ಬೇಳೆ ಕಾರ್ಖಾನೆಯ ಕಾರ್ಮಿಕರಿಗೆ ಆರೋಗ್ಯ ಮತ್ತು ಸುರಕ್ಷತೆ ತರಬೇತಿ

0
65

ಕಲಬುರಗಿ: ಕೃಷಿ ವಿಶ್ವವಿದ್ಯಾನಿಲಯ, ಜಿ.ಕೆ.ವಿ.ಕೆ. ಬೆಂಗಳೂರು. ಕೃಷಿ ವಿಜ್ಞಾನ ಕೆಂದ್ರ, ಕಲಬುರಗಿ, ಕರ್ನಾಟಕ ರಾಜ್ಯ ಕೃಷಿ ಮಾರಾಟ ಮಂಡಳಿ, ಕಲಬುರಗಿ ಮತ್ತು ಕೃಷಿ ಮಾರಾಟ ಇಲಾಖೆ. ಇವರ ಸಹಯೋಗದೊಂದಿಗೆ ಬೇಳೆಕಾರ್ಖಾನೆಯ ಕಾರ್ಯನಿರ್ವಹಿಸುವ ಕಾರ್ಮಿಕರಿಗೆ ಆರೋಗ್ಯ ಮತ್ತು ಸುರಕ್ಷತೆ ಅರಿವು ತರಬೇತಿ ಕಾರ್ಯಕ್ರಮವನ್ನು ನಗರದ ಕಪ್ನೂರ್ ಬಳಿಯ ಗ್ಲೋಬಲ್ ದಾಲ್ ಮಿಲ್‌ನಲ್ಲಿ ನಡೆಯಿತು.

ಕಾರ್ಯಕ್ರಮದ ಅಧ್ಯಕ್ಷತೆ ಕೃಷಿ ಮಾರಾಟ ಇಲಾಖೆಯ ಸಾಹಾಯಕ ನಿರ್ದೆಶಕರು ಅನೀಲ್‌ಕುಮಾರ್ ಹಾದಿಮನಿ ತೊಗರಿ ಬೇಳೆಗೆ ವಿಶ್ವದರ್ಜೆ ಸ್ಧಾನ ದೊರೆಕಿದ್ದು ಕಾರ್ಮಿಕ ವರ್ಗದವರು ಕಾರ್ಖಾನೆಗಳಲ್ಲಿ ಸುರಕ್ಷಿತವಾಗಿ ಕಾರ್ಯಮಾಡಿ ಎಂದು ಹೇಳಿದರು.

Contact Your\'s Advertisement; 9902492681

ಕರ್ನಾಟಕರಾಜ್ಯ ಕೃಷಿ ಮಾರಾಟ ಮಂಡಳಿಯ ಪ್ರಧಾನ ವೆವಸ್ಧಾಪಕರು ಶ್ರೀ. ಚಂದ್ರಕಾಂತ ಪಾಟೀಲ್ ಮಾತನಾಡಿ ವಾಹನಗಳ ಚಾಲನೆ, ಕಾರ್ಖಾನೆಯ ಯಂತ್ರೋಪಕರಣಗಳು ಸುಧಾರಿತವಾಗಿದ್ದು ಎಚ್ಚರಿಕೆ ಕ್ರಮ ಕೈಗೊಳ್ಳಬೇಕು, ಮುಂದಿನ ದಿನಗಳಲ್ಲಿ ಕಲಬುರಗಿಯ ತೊಗರಿ ವಾಣಿಜ್ಯಮಟ್ಟದಲ್ಲಿ ಬೆಳೆಯಲಿದೆ ಎಂದು ತಿಳಿಸಿದರು.

ಕೆ.ವಿ.ಕೆ ವಿಜ್ಞಾನಿಯಾದ ಜಹೀರ್‌ಅಹಮದ್ ಮಾತನಾಡಿ ರಕ್ಷಣಾತ್ಮಕ ಉಪಕರಣಗಳಾದ ಸುರಕ್ಷತಾ ಹೆಲ್‌ಮೆಟ್, ಕನ್ನಡಕ, ಸುರಕ್ಷತಾ ಮುಖವಾಡ, ಕೈಗವಸಗಳು, ಸುರಕ್ಷ ಇಪ್ರನ್ ಕವಚಗಳ ಬಳಕೆ ಕೆಲಸದ ಸಮಯದಲ್ಲಿ ಬಳಸಬೇಕು ಕೆಲಸಗಾರರ ಹಾಗೂ ಕುಟುಂಬದ, ಸಮಾಜದ ಆರೋಗ್ಯ ಕಾಪಾಡುವುದು ಎಲ್ಲರ ಕರ್ತವ್ಯ ಎಂದು ತಿಳಿಸಿದರು.

ಕೃಷಿ ವಿಶ್ವವಿದ್ಯಾನಿಲಯ, ಜಿ.ಕೆ.ವಿ.ಕೆ. ಬೆಂಗಳೂರು ಆಹಾರ ವಿಜ್ಙಾನ ಮತ್ತು ಪೋಷಣೆ ವಿಭಾಗದ ಸ್ನಾತಕೋತ್ತರ ವಿಧ್ಯಾರ್ತಿ ದೀಪಕ ಸದಾನಂದೆ ಉತ್ತಮ ಆರೋಗ್ಯಕ್ಕಾಗಿ ಸಮತೋಲನ ಆಹಾರದ ಮಹತ್ವವನ್ನು ಮಿಲ್‌ನ ಕಾರ್ಮಿಕರಿಗೆ ತಿಳಿಸಿ ಪ್ರಾಸ್ತಾವಿಕ ನುಡಿ ಹೇಳಿ ತರಬೇತಿಯ ಮಹತ್ವದ ಕುರಿತು ಮಾತನಾಡಿದರು, ಸೈದಪ್ಪ ನಾಟಿಕರ್ ವಂದಿಸಿದರು. ಆರೋಗ್ಯರಕ್ಷಣೆಗಾಗಿ ವಯಕ್ತಿಕ ರಕ್ಷಣಾತ್ಮಕ ಉಪಕರಣ ಕಿಟ್ ನೀಡಲಾಯಿತು.

ನಂದೂರ್ ಬಳಿಯ ರವಿ ದಾಲ್ ಮಿಲ್‌ನಲ್ಲಿಯು ಕೂಡ ಸುರಕ್ಷತಾ ಕಿಟ್ಸ್‌ಗಳು ಕಾರ್ಮಿಕರಿಗೆ ನೀಡಲಾಯಿತು. ಸುಮಾರು ೫೫ ದಾಲ್ ಮಿಲ್‌ಕಾರ್ಮಿಕರು ಪಾಲ್ಗೊಂಡಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here