ಕಲಬುರಗಿ: 2019ನೇ ಸಾಲಿನ ಮೇ ತಿಂಗಳ ಮದ್ಯ ರಾತ್ರಿ ಆಳಂದ ತಾಲೂಕಿನ ಮುನ್ನಳ್ಳಿ ಗ್ರಾಮದಲ್ಲಿ ಕಾಶಿಬಾಯಿ ಬೀರಣ್ಣ ಖಟಗೇ (50) ಎಂಬ ಮಹಿಳೆ ಮಲಗಿಕೊಂಡಾಗ ಅದೇ ಗ್ರಾಮದ ಮಹಿಳೆ ಒಬ್ಬಳು ಮೈ ಮೇಲೆ ಸೀಮೆ ಎಣ್ಣೆ ಸುರಿದು ಬೆಂಕಿ ಹಚ್ಚೆ ಕೊಲೆ ಮಾಡಿ ಪರಾರಿಯಾಗಿದ್ದ ಘಟನೆೆಯ ಆರೋಪಿಯನ್ನು ಎರಡು ವರ್ಷಗಳ ನಂತರ ನರೋಣಾ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಜಿಲ್ಲಾ ಪೊಲೀಸ್ ಅಧೀಕ್ಷಕರಾದ ಡಾ. ಸಿಮಿ ಮೇರಿಯಮ್ ಜಾರ್ಜ, ಹೆಚ್ಚುವರಿ ಪೊಲೀಸ್ ಅಧೀಕ್ಷಕರಾದ ಪ್ರಸನ್ನ ದೇಸಾಯಿ ರವರ ಮಾರ್ಗದರ್ಶನದಲ್ಲಿ ಮತ್ತು ಪೊಲೀಸ್ ಉಪಾಧೀಕ್ಷಕರಾದ ಮಲ್ಲಿಕಾರ್ಜುನ ಸಾಲಿ ಇವರ ನೇತೃತ್ವದಲ್ಲಿ ಮಂಜುನಾಥ ಎಸ್.ಸಿಪಿ.ಐ ಆಳಂದ ಮತ್ತು ಉದಂಡಪ್ಪ ಮಣೂರಕರ್ ಪಿ.ಎಸ್.ಐ ಹಾಗೂ ಸಿಬ್ಬಂದಿಯವರಾದ ಶರಣಗೌಡ, ಮಲ್ಲಿಕಾರ್ಜುನ, ರಾಮಲಿಂಗ, ಬಸವರಾಜ, ಸತೀಷ, ಸುರೇಖಾ ಅವರ ವಿಶೇಷ ತಂಡ ಕಾರ್ಯಾಚರಣೆ ನಡೆಸಿ ಆರೋಪಿಯನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.
ಖಚಿತ ಮಾಹಿತಿ ಮೇರೆಗೆ ಇಂದು ಕೊಲೆ ಮಾಡಿದ ಮುನ್ನಳ್ಳಿ ಗ್ರಾಮದ ಗಿರಿಜಾಬಾಯಿ ಅಮೃತ ಖಟಗೆಗೋಳ್ (60) ಇವಳನ್ನು ವಶಕ್ಕೆ ಪಡೆದುಕೊಂಡು ವಿಚಾರಣೆ ನಡರಸಿದ್ದಾರೆ.
ವಿಚಾರಣೆಯಲ್ಲಿ ಮೃತ ಕಾಶಿಬಾಯಿ ಗಿರಿಜಾಬಾಯಿ ಕುಟುಂಬದ ಮೇಲೆ ಮಾಟ ಮಂತ್ರ ಮಾಡಿದ್ದು, ಇದ್ದರಿಂದ ಆಪಾದಿತಳ ಕುಟುಂಬ ಸದ್ಯಸರ ಆನಾರೋಗ್ಯದಿಂದ ಬಳಗಿ, ಮಗ ಚಿದಾನಂದ, ಮಗಳು ಪ್ರೀತಿ ಮೊಮ್ಮಗಳು ಹಾಗೂ 2 ದನಕರುಗಳು ಮೃತಪಟ್ಟಿದ್ದು, ಇದಕ್ಕೆಲ್ಲ ಕಾಶಿಬಾಯಿನೇ ಕಾರಣ ಎಂದು ಭಾವಿಸಿ, ಆಕೆಯ ಮೇಲೆ ದ್ವೇಷ ಸಾಧಿಸಿ, ರಾತ್ರಿಯ ವೇಳೆ ಮಲಗಿ ಕೊಂಡಾಗ ಅವಳ ಮೈ ಮೇಲೆ ಸೀಮೆ ಎಣ್ಣೆ ಹಾಕಿ ಬೆಂಕಿ ಹಚ್ಚೆ ಕೊಲೆ ಮಾಡಿರುತ್ತಾಳೆ ಎಂದು ಪೊಲೀಸರು ತಿಳಿಸಿದ್ದಾರೆ.
ಈ ಕುರಿತು ನರೋಣಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.