‘ಭೀಮ ಸಂಗಮ’ ಜ.22 ರಂದು

0
234

ಕಲಬುರಗಿ: ಕತ್ತಲು ಕವಿದಂತಿರುವ ಇಂದಿನ ಭಾರತವನ್ನು ಸಮಾನತೆ, ಸೌಹಾರ್ದತೆ ಮತ್ತು ಸಮೃದ್ಧಿಯ ಬೆಳಕಿನೆಡೆಗೆ ಕೊಂಡೊಯ್ಯಲು ಡಾ.ಬಿ.ಆರ್.ಅಂಬೇಡ್ಕರ್ ಅವರ ಚಿಂತನೆಗಳಿಂದ ಮಾತ್ರ ಸಾಧ್ಯವೆಂಬುದನ್ನು ಅರಿತುಕೊಂಡು ಇಲ್ಲಿನ ಕರ್ನಾಟಕ ವಚನ ಸಾಹಿತ್ಯ ಅಕಾಡೆಮಿಯು ಜನಪರ ಹೋರಾಟಗಾರ ಲಿಂ.ಶ್ರೀ ಮಾರುತಿ ಮಾನ್ಪಡೆ ವೇದಿಕೆಯಡಿಯಲ್ಲಿ ‘ಭೀಮ ಸಂಗಮ’ ಎಂಬ ಒಂದು ದಿನದ ಡಾ.ಬಿ.ಆರ್.ಅಂಬೇಡ್ಕರವರ ಚಿಂತನಾ ಸಮಾಗಮದ ಕಾರ್ಯಕ್ರಮವೊಂದನ್ನು ಇದೇ ೨೨ ರಂದು ಬೆಳಗ್ಗೆ ೧೦.೧೫ ಕ್ಕೆ ನಗರದ ಅನ್ನಪೂರ್ಣ ಕ್ರಾಸನಲ್ಲಿರುವ ಕಲಾ ಮಂಡಳದಲ್ಲಿ ಏರ್ಪಡಿಸಲಾಗಿದೆ ಎಂದು ಅಕಾಡೆಮಿ ಅಧ್ಯಕ್ಷ ವಿಜಯಕುಮಾರ ತೇಗಲತಿಪ್ಪಿ ತಿಳಿಸಿದ್ದಾರೆ.

ಇಂದಿನ ಯುವ ಜನತೆಗೆ ಡಾ.ಅಂಬೇಡ್ಕರವರ ಆದರ್ಶಗಳನ್ನು ಪರಿಚಯಿಸಬೇಕು. ಇದರಿಂದ ಯುವ ಸಮುದಾಯ ಉತ್ತಮ ಪ್ರಜೆಗಳಾಗಿ ರೂಪುಗೊಳ್ಳಲು ಈ ಕಾರ್ಯಕ್ರಮ ಪ್ರೇರಣೆ ನೀಡುತ್ತದೆ. ಹಾಗಾಗಿ ಈ ಕಾರ್ಯಕ್ರಮ ವಿಶೇಷವಾಗಿ ರೂಪಿಸಲಾಗಿದೆ.
ಕಾರ್ಯಕ್ರಮದ ಯಶಸ್ವಿಗೆ ಪೂರಕವಾಗಿ ರಚಿಸಲ್ಪಟ್ಟ ಸ್ವಾಗತ ಸಮಿತಿಗೆ ಅಧ್ಯಕ್ಷರಾಗಿ ಜಿಪಂ ಸದಸ್ಯ ಅರುಣಕುಮಾರ ಎಂ.ವೈ.ಪಾಟೀಲ, ಕಾರ್ಯಾಧ್ಯಕ್ಷರಾಗಿ ರವಿ ಮದನಕರ್, ಸಂಚಾಲಕರಾಗಿ ಯಶ್ವಂತರಾಯ ಅಷ್ಠಗಿ ಅವರನ್ನು ನೇಮಿಸಲಾಗಿದ್ದು, ಅವರ ನೇತೃತ್ವದಲ್ಲಿ ಇಡೀ ದಿನ ಕಾರ್ಯಕ್ರಮ ಜರುಗಲಿದೆ.

Contact Your\'s Advertisement; 9902492681

ಅಂದು ಬೆಳಗ್ಗೆ ೧೦.೧೫ ಕ್ಕೆ ಹಮ್ಮಿಕೊಂಡಿರುವ ಸಮಾರಂಭ ಕಲ್ಯಾಣ ಕರ್ನಾಟಕ ಪ್ರಾದೇಶಿಕ ಅಭಿವೃದ್ಧಿ ಮಂಡಳಿ ಅಧ್ಯಕ್ಷ ದತ್ತಾತ್ರೇಯ ಪಾಟೀಲ ರೇವೂರ ಉದ್ಘಾಟಿಸಲಿದ್ದು, ಹಿರಿಯ ಹೋರಾಟಗಾರ ವಿಠ್ಠಲ ದೊಡ್ಡಮನಿ ಅಧ್ಯಕ್ಷತೆ ವಹಿಸಲಿದ್ದಾರೆ. ಸಮಾಜ ಸ್ವಾಸ್ಥ್ಯಕ್ಕೆ ಸಂವಿಧಾನದ ಕೊಡುಗೆ ಕುರಿತು ಶರಣ ಲೇಖಕ ಪ್ರೊ.ಸಂಜಯ ಮಾಕಲ್ ಮಾತನಾಡಲಿದ್ದು, ಡಾ.ಸುರೇಶ ಶರ್ಮಾ, ಶರಣಪ್ಪ ಕೊಳ್ಳಿ ಕುರಕುಂಟಾ ಉಪಸ್ಥಿತರಿರುವರು.

ವಿವಿಧ ಕ್ಷೇತ್ರದ ರೂವಾರಿಗಳಾದ ಅರ್ಜುನ ಭದ್ರೆ, ಲಕ್ಷ್ಮಣ ದಸ್ತಿ, ಡಾ.ರಮೇಶ ಲಂಡನಕರ್, ಮರಿಯಪ್ಪ ಹಳ್ಳಿ, ಗೌಡಪ್ಪಗೌಡ ಪೊಲೀಸ್ ಪಾಟೀಲ ಆಂದೋಲಾ, ವಿಜಯಲಕ್ಷ್ಮೀ ಗೊಬ್ಬೂರಕರ್, ಮಲ್ಲಿಕಾರ್ಜುನ ಭೃಂಗಿಮಠ, ದಿನೇಶ ದೊಡ್ಡಮನಿ, ಸಿದ್ಧಾರ್ಥ ಚಿಮ್ಮಾಇದಲಾಯಿ ಅವರಿಗೆ ‘ಭೀಮ ಜ್ಯೋತಿ’ ಪ್ರಶಸ್ತಿ ನೀಡಿ ಗೌರವಿಸಲಾಗುವುದು.

ಮಧ್ಯಾಹ್ನ ೧೨.೧೫ ಕ್ಕೆ ‘ಮಹಿಳಾ ಸಬಲೀಕರಣಕ್ಕೆ ಬಾಬಾಸಾಹೇಬರ ಚಿಂತನೆ’ ವಿಷಯದ ಕುರಿತು ಪ್ರಾಧ್ಯಾಪಕಿ ಡಾ.ಶಾಂತಾ ಅಷ್ಠಿಗೆ ಮಾತನಾಡಲಿದ್ದು, ಸಮಾಜಸೇವಕಿ ಜಯಶ್ರೀ ಬಸವರಾಜ ಮತ್ತಿಮೂಡ ಅಧ್ಯಕ್ಷತೆ ವಹಿಸಲಿದ್ದಾರೆ. ಸತೀಶ ಅಳ್ಳೋಳ್ಳಿ, ಮಾಲತಿ ರೇಷ್ಮಿ, ವಿಜಯಲಕ್ಷ್ಮೀ ನೆಪೆರಿ, ಸಾವಿತ್ರಿ ಪಾಟೀಲ, ಶಾಂತವೀರ ಬಡಿಗೇರ ಉಪಸ್ಥಿತರಿರುವರು.

ಮಧ್ಯಾಹ್ನ ೨ ಗಂಟೆಗೆ ಲೇಖಕ ಮಂಡಲಗಿರಿ ಪ್ರಸನ್ನ ಅಧ್ಯಕ್ಷತೆಯಲ್ಲಿ ನಡೆಯುವ ‘ಸಮಾನತೆ ಕವಿತೆ’ ವಿಶೇಷ ಕವಿಗೋಷ್ಠಿಯಲ್ಲಿ ಕಲ್ಯಾಣಕುಮಾರ ಶೀಲವಂತ, ಶಿವಯೋಗಿ ನಾಗನಹಳ್ಳಿ, ಶಂಕರ ವೈ.ಜಡೇರ್, ನಾಗೇಂದ್ರ ಜವಳಿ, ಎಸ್.ಎಂ.ಪಟ್ಟಣಕರ್, ಕಿಶೋರ ಗಾಯಕವಾಡ ಉಪಸ್ಥಿತರಿರುವರು. ಕವಿಗಳಾದ ಧರ್ಮಣ್ಣ ಎಚ್.ಧನ್ನಿ, ಶಕುಂತಲಾ ಪಾಟೀಲ ಜಾವಳಿ, ಯಶೋಧಾ ಕಟಕೆ, ರಾಜಕುಮಾರ ಉದನೂರ, ಡಾ.ಗೀತಾ ಪಾಟೀಲ, ಎಂ.ಬಿ.ನಿಂಗಪ್ಪ, ಬಿ.ಎಂ.ರಾವ, ನಾಗೇಂದ್ರಪ್ಪ ಮಾಡ್ಯಾಳೆ, ಡ.ವಿಜಯಕುಮಾರ ಗೋತಗಿ, ಸಂತೋಷ ಕುಂಬಾರ, ಕವಿತಾ ಕಾವಳೆ, ಪ್ರಮೋದ ಪಂಚಾಳ, ರೇಣುಕಾ ಹೆಳವರ, ಶಂಕರಲಿಂಗ ಹೆಂಬಾಡಿ, ರಮೇಶ ಯಾಳಗಿ, ಬಿ.ಶಿವಶಂಕರ ಅವರು ತಮ್ಮ ಸ್ವ ರಚಿತ ಕವನಗಳನ್ನು ವಾಚಿಸಲಿದ್ದಾರೆ.

ಮಧ್ಯಾಹ್ನ ೩.೩೦ ಕ್ಕೆ ನಡೆಯುವ ಸಮಾರೋಪ ಸಮಾರಂಭದಲ್ಲಿ ‘ಭಾವೈಕ್ಯತೆಗೆ ಭಾರತದ ಸಂವಿಧಾನ’ ಕುರಿತು ಸಾಹಿತಿ ಜಗನ್ನಾಥ ತರನಳ್ಳಿ ಮಾತನಾಡಲಿದ್ದು, ಹಿರಿಯ ಸಾಹಿತಿ ಡಾ.ಹನುಮಂತರಾವ ದೊಡ್ಡಮನಿ ಅಧ್ಯಕ್ಷತೆ ವಹಿಸಲಿದ್ದಾರೆ. ಕಲ್ಯಾಣಪ್ಪ ಪಾಟೀಲ ಮಳಖೇಡ, ದೇವೇಂದ್ರಪ್ಪ ಕಪನೂರ, ಸೋಮಶೇಖರ ಪಾಟೀಲ ತೇಗಲತಿಪ್ಪಿ, ವಿಜಯಕುಮಾರ ಆಡಕಿ ಸೇಡಂ, ಡಾ.ಕೆ.ಗಿರಿಮಲ್ಲ, ಶ್ರೀಕಾಂತ ಪಾಟೀಲ ದಿಕ್ಸಂಗಿ, ಈಶ್ವರಚಂದ್ರ ವಿದ್ಯಾಸಾಗರ ಉಪಸ್ಥಿತರಿರುವರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here