ದೃಶ್ಯಕಲೆ ಮನುಷ್ಯನ ಬದುಕಿನ ಅವಿಭಾಜ್ಯ ಅಂಗ: ಡಾ. ಕೆ ರವೀಂದ್ರನಾಥ

0
59

ಕಲಬುರಗಿ: ಕಲೆ ಮನುಷ್ಯನ ಬದುಕಿನ ಒಂದು ಅವಿಭಾಜ್ಯ ಅಂಗ ದೃಶ್ಯಕಲೆಯ ಪ್ರಕಾರಗಳಾದ ಚಿತ್ರ-ಶಿಲ್ಪ, ಛಾಯಾಚಿತ್ರ, ವಾಸ್ತಿ ಶಿಲ್ಪ, ರೇಖಾಚಿತ್ರಗಳನ್ನು ವಸ್ತುನಿಷ್ಠ ವಿಮರ್ಶೆಗೆ ಒಳಪಡಿಸಬೇಕು ಇದರಿಂದ ಅದರ ಆಶಯ, ಗುರಿ ಮತ್ತು ಉದ್ದೇಶ ಜನಸಾಮನ್ಯರಿಗೆ ಅರ್ಥೈಸಲು ಸಾಧ್ಯವಾಗುತ್ತದೆ ಎಂದು ಹಂಪಿಯ ಕನ್ನಡ ವಿಶ್ವವಿದ್ಯಾಲಯದ ಲಲಿತಕಲಾ ನಿಕಾಯದ ಡೀನರು ಮತ್ತು ಹಸ್ತಪ್ರತಿ ವಿಭಾಗದ ಪ್ರಾಧ್ಯಪಕರಾದ ಡಾ. ಕೆ ರವೀಂದ್ರನಾಥ ಅವರು ಹೇಳಿದರು.

ಅವರು ನಗರದ ರಂಗಾಯಣದ ಕಲಾಗ್ಯಾಲರಿಯಲ್ಲಿ ದೃಶ್ಯಬೆಳಕು ಸಾಂಸ್ಕೃತಿಕ ಸಂಸ್ಥೆಯು ಏಳನೆಯ ವಾರ್ಷಿಕ ಕಲಾಪ್ರದರ್ಶನದ ಅಂಗವಾಗಿ ಏರ್ಪಡಿಸಿದ ಚಿತ್ರಕಲಾ ಪ್ರದರ್ಶನ, ದೃಶ್ಯಬೆಳಕು ಗೌರವ ಪುರಸ್ಕಾರ ಮತ್ತು ದೃಶ್ಯಬೆಳಕು ಪ್ರಶಸ್ತಿ ಪ್ರದಾನ ಕಾರ್ಯಕ್ರಮದಲ್ಲಿ ಪ್ರಶಸ್ತಿ ಪ್ರದಾನ ಮಾಡಿ ಮಾತನಾಡಿದರು ದೃಶ್ಯಕಲೆ ಸಮಕಾಲೀನ ಸಮಾಜದ ಸ್ಥತಿಗತಿಗಳನ್ನು ಬಿಂಬಿಸುತ್ತದೆ. ಚಿತ್ರ-ಶಿಲ್ಪಗಳು ಮತ್ತು ಸಾಹಿತ್ಯ ಕಾವ್ಯಗಳು ನೂರಾರು ವರ್ಷಗಳ ಇತಿಹಾಸ ಚರಿತ್ರಾವಳಿಗಳನ್ನು ಮುಂದಿನ ಪಿಳಿಗೆಗೆ ಹಸ್ತಾಂತರಿಸುವ ಮಾಧ್ಯಮಗಳಾಗಿ ಕಾರ್ಯನಿರ್ವಹಿಸುತ್ತವೆ ಎಂದು ಅವರು ತಿಳಿಸಿದರು ಪ್ರಾಚಿನ ಕಾಲದಿಂದಲೂ ಕಲೆ-ವಾಸ್ತು ಶಿಲ್ಪಗಳು ಸಮಾಜದ ಏಳಿಗೆಯನ್ನೆ ಗಮನದಲ್ಲಿಟ್ಟುಕೊಂಡು, ಪೋಷಿಸಿಕೊಂಡು ಬರಲಾಗಿದೆ.

Contact Your\'s Advertisement; 9902492681

ಈ ನಿಟ್ಟಿನಲ್ಲಿ ಕಲ್ಯಾನ ಕರ್ನಾಟಕ ಭಾಗದಲ್ಲಿ ಎಲೆಮರಿಯ ಕಾಯಿಯಂತಿರುವ ದೃಶ್ಯ ಕಲಾವಿದರನ್ನು ಮತ್ತು ಯುವಪ್ರತಿಭೆಗಳನ್ನು ಗುರುತಿಸಿ ಪ್ರೋತ್ಸಾಹಿಸುವಂತಹ ಮಹತ್ವದ ಕಾರ್ಯ ಚಿತ್ರಕಲಾವಿದ ಡಾ. ಪರಶುರಾಮ ಪಿ ಅವರ ನೇತೃತ್ವದಲ್ಲಿ ದೃಶ್ಯಬೆಳಕು ಸಾಂಸ್ಕೃತಿಕ ಸಂಸ್ಥೆಯು ಮಾಡುತ್ತಿರುವುದು ಅತ್ಯಂತ ಶ್ಲಾಘನೀಯವಾದದು. ಈ ಭಾಗ ಕಲಾ-ಶಿಲ್ಪಗಳು, ಶಾಸನಗಳು, ಸಾಹಿತ್ಯ ಕೃತಿಗಳಿಗೆ ಮಾತೃಭೂಮಿ ಈ ಕಾರಣದಿಂದಾಗಿ ಪ್ರಾಚೀನ ಕಾಲದಲ್ಲಿ ರಾಜವೈಭವದಿಂದ ಮೆರೆದ ನಾಡು ಇದಾಗಿದೆ ಎಂದರು.

ಏಳನೆಯ ವಾರ್ಷಿಕ ಕಲಾಪ್ರದರ್ಶನದ ಉದ್ಘಾಟಕರಾಗಿ ಆಗಮಿಸಿದ ಡಾ. ಹಣಮಂತ ಮಂತಟ್ಟಿ ಮತ್ತು ಮುಖ್ಯ ಅತಿಥಿಯಾಗಿ ಆಗಮಿಸಿದ ಕರ್ನಾಟಕ ಶಿಲ್ಪಕಲಾ ಅಕಾಡೆಮಿಯ ಸದಸ್ಯರಾದ ಶ್ರೀ ನಟರಾಜ ಎಂ ಶಿಲ್ಪಿ ಅವರು ಮಾತನಾಡಿದರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಕರ್ನಾಟಕ ಜಾನಪದ ಅಕಾಡೆಮಿಯ ಸದಸ್ಯರಾದ ಡಾ. ರಾಜೇಂದ್ರ ಯರನಾಳೆ ಅವರು ಮಾತನಾಡುತ್ತಾ ಈ ಭಾಗ ಎಲ್ಲಾ ರಿತಿಯಿಂದಲೂ ಶ್ರೀಮಂತ ಭರಿತ ನೆಲೆಬಿಡಾಗಿದೆ. ಆದರೆ ಯುವ ಕಲಾವಿದರಿಗೆ, ಕಲಾಸಕ್ತರಿಗೆ ಪ್ರೇರಣೆ, ಪ್ರೋತ್ಸಾಹ ನೀಡಿದರೆ ಈ ಭಾಗದ ಕಲಾವಿದರು ಯಾರಿಗೂ ಎನು ಕಮ್ಮಿ ಇಲ್ಲ ಎಂದರು. ಯಾವುದೆ ಕಲಾಪ್ರಕರದಲ್ಲಿ ಶ್ರೇಷ್ಠ ಅಥವಾ ಕನಿಷ್ಠ ಎಂಬುವುದು ಮನುಷ್ಯ ಮಾಡಿಕೊಂಡ ಬೇಧ-ಭಾವ. ಇಲ್ಲಿ ಎಲ್ಲವೂ ಶ್ರೇಷ್ಠವಾಗಿದೆ. ಯಾವುದೇ ಪ್ರಕಾರದ ಕ್ಷೇತ್ರದಲ್ಲಿ ಧನಾತ್ಮಕ ಭಾವನೆಯಿಂದ ತೊಡಗಿಸಿಕೊಂಡರೆ ಕಲಾಭಿವ್ಯಕ್ತಿ ಪರಿಪಕ್ವಗೊಳ್ಳುತ್ತದೆ ಎಂದು ಮಾರ್ಮಿಕವಾಗಿ ನುಡಿದರು.

ಕಾರ್ಯಕ್ರಮದಲ್ಲಿ ದೃಶ್ಯಬೆಳಕು ಸಾಂಸ್ಕೃತಿಕ ಸಂಸ್ಥೆಯ ಅಧ್ಯಕ್ಷರಾದ ಡಾ. ಪರಶುರಾಮ ಪಿ ಅವರು ಕಾರ್ಯಕ್ರಮದ ಕುರಿತು ಪ್ರಾಸ್ತಾವಿಕವಾಗಿ ಮಾತನಾಡಿದರು. ಶ್ರೀ ಸಂಗಯ್ಯ ಹಳ್ಳದಮಠ ಅವರು ಪ್ರಾರ್ಥಿಸಿದರು. ಕು ನಯನಾ ಬಿ. ಸ್ವಾಗತ ಕೋರಿ ಕಾರ್ಯಕ್ರಮ ನಿರೂಪಿಸಿದರು. ಬಿ.ಎನ್. ಪಾಟೀಲ ವಂದಿಸಿದರು. ಡಾ. ವಿಜಯ ಹಾಗರಗುಂಡಗಿ, ಡಾ. ಕಾಶಿನಾಥ ಅಂಬಲಗೆ, ಶಂಕ್ರಯ್ಯ ಘಂಟಿ, ಬಸವರಾಜ ಎಲ್ ಜಾನೆ, ವಿ.ಬಿ. ಬಿರಾದರ. ಬಾಬುರಾವ ಹೆಚ್. ಅಂಬರಾಯ ಚಿನ್ನಮಳ್ಳಿ, ಗಿರೀಶ ಕುಲಕರ್ಣಿ, ಈಶ್ವರ ಇಂಗನ್, ಎಂ.ಎಚ್. ಬೆಳಮಗಿ, ಮಂಗಳಾ ಉಪ್ಪಿನ್, ಚಿತ್ರಲೇಖಾ ಪಾಟೀಲ ಮುಂತಾದವರು ಇದ್ದರು.

ದೃಶ್ಯಬೆಳಕು ಪ್ರಶಸ್ತಿ ಪ್ರದಾನ: ದೃಶ್ಯಬೆಳಕು ಸಾಂಸ್ಕೃತಿಕ ಸಂಸ್ಥೆಯ ೨೦೨೦ನೇ ಸಾಲಿನ ದೃಶ್ಯಬೆಳಕು ಗೌರವ ಪುರಸ್ಕಾರವನ್ನು ಹಿರಿಯ ಕಲಾವಿದ ಎಸ್.ಎಸ್. ಸಿಂಪಿ ಅವರಿಗೆ ನೀಡಿ ಗೌರವಿಸಲಾಯಿತು. ರಾಜ್ಯ ಮಟ್ಟದ ಏಳನೆಯ ವಾರ್ಷಿಕ ಚಿತ್ರಕಲಾ ಸ್ಪರ್ಧೆಯಲ್ಲಿ ವಿಜೇತರಾದ ಶೋಭಾ ಚೌಧರಿ (ಕಲಬುರಗಿ), ಅಭಿಲಾಷ ಡಿ. (ಮಂಡ್ಯ), ನಿಂಗನಗೌಡ ಸಿ. ಪಾಟೀಲ (ಕಲಬುರಗಿ), ರಾಮಪ್ಪ ಸಾಸನೂರ (ವಿಜಯಪೂರ), ಜಗದೀಶ ಜೀರಗಾಳ (ಬಾಗಲಕೋಟೆ), ಭೀಮಪ್ಪ ಎಂ. ಕಂಬಾರ (ಬಾಗಲಕೋಟೆ) ಇವರಿಗೆ ದೃಶ್ಯಬೆಳಕು ವಾರ್ಷಿಕ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಕರ್ನಾಟಕ ಲಲಿತಕಲಾ ಅಕಾಡೆಮಿಯ ಗೌರವ ಪ್ರಶಸ್ತಿ ಪುರಸ್ಕೃತರಾದ ಶ್ರೀ ಪ್ರಕಾಶ ಗಡಕರ ಮತ್ತು ಯುಜಿಸಿಯ ನೆಟ್ ಪರೀಕ್ಷೆ ಮತ್ತು ಕೆಸೆಟ್ ಪರೀಕ್ಷೆಯಲ್ಲಿ ಉತ್ತೀರ್ಣರಾದ ಚಿತ್ರಕಲಾವಿದೆ ನಯನಾ ಬಿ. ಅವರಿಗೆ ಇದೆ ಸಂದರ್ಭದಲ್ಲಿ ಸನ್ಮಾನಿಸಲಾಯಿತು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here