ಅಂಬಿಗರ ಚೌಡಯ್ಯನವರ ಜಯಂತಿಯನ್ನು ಸರಳವಾಗಿ ಆಚರಿಸೋಣ: ಭಂಡಾರೆಪ್ಪ ನಾಟೇಕಾರ್

0
25

ಸುರಪುರ: ರಾಜ್ಯದಲ್ಲಿ ಕೊರೊನಾ ವೈರಸ್ ಹಾವಳಿ ಇರುವ ಕಾರಣದಿಂದ ಈಬಾರಿಯ ನಮ್ಮ ನಿಜಶರಣ ಅಂಬಿಗರ ಚೌಡಯ್ಯನವರ ಜಯಂತ್ಯುತ್ಸವವನ್ನು ಸರಳವಾಗಿ ಆಚರಿಸೋಣ ಎಂದು ಕೋಲಿ ಗಂಗಾಮತ ಸಮಾಜದ ಅಧ್ಯಕ್ಷರಾದ ಭಂಡಾರೆಪ್ಪ ನಾಟೇಕಾರ್ ತಿಳಿಸಿದರು.

ನಗರದ ಬೋವಿಗಲ್ಲಿಯಲ್ಲಿ ನೂತನವಾಗಿ ನಿರ್ಮಾಣಗೊಳ್ಳುತ್ತಿರುವ ಅಂಬಿಗರ ಚೌಡಯ್ಯನವರ ಭವನದಲ್ಲಿ ಹಮ್ಮಿಕೊಂಡಿದ್ದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿ, ಚೌಡಯ್ಯನವರ ಕಟ್ಟೆಗಳನ್ನು ಸ್ವಚ್ಛಗೊಳಿಸಿ ವಿದ್ಯುತ್ ಅಲಂಕಾರ ಮಾಡುವುದು. ಭೋವಿಗಲ್ಲಿ, ಬುಡಭೋವಿಗಲ್ಲಿ, ಉದ್ದಾರ ಓಣಿ, ಜಾಲಗಾರ ನಗರ, ಗಂಗಾನಗರದಲ್ಲಿರುವ ಚೌಡಯ್ಯನಕಟ್ಟೆಗಳಲ್ಲಿ ಸಮಾಜ ಬಾಂಧವರ ಸಮ್ಮುಖದಲ್ಲಿ ಪೂಜೆ ಸಲ್ಲಿಸುವುದು. ನಗರದಲ್ಲಿ ವಿವಿಧ ಪ್ರಮುಖ ಬೀದಿಗಳಲ್ಲಿ ಪಾದಯಾತ್ರೆ ಮೂಲಕ ಜಾಗೃತಿ ಮೂಡಿಸುವುದು. ಇದಕ್ಕೂ ಮೊದಲು ನಗರದ ಭೋವಿಗಲ್ಲಿಯಲ್ಲಿರುವ ಚೌಡಯ್ಯನವರ ಕಟ್ಟೆಗೆ ಬೆಳಗ್ಗೆ ೯ ಗಂಟೆಗೆ ಪ್ರತಿಯೊಬ್ಬರೂ ಆಗಮಿಸುವಂತೆ ತಿಳಿಸಿದರು.

Contact Your\'s Advertisement; 9902492681

ಅಲ್ಲದೆ ಇದೇ ಸಂದರ್ಭದಲ್ಲಿ ಗ್ರಾಮ ಪಂಚಾಯತಿಗಳಿಗೆ ನೂತನವಾಗಿ ಆಯ್ಕೆಯಾಗಿರುವ ನೂತನ ಸದಸ್ಯರನ್ನು ಮುಂದಿನ ದಿನಗಳಲ್ಲಿ ಸನ್ಮಾನಿಸುವ ಕುರಿತು ಚರ್ಚೆ ನಡೆಯಿತು. ಬಳಿಕ ಅಪೂರ್ಣಗೊಂಡಿರುವ ಚೌಡಯ್ಯ ಭವನ ಕಾಮಗಾರಿ ಮುಂದುವರಿಸುವ ಬಗ್ಗೆ ತೀರ್ಮಾನ ಕೈಗೊಳ್ಳಲಾಯಿತು. ಸಮುದಾಯದ ಹಿರಿಯ, ವಕೀಲ ವಿಶ್ವಾಮಿತ್ರ ಕಟ್ಟಿಮನಿ ಮಾತನಾಡಿ ಸಮಾಜದ ಪ್ರಚಾರ ಸಮಿತಿ ಸದಸ್ಯರಾಗಿ ತಿಮ್ಮಣ್ಣ ಪೋತಲಕರ ಅವರನ್ನು ನೇಮಿಸಿರುವುದಾಗಿ ಘೋಷಿಸಿದರು.

ಸಭೆಯಲ್ಲಿ ಸಮಾಜದ ನಗರ ಘಟಕಾಧ್ಯಕ್ಷ ಪಾರಪ್ಪ ಗುತ್ತೇದಾರ್, ಗೌರವಾಧ್ಯಕ್ಷ ಯಂಕಣ್ಣ ಕಟ್ಟಿಮನಿ, ಮರೆಪ್ಪ ದಾಯಿ, ಪರಶುರಾಮ್ ಚಳ್ಳಿಗಿಡ, ಜಟ್ಟೆಪ್ಪ ವಾರಿ, ವೆಂಕಟೇಶ ರೆಡ್ಡಿ, ಪರಿಸರ ಅಭಿಯಂತರ ಸುನೀಲ್, ಉಪನ್ಯಾಸಕ ಡಾ. ಮಲ್ಲಿಕಾರ್ಜುನ ಕಮತಗಿ, ಸಿದ್ದು ತಳ್ಳಳ್ಳಿ, ಹನುಮಂತ ತಳವಾರ, ಶಾಂತಪ್ಪ ಕಕ್ಕೇರಿ, ವಿಜಯಕುಮಾರ ತಳವಾರ ಸೇರಿದಂತೆ ಅನೇಕರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here