ಶಾಲೆಗಳ ಅವ್ಯವಸ್ಥೆ ಸುಧಾರಣೆಯಲ್ಲಿ ಅಧಿಕಾರಿಗಳ ವಿಫಲ: ಬಸವರಾಜ ಕೊರಳ್ಳಿ ಆರೋಪ

0
28

ಆಳಂದ: ತಾಲೂಕಿನಲ್ಲಿ ಕೋವಿಡ್-೧೯ ನಂತರ ಜ.೧ರಂದು ಆರಂಭಗೊಂಡ ಸರ್ಕಾರಿ ಪ್ರಾಥಮಿಕ ಮತ್ತು ಪ್ರೌಢಶಾಲೆಗಳಲ್ಲಿ ಅವ್ಯವಸ್ಥೆಯಿಂದ ಕೂಡಿದರು ಸಹಿತ ಸಂಬಂಧಿತ ಶಿಕ್ಷಣಾಧಿಕಾರಿಗಳು ಯಾವುದೇ ಸುಧಾರಣೆ ಕೈಗೊಳ್ಳಲಾದೆ ವಿಫಲವಾಗಿದ್ದಾರೆ ಎಂದು ಜಯ ಕರ್ನಾಟಕ ಸಂಘಟನೆಯ ತಾಲೂಕು ಅಧ್ಯಕ್ಷ ಬಸವರಾಜ ಎಸ್. ಕೊರಳ್ಳಿ ಅವರು ಇಂದಿಲ್ಲಿ ಆರೋಪಿಸಿದರು.

ಪಟ್ಟಣದಲ್ಲಿ ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು, ಕ್ಷೇತ್ರ ಶಿಕ್ಷಣಾಧಿಕಾರಿಗಳು ಅನ್ನುವುದನ್ನು ಮರೆತು ರಾಜಕೀಯ ನಾಯಕರಂತೆ ಸುಮಾರು ೮ರಿಂದ೧೦ ಜನ ಶಿಕ್ಷಕರನ್ನು ಜೊತೆಗೆ ತೆಗೆದುಕೊಂಡು ದಿನಕ್ಕೊಂದು ಕಾರ್ಯಕ್ರಮ ಮಾಡುತ್ತಿದ್ದಾರೆ. ಆದರೆ, ಆ ಶಿಕ್ಷಕರ ಹಾಜರಿ ಹೇಗೆ ಮತ್ತು ಆ ಶಾಲೆಯ ಮಕ್ಕಳ ಪಾಠ ಬೋಧನೆ ಹೇಗೆ ಅನ್ನುವಂಥ ಪ್ರಶ್ನೆ ಅನೇಕ ಶಿಕ್ಷಣ ಪ್ರೇಮಿಗಳ ಹಾಗೂ ನಿಷ್ಠಾವಂತ ಶಿಕ್ಷಕರ ಪ್ರಶ್ನಿಸುತ್ತಿದ್ದಾರೆ.

Contact Your\'s Advertisement; 9902492681

ಇದಕ್ಕೆ ಶಿಕ್ಷಣಾಧಿಕಾರಿಗಳು ಉತ್ತರಿಸಬೇಕು ಎಂದು ಅವರು ಆಗ್ರಹಿಸಿದರು. ಶಿಕ್ಷಣಾಧಿಕಾರಿಗಳ ನಿರ್ಲಕ್ಷ್ಯದಿಂದ ಇತ್ತ ಶಾಲೆಗಳ ಮಧ್ಯಾಹ್ನ ೪:೦೦ಗಂಟೆಯ ಬದಲು ೨:೦೦ಗಂಟೆಗೆ ಬೀಗ ಬೀಳುತ್ತಿವೆ. ಇದುವೇ ನಮ್ಮ ಆಳಂದ ತಾಲೂಕಿನ ಶಿಕ್ಷಣ ಇಲಾಖೆಯ ವ್ಯವಸ್ಥೆಯಾಗಿದೆ. ತಾಲೂಕಿನ ಕೊಡಲಹಂಗರಗಾ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಇದು ರಾಜ್ಯ ಹೆದ್ದಾರಿಯ ಮುಖ್ಯರಸ್ತೆಯಲ್ಲಿ ಇದೆ. ಕ್ಷೇತ್ರ ಶಿಕ್ಷಣಾಧಿಕಾರಿಗಳು ಕಚೇರಿಯಿಂದ ಸುಮಾರು ೬ ಕಿ.ಮೀ, ಅಂತರದಲ್ಲಿರುವ ಶಾಲೆ ಈ ಶಾಲೆ ಹತ್ತರಿದಿಂದ ಕ್ಷೇತ್ರಶಿಕ್ಷಣಾಧಿಕಾರಿಗಳು ನಿತ್ಯ ಕಲಬುರಗಿ ಮನೆಗೆ ಹೋಗಿ ಬರುವಾಗ ಎರಡು ಬಾರಿ ಇದರ ಹತ್ತಿರದಿಂದಲೇ ಸಾಗುತ್ತಾರೆ.

ಇದರ ಬಾಗಿಲು ಮಧ್ಯಾಹ್ನ ೨:೦೦ಗಂಟೆಗೆ ಮುಚ್ಚಿಕೊಂಡರೆ ಹೇಗೆ ಇಂಥ ಅನೇಕ ಶಾಲೆಗಳಲ್ಲಿ ಶಿಕ್ಷಕರು ಸರಿಯಾಗಿ ಶಾಲೆಗಳಿಗೆ ಹಾಜರಾಗುತ್ತಿಲ್ಲ. ಆದರು ಸಮಯ ಪೂರ್ಣ ಕೆಲಸ ನಿರ್ವಹಿಸಿ ಮಕ್ಕಳಿಗೆ ಪಾಠಬೋಧನೆ ಕೈಗೊಳ್ಳುತ್ತಿಲ್ಲ. ಇದಕ್ಕೆ ಸಂಬಂಧಿತ ಅಧಿಕಾರಿಗಳಿಗೆ ಕ್ರಮ ಕೈಗೊಳ್ಳಬೇಕು ಎಂದು ಸಾರ್ವಜನಿಕ ಶಿಕ್ಷಣ ಇಲಾಖೆಯ ಸಹಾಯಕ ನಿರ್ದೇಶಕರ ಗಮನಕ್ಕೂ ಮನವಿ ಸಲ್ಲಿಸಲಾಗಿದೆ. ಆದರೆ ಯಾವುದೇ ಬದಲಾವಣೆ ಆಗಿಲ್ಲ. ಶಾಲೆಗಳ ಅವ್ಯವಸ್ಥೆ ಪರಿಸ್ಥಿತಿ ಹೀಗೆ ಮುಂದುವರೆದರೆ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿಯ ಮುಂದೆ ಬೃಹತ್ ಪ್ರತಿಭಟನೆ ನಡೆಸಲಾಗುವುದು ಎಂದು ಅವರು ಎಚ್ಚರಿಸಿದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here