ನೀರಿನಾಸರೆಗಳ ಗಣತಿ ಕಾರ್ಯದ ನೀರಿನ ಮೂಲಗಳ ಪರಿಶೀಲನೆ ಮಾಡಿದ ಐಎಎಸ್ ಅಧಿಕಾರಿ

0
150

ಶಹಾಬಾದ:ನಗರಸಭೆಯಿಂದ ಸಣ್ಣ ನೀರಾವರಿ ಹಾಗೂ ನೀರಿನಾಸರೆಗಳ ಗಣತಿ ಕಾರ್ಯದ ನೀರಿನ ಮೂಲಗಳ ಪರಿಶೀಲನೆ ಮಾಡುತ್ತಿರುವ ನಗರಸಭೆ ಸಿಬ್ಬಂದಿಗಳ ಕಾರ್ಯವನ್ನು ಐಎಎಸ್ ಅಧಿಕಾರಿ ಡಾ.ಆಕಾಶ ಶಂಕರ ಪರಿಶೀಲಿಸಿದರು.

ಐಎಎಸ್ ಅಧಿಕಾರಿ ಡಾ.ಆಕಾಶ ಅವರು ನಗರದ ರಾಘವೇಂದ್ರ ಮಠದ ಮುಂಭಾಗದಲ್ಲಿರುವ ನಗರಸಭೆಯ ಕೊಳವೆ ಬಾವಿಯನ್ನು ಪರಿಶೀಲಿಸಿದರು.ಅಲ್ಲದೇ ಪ್ರತಿಯೊಂದು ವಾರ್ಡಗಳಲ್ಲಿರುವ ನೀರಿನ ಮೂಲಗಳ ನಿಖರವಾದ ಅಂಕಿ-ಅಂಶಗಳನ್ನು ದಾಖಲಿಸಬೇಕೆಂದು ಸಿಬ್ಬಂದಿಗಳಿಗೆ ತಾಕೀತು ಮಾಡಿದರು.

Contact Your\'s Advertisement; 9902492681

ನೀರಿನಾಸರೆಗಳ ನಿಖರವಾದ ಮಾಹಿತಿಯನ್ನು ಸಂಗ್ರಹಿಸುವ ಕಾರ್ಯ ಮುಗಿಯುವವರೆಗೂ ನಿರಂತರವಾಗಿ ನಡೆಯಬೇಕು. ನಗರಸಭೆಯ ವ್ಯಾಪ್ತಿಯ ೨೭ ವಾರ್ಡಗಳಲ್ಲಿನ ಅಗೆದ ಬಾವಿ, ಆಳವಿಲ್ಲದ ಕೊಳವೆ ಬಾವಿಗಳು,ಮಧ್ಯಮ ಆಳದ ಕೊಳವೆ ಬಾವಿಗಳು,ಕೊಳವೆ ಬಾವಿಗಳು ಇತರ ನೀರಿನ ಮೂಲಗಳು ಎಷ್ಟಿವೆ ಎಂಬ ಮಾಹಿತಿಯನ್ನು ನಿಖರವಾಗಿ ಸಂಗ್ರಹಿಸುವಂತಹ ಕಾರ್ಯವಾಗುವ ಮೂಲಕ ಗಣತಿ ಕಾರ್ಯವನ್ನು ಸಮರ್ಪಕವಾಗಿ ನಿರ್ವಹಿಸಬೇಕೆಂದು ಹೇಳಿದರು.ಅಲ್ಲದೇ ಈ ಕಾರ್ಯವನ್ನು ಕಾಟಾಚಾರಕ್ಕಾಗಿ ಮಾಡದೇ ಅದು ನಿಖರದಿಂದ ಕೂಡಿರಬೇಕು ಎಂದು ಹೇಳಿದರು.

ನಗರಸಭೆಯ ಪೌರಾಯುಕ್ತ ಡಾ.ಕೆ.ಗುರಲಿಂಗಪ್ಪ, ಎಇ ಶಾಂತರೆಡ್ಡಿ ದಂಡಗುಲಕರ್, ಜೆಇ ಮೌಲಾಲಿ, ಸೇರಿದಂತೆ ಸಿಬ್ಬಂದಿ ವರ್ಗದವರು ಹಾಜರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here