆನಿಸುತ್ತಾರೆ. ಇಲ್ಲಿನ ಧರ್ಮ, ಶಿಕ್ಷಣ, ಸಾಮಾಜಿಕ ವ್ಯವಸ್ಥೆ, ಭಾರತದ ಶ್ರೀಮಂತ ಸಂಸ್ಕೃತಿಯನ್ನು ಜಗತ್ತಿಗೆ ಸಾರಿದ ಮಹನೀಯ ವಿವೇಕಾನಂದರ ಕುರಿತು ಅನೇಕ ವರ್ಷಗಳಿಂದ ಇಂಥ ಕಾರ್ಯಕ್ರಮಗಳ ಮೂಲಕ ಪರಿಚಯಿಸುವ ಕಾರ್ಯ ನಡೆದಿದೆ ಎಂದರು.
ಟ್ರಸ್ಟ್ ಅಧ್ಯಕ್ಷ ವಿವೇಕ ಸೋಶಿಯಲ್ ಫೌಂಡೇಷನ್ ಟ್ರಸ್ಟ್ ಅಧ್ಯಕ್ಷ ಗುರುಪಾದಯ್ಯ ಸ್ವಾಮಿ ಅಧ್ಯಕ್ಷತೆ ವಹಿಸಿದ್ದರು. ಹೆಚ್ಕೆಸಿಸಿಐ ಉಪಾಧ್ಯಕ್ಷ ಶರಣು ಪಪ್ಪಾ, ಜಯದೇವ ಆಸ್ಪತ್ರೆಯ ಹೃದಯ ರೋಗ ತಜ್ಞ ಡಾ.ವೀರೇಶ ಪಾಟೀಲ ಹೆಬ್ಬಾಳ, ಸಹ ಪ್ರಾಧ್ಯಾಪಕಿ ಡಾ.ರೂಪಾ ಪಾಟೀಲ, ಡಾ.ಅನೀಲ ರೆಡ್ಡಿ, ಸುಭಾಶ್ಚಂದ್ರ ಜಾಕಪ್ಪಗೋಳ, ಸೂರ್ಯಕಾಂತ ಪೆದ್ದಿ ಮಾತನಾಡಿದರು. ಟ್ರಸ್ಟ ಪದಾಧಿಕಾರಿಗಳಾದ ವಿಷ್ಣು ಸುರಪೂರ, ಚನ್ನು ಛಪ್ಪರಬಂದಿ, ಸಂತೋಷ ಸಂಗಾ, ಸಿದ್ಧಾಜೀ ಪಾಟೀಲ, ಸಂಗಮೇಶ ಮನ್ನಳ್ಳಿ, ಸಂಜೀವ ಯಲ್ಲಮಾವಡಿ, ಶರಣು ಕಲಶೆಟ್ಟಿ, ರವೀಂದ್ರ ಪಾಟೀಲ, ಶರಣು ಟೆಂಗಳಿ, ಗುರು ಸ್ವಾಮಿ,ಶಿವಾನಂದ ಚಿಕ್ಕಮಠ, ಆನಂದ ಕಣಸೂರ, ಶಿವಕುಮಾರ ಹಾಗರಗಿ, ಅನೀಲ ದಸ್ತಾಪೂರ, ಅಶೋಕ ಬಿರಾದಾರ, ಶಿವಲಿಂಗ ಬೆಳ್ಳಿ, ರವೀಂದ್ರಕುಮಾರ ಭಂಟನಳ್ಳಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.
ಕೋರನಾ ಸಂಕಷ್ಟದ ಸಂದರ್ಭದಲ್ಲಿ ಸಾಮಾಜಿಕ ಸೇವೆಯಲ್ಲಿ ತೊಡಗಿಸಿಕೊಂಡಿರುವ ಅನೇಕ ಕೋರೊನಾ ವಾರಿಯರ‍್ಸಗಳನ್ನು ವಿಶೇಷ ಗೌರವಿಸಲಾಯಿತು.