ಗೋಹತ್ಯೆ ನಿಷೇಧ ಕಾಯ್ದೆ ರದ್ದುಗೊಳಿಸಲು ಸಾಮೂಹಿಕ ಸಂಘಟನೆಗಳ ಪ್ರತಿಭಟನೆ

0
32

ಸುರಪುರ: ದೇಶದಲ್ಲಿ ಕೇಂದ್ರ ಮತ್ತು ರಾಜ್ಯ ಸರಕಾರಗಳು ಜಾರಿಗೆ ತರಲು ಮುಂದಾಗಿರುವ ಗೋಹತ್ಯೆ ನಿಷೇಧ ಕಾಯ್ದೆಯನ್ನು ರದ್ದುಗೊಳಿಸುವಂತೆ ಆಗ್ರಹಿಸಿ ಸಾಮೂಹಿಕ ಸಂಘಟನೆಗಳ ವತಿಯಿಂದ ನಗರದಲ್ಲಿ ಪ್ರತಿಭಟನೆ ನಡೆಸಲಾಯಿತು.

ಬೆಳಿಗ್ಗೆ ೧೧ ಗಂಟೆಯ ವೇಳೆಗೆ ನಗರದ ಟಿಪ್ಪು ಸುಲ್ತಾನ ವೃತ್ತದಲ್ಲಿ ಜಮಾವಣೆಗೊಂಡ ವಿವಿಧ ಸಂಘಟನೆಗಳ ಮುಖಂಡರು ಕೇಂದ್ರ ಮತ್ತು ರಾಜ್ಯ ಸರಕಾರಗಳ ವಿರುಧ್ಧ ಘೋಷಣೆಗಳನ್ನು ಕೂಗುತ್ತಾ ಡಾ: ಬಾಬಾ ಸಾಹೇಬ್ ಅಂಬೇಡ್ಕರ್ ವೃತ್ತದ ಮೂಲಕ ದರಬಾರ ಮಾರ್ಗವಾಗಿ ಶ್ರೀ ಮಹರ್ಷಿ ವಾಲ್ಮೀಕಿ ವೃತ್ತದ ಮೂಲಕ ಹನುಮಾನ ಟಾಕೀಸ್ ರಸ್ತೆ ಮಾರ್ಗವಾಗಿ ಮಹಾತ್ಮ ಗಾಂಧಿ ವೃತ್ತದ ವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಿದರು.

Contact Your\'s Advertisement; 9902492681

ಮಹಾತ್ಮ ಗಾಂಧಿವೃತ್ತದಲ್ಲಿ ಎರಡು ಗಂಟೆಗಳಿಗು ಹೆಚ್ಚು ಕಾಲ ಪ್ರತಿಭಟನೆ ನಡೆಸಿ ಅನೇಕ ಮುಖಂಡರು ಮಾತನಾಡಿ,ಕೇಂದ್ರ ಮತ್ತು ರಾಜ್ಯ ಸರಕಾರ ಜಾರಿಗೆ ತರಲು ಮುಂದಾಗಿರುವ ಗೋಹತ್ಯೆ ನಿಷೇಧ ಕಾಯ್ದೆಯು ಸಂಪೂರ್ಣವಾಗಿ ಜನವಿರೋಧಿಯಾಗಿದೆ,ಯಾವುದೆ ಒಬ್ಬ ವ್ಯಕ್ತಿಯ ಆಹಾರದ ಆಯ್ಕೆ ಆತನ ಖಾಸಗಿ ವಿಚಾರವಾಗಿದ್ದು ಇದನ್ನು ನಿರ್ಬಂಧಿಸಲು ಯಾರಿಗೂ ಹಕ್ಕಿಲ್ಲ.ಅಲ್ಲದೆ ಇಂದು ಗೋಹತ್ಯೆ ನಿಷೇಧದ ಬಗ್ಗೆ ಮಾತನಾಡುವ ಬಿಜೆಪಿ ಮತ್ತು ಸಂಘ ಪರಿವಾರದ ಜನರು ತಮ್ಮದೆ ಸರಕಾರಗಳಿರುವ ರಾಜ್ಯಗಳಲ್ಲಿ ನಡೆಯುವ ಗೋಹತ್ಯೆಯನ್ನು ತಡೆಯಲಿ,ಮುಖ್ಯವಾಗಿ ದೇಶದಲ್ಲಿ ಅತಿ ಹೆಚ್ಚು ಗೋಹತ್ಯೆ ಮಾಡಿ ಮಾಂಸ ವಿದೇಶಕ್ಕೆ ರಫ್ತು ಮಾಡುವ ಕಂಪನಿಗಳೇ ಇವರವುಗಳಿರುವಾಗ ಗೋಹತ್ಯೆಯ ನಿಷೇಧದ ಬಗ್ಗೆ ಮಾತನಾಡುವುದು ಹಾಸ್ಯಾಸ್ಪದ ಎನಿಸಲಿದೆ.

ಅಲ್ಲದೆ ರೈತರು ಗೋವನ್ನು ಸಾಕುತ್ತಾರೆ ಅದು ಹೈನುಗಾರಿಕೆಗೆ ಯೋಗ್ಯವಲ್ಲದಿದ್ದರೆ ಏನು ಮಾಡಬೇಕು ಎಂದು ಪ್ರಶ್ನಿಸಿದರು,ಇನ್ನು ತಮ್ಮ ಜಾನುವಾರುಗಳನ್ನು ತಾವು ಮಾರಾಟ ಮಾಡಲು ಸರಕಾರದ ಪರವಾನಿಗೆ ಪಡೆಯುವಂತೆ ನಿಯಮ ಕಾನೂನು ಬಾಹಿರ,ಅಲ್ಲದೆ ಜಾನುವಾರು ಸಾಗಾಟ ಕೇವಲ ೧೫ ಕಿಲೋ ಮೀಟರ್‌ಗೆ ಸೀಮಿತಗೊಳಿಸಿ ಇದಕ್ಕಿಂತಲು ಹೆಚ್ಚಿನ ದೂರಕ್ಕೆ ಪರವಾನಿಗೆ ಪಡೆಯುವಂತಹ ಕಾನೂನು ಒಪ್ಪಲು ಸಾಧ್ಯವಿಲ್ಲ ಎಂದರು.ಮುಂದುವರೆದು ಮಾತನಾಡಿದ ಅನೇಕ ಮುಖಂಡರು ಬಿಜೆಪಿ ಎಂದರೆ ಬ್ರಿಟೀಷರ ರೀತಿಯಲ್ಲಿ ಆಡಳಿತ ನಡೆಸಲು ಮುಂದಾಗಿದೆ ಇಂತಹ ಕಾನೂನುಗಳು ನೂರು ತಂದರು ನಾವು ಒಪ್ಪುವುದಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ನಂತರ ರಾಜ್ಯಪಾಲರಿಗೆ ಬರೆದ ಮನವಿಯನ್ನು ತಹಸೀಲ್ ಸಿರಸ್ತೇದಾರ ಸೋಮನಾಥ ನಾಯಕ ಮೂಲಕ ಸಲ್ಲಿಸಿದರು.ಪ್ರತಿಭಟನೆಯಲ್ಲಿ ಮುಖಂಡರಾದ ರಾಜಾ ವೇಣುಗೋಪಾಲ ನಾಯಕ ಮಲ್ಲಯ್ಯ ಕಮತಗಿ ದೇವಿಂದ್ರಪ್ಪ ಪತ್ತಾರ ರಾಜಾ ಸುಶಾಂತ ನಾಯಕ ಭೀಮರಾಯ ಸಿಂಧಗೇರಿ ರಾಹುಲ್ ಹುಲಿಮನಿ ವೆಂಕೋಬ ದೊರೆ ಮಲ್ಲಿಕಾರ್ಜುನ ಕ್ರಾಂತಿ ಮಾನಪ್ಪ ಕಟ್ಟಿಮನಿ ಮಲ್ಲಪ್ಪ ಹುಬ್ಬಳ್ಳಿ ದಾವೂದ್ ಪಠಾಣ್ ನಿಂಗಣ್ಣ ಗೋನಾಲ ಖಾಜಾ ಖಲೀಲ ಅರಕೇರಿ ರಾಜು ಕಟ್ಟಿಮನಿ ರಾಮಣ್ಣ ಕಲ್ಲದೇವನಹಳ್ಳಿ ಶಿವಲಿಂಗ ಹಸನಾಪುರ ಶಿವಶರಣಪ್ಪ ವಾಡಿ ಯಲ್ಲಪ್ಪ ಚಿನ್ನಾಕಾರ ಎಮ್ ಪಟೇಲ್ ಖಾಜಾ ಅಜ್ಮೀರ್ ವೀರಭದ್ರಪ್ಪ ತಳವಾರಗೇರಾ ತಿಪ್ಪಣ್ಣ ಶೆಳ್ಳಗಿ ಅಬೀದ್ ಪಗಡಿ ಜೆಟ್ಟೆಪ್ಪ ನಾಗರಾಳ ಗೋಪಾಲ ಚಿನ್ನಾಕಾರ ಸೇರಿದಂತೆ ಅನೇಕರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here