ಮಾನವ ಸಂಪನ್ಮೂಲ ಕೃಷಿ, ಸಾಂಸ್ಕøತಿಕ ಸಂಘದ ನೂತನ ವೆಬ್‍ಸೈಟ್ ಲೋಕಾರ್ಪಣೆ

0
57

ಕಲಬುರಗಿ: ಕಲ್ಯಾಣ ಕರ್ನಾಟಕ ಮಾನವ ಸಂಪನ್ಮೂಲ ಕೃಷಿ ಹಾಗೂ ಸಾಂಸ್ಕøತಿಕ ಸಂಘದ ಅಧಿಕೃತ ನೂತನ ವೆಬ್‍ಸೈಟ್ hಣಣಠಿs://ಞಞhಡಿಚಿಛಿs.ಛಿom ತೆರೆಯಲಾಗಿದ್ದು, ಕೃಷಿ, ಶಿಕ್ಷಣ, ಸಾಹಿತ್ಯ ಕ್ಷೇತ್ರ, ಸ್ವಯಂ ಉದ್ಯೋಗ, ಸ್ಪರ್ಧಾತ್ಮಕ ಪರೀಕ್ಷೆಗಳ ತರಬೇತಿ ಸೇರಿದಂತೆ ಸಂಘದ ಎಲ್ಲಾ ಮಾಹಿತಿ ಲಭ್ಯವಾಗಲಿದೆ.

ಈ ಅಧಿಕೃತ ನೂತನ ವೆಬ್‍ಸೈಟ್ ಅನ್ನು ನಿವೃತ್ತ ಕೃಷಿ ವಿಶ್ವ ವಿದ್ಯಾಲಯ ಧಾರವಾಡ ನಿವೃತ್ತ ಕಲಪತಿಗಾಳದ ಡಾ.ಎಸ್.ಎ. ಪಾಟೀಲ್ ಅವರು ಲೋಕಾರ್ಪಣೆಗೊಳಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು ಕÀಲಬುರಗಿ, ಯಾದಗಿರಿ, ಬೀದರ ರಾಯಚೂರ, ಕೊಪ್ಪಳ ಮತ್ತು ಬಳ್ಳಾರಿ ಜಿಲ್ಲೆಗಳಿಗೆ ಸಂಬಂಧಿಸಿದ ಮಾಹಿತಿಯು hಣಣಠಿs://ಞಞhಡಿಚಿಛಿs.ಛಿomನಲ್ಲಿ ಲಭ್ಯವಾಗಲಿದ್ದು, ವೆಬ್‍ಸೈಟ್ ಮೂಲಕ ಮಾಹಿತಿ ನೀಡುತ್ತಿರುವುದಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು.

Contact Your\'s Advertisement; 9902492681

ಕಲ್ಯಾಣ ಕರ್ನಾಟಕ ಮಾನವ ಸಂಪನ್ಮೂಲ ಕೃಷಿ ಹಾಗೂ ಸಾಂಸ್ಕøತಿಕ ಸಂಘ ಅಧ್ಯಕ್ಷ ಡಾ.ಬಸವರಾಜ ಪಾಟೀಲ ಸೇಡಂ ಅವರು ಮಾತನಾಡಿ, ಇಂದಿನಿಂದ ಈ ವೆಬ್‍ಸೈಟ್‍ನಲ್ಲಿ ಸ್ಪರ್ಧಾತ್ಮಕ ಪರೀಕ್ಷೆಗಳ ತರಬೇತಿಗೆ ಸಂಬಂಧಿಸಿದ ಮಾಹಿತಿ ಹಾಗೂ ಆನ್‍ಲೈನ್ ಮೂಲಕ ಅರ್ಜಿ ಸಲ್ಲಿಸುವ ವಿವರ ಲಭ್ಯವಿದೆ ಎಂದು ಹೇಳಿದರು. ಐ.ಎ.ಎಸ್. ಮತ್ತು ಕೆ.ಎ.ಎಸ್., ಬ್ಯಾಂಕಿಂಗ್, ರೈಲ್ವೆ, ಎಸ್.ಎಸ್.ಸಿ., ಗ್ರೂಪ್ “ಸಿ” ಹುದ್ದೆಗಳ ತರಬೇತಿಗಾಗಿ ಅರ್ಜಿಗಳನ್ನು ಆಹ್ವಾನಿಸಲಾಗಿದೆ ಎಂದರು.

ಡಿಜಿಟಲ್ ತರಬೇತಿ ಮತ್ತು ರಿಟೇಲ್ ಮಾರ್ಕೆಟಿಂಗ್ ತರಬೇತಿ ಹಾಗೂ ರಾಯಚೂರು ಕೃಷಿ ವಿಶ್ವವಿದ್ಯಾಲಯ ಸಹಯೋಗದೊಂದಿಗೆ ರೈತರಿಗೆ ವಿವಿಧ ತರಬೇತಿ ಕಾರ್ಯಕ್ರಮಗಳಿಗೂ ಅರ್ಜಿ ಆಹ್ವಾನಿಸಲಾಗಿದೆ ಎಂದು ಮಾಹಿತಿ ನೀಡಿದರು.

2020 ಜೂನ್ 9ರಂದು ಮಾನ್ಯ ಮುಖ್ಯಮಂತ್ರಿಗಳಾದ ಬಿ.ಎಸ್. ಯಡಿಯೂರಪ್ಪ ಅವರು ಸಂಘದ ಕ್ರಿಯಾ ಯೋಜನೆಗೆ 300 ರೂ. ಕೋಟಿ ಅನುದಾನ ಒಪ್ಪಿಗೆ ನೀಡಿ, ಈ ಪೈಕಿ 100 ಕೋಟಿ ರೂ. ಅಕ್ಟೋಬರ್ ಮಾಹೆಯಲ್ಲಿ ಬಿಡುಗಡೆ ಮಾಡಲಾಗಿದೆ ಎಂದು ಹೇಳಿದರು.

ನಿವೃತ್ತ ಐ.ಎ.ಎಸ್. ಅಧಿಕಾರಿ ಮದನಗೋಪಾಲ್ ಅವರು ಮಾತನಾಡಿ, ಈ ಭಾಗದ ಜನರಿಗೆ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಎದುರಿಸಲು ತರಬೇತಿ ನೀಡುತ್ತಿರುವುದು ಉತ್ತಮ ಕಾರ್ಯ. ಹಿಂದುಳಿದ ಪ್ರದೇಶವಾಗಿರುವ ಈ ಭಾಗದ ಯುವಕರಿಗೆ ಅನುಕೂಲವಾಗಲಿದೆ ಎಂದು ಹೇಳಿದರು.

ಕಲ್ಯಾಣ ಕರ್ನಾಟಕ ಮಾನವ ಸಂಪನ್ಮೂಲ ಕೃಷಿ ಹಾಗೂ ಸಾಂಸ್ಕøತಿಕ ಸಂಘದ ಕಾರ್ಯದರ್ಶಿ ಭೀಮಾಶಂಕರ ಜಿ.ತೆಗ್ಗಳ್ಳಿ ಅವರು ವೆಬ್‍ಸೈಟ್ ಕುರಿತು ಸಮಗ್ರ ಮಾಹಿತಿ ನೀಡಿದರು. ಕಲ್ಯಾಣ ಕರ್ನಾಟಕ ಮಾನವ ಸಂಪನ್ಮೂಲ ಕೃಷಿ ಹಾಗೂ ಸಾಂಸ್ಕøತಿಕ ಸಂಘದ ಅಧೀನ ಕಾರ್ಯದರ್ಶಿ ಮಲ್ಲಿಕಾರ್ಜುನ ರೆಡ್ಡಿ ಪಾಟೀಲ್, ಆಡಳಿತ ಮಂಡಳಿ ಸದಸ್ಯ ವಿ. ಶಾಂತರೆಡ್ಡಿ ಉಪಸ್ಥಿತರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here