ವಿಜಯಪುರ: ಆಹೇರಿಯ ಶ್ರೀ ಬಸವೇಶ್ವರ ಕರ್ಮವೀರ, ಕಲಾ, ಸಾಹಿತ್ಯ, ಸಂಸ್ಕೃತಿ ವೇದಿಕೆ ಕೊಡಮಾಡುವ ಪ್ರತಿಷ್ಠಿತ ಬಸವರತ್ನ ರಾಷ್ಟ್ರೀಯ ಪ್ರಶಸ್ತಿಗೆ ಪತ್ರಕರ್ತ ಭೀಮಾಶಂಕರ ಎಂ. ಫಿರೋಜಾಬಾದ್ ಅವರಿಗೆ ಉಪ ಲೋಕಾಯುಕ್ತ ಬಿ. ಸಿ. ಪಾಟೀಲ್ ಪ್ರದಾನ ಮಾಡಿದ ಹಿನ್ನೆಲೆಯಲ್ಲಿ ಕಲಬುರಗಿಯಲ್ಲಿ ಶನಿವಾರ ಸಂಜೆ ಸ್ನೇಹ ಸಂಗಮ ವಿವಿದ್ದೋದೇಶ ಸಂಘದಿಂದ ಸತ್ಕರಿಸಲಾಯಿತು.
ಈ ಸಂದರ್ಭದಲ್ಲಿ ಹಿರಿಯ ಪತ್ರಕರ್ತ ಜಯತೀರ್ಥ ಕಾಗಲಕರ್, ನ್ಯಾಯವಾದಿ ಹಣಮಂತರಾಯ ಅಟ್ಟೂರ್, ಮಂಜುನಾಥ ಬಿರಾದಾರ್ ಆಲಗೂಡ, ಪ್ರಭು ಬಿರಾದಾರ್ ಶ್ರೀಚಂದ, ಸೋಮಶೇಖರ ಚವ್ಹಾಣ ಮತ್ತಿತರರಿದ್ದರು.