ಮೂರು ಸಾರಿಗೆ ಸಂಸ್ಥೆ ಘಟಕಗಳಿಗೆ ರಾಜ್ಯಮಟ್ಟದ ಪ್ರಶಸ್ತಿ

0
154

ಕಲಬುರಗಿ: ಅತ್ಯಂತ ಹೆಚ್ಚಿನ ಕೆಎಂಪಿಎಲ್ ಸಾಧನೆ ಮಾಡಿದ ಈಶಾನ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ (ಪಿಸಿಆರ್‍ಎ ಯಿಂದ ಸಕ್ಷಮ-2021) ಗುರುಮಠಕಲ್ ಘಟಕ, ಶಹಾಪುರ ಘಟಕ ಹಾಗೂ ಕಲಬುರಗಿ ಘಟಕ-4ಕ್ಕೆ ಘಟಕಗಳಿಗೆ ರಾಜ್ಯ ಮಟ್ಟದ ಪ್ರಶಸ್ತಿ ದೊರೆತ್ತಿದೆ.

ರಾಜ್ಯ ಮಟ್ಟದ ಪ್ರಶಸ್ತಿಗೆ ಕಾರಣರಾದ ಈ ಕೆಳಕಂಡ ಮೂರು ಘಟಕಗಳ ಚಾಲನಾ ಸಿಬ್ಬಂದಿ, ಚಾಲಕ ಬೋಧಕ ಸಿಬ್ಬಂದಿ, ತಾಂತ್ರಿಕ ಸಿಬ್ಬಂದಿ, ಮೇಲ್ವಿಚಾರಕ ಸಿಬ್ಬಂದಿ ಘಟಕ ವ್ಯವಸ್ಥಾಪಕರು, ವಿಭಾಗದ ಅಧಿಕಾರಿ ಮತ್ತು ಸಿಬ್ಬಂದಿಗಳಿಗೆ ಶಾಸಕರು ಹಾಗೂ ಈಶಾನ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಅಧ್ಯಕ್ಷರಾದ ರಾಜಕುಮಾರ ಪಾಟೀಲ ತೇಲ್ಕೂರ ಹಾಗೂ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕರಾದ ಕೂರ್ಮಾರಾವ್ ಎಂ. ಅವರು ಅಭಿನಂದಿಸಿದ್ದಾರೆ.

Contact Your\'s Advertisement; 9902492681

ಸೋಮವಾರ ಬೆಂಗಳೂರಿನಲ್ಲಿ ಜರುಗಿದ ಸಮಾರಂಭದಲ್ಲಿ (ಆನ್‍ಲೈನ್ ಮೂಲಕ) ಆಹಾರ ಮತ್ತು ನಾಗರೀಕ ಸರಬರಾಜು ಮತ್ತು ಗ್ರಾಹಕರ ಆಯುಕ್ತಾಲಯ ಸಚಿವರಾದ ಕೆ. ಗೋಪಾಲಯ್ಯ ಅವರು ಈ ಪ್ರಶಸ್ತಿ ಪ್ರದಾನ ಮಾಡಿರುತ್ತಾರೆ. ರಾಜ್ಯಮಟ್ಟದ ಸಾಧನೆಗೆ ಪ್ರತಿ ಘಟಕಕ್ಕೆ 50,000 ರೂ.ಗಳ ನಗದು ಬಹುಮಾನ, ಪ್ರಶಸ್ತಿ ಫಲಕ ಹಾಗೂ ಪ್ರಮಾಣಪತ್ರ ನೀಡಲಾಗಿದೆ. ಈ ರಾಜ್ಯಮಟ್ಟದ ಪ್ರಶಸ್ತಿ ದೊರೆತ್ತಿದೆ.

ಈ ಅವಧಿಯಲ್ಲಿ ಗುರುಮಠಕಲ್ ಘಟಕ, ಶಹಾಪುರ ಘಟಕ ಹಾಗೂ ಕಲಬುರಗಿ ಘಟಕ-4 ಘಟಕಗಳು ಕ್ರಮವಾಗಿ 0.39 ಲಕ್ಷ, 0.71 ಲಕ್ಷ ಹಾಗೂ 0.31 ಲಕ್ಷ ಲೀಟರ್ ಇಂಧನವನ್ನು ಕಡಿಮೆ ಬಳಸಿ ಸಂಸ್ಥೆಗೆ ಕ್ರಮವಾಗಿ ರೂ 26.35, 47.78 ಹಾಗೂ 20.87 ಲಕ್ಷ ರೂ.ಗಳ ಉಳಿತಾಯ ಮಾಡಲಾಗಿದೆ.

ಅಕ್ಟೋಬರ್-2018 ರಿಂದ ಸೆಪ್ಟಂಬರ್-2019 ರ ಅವಧಿಯ ಹೋಲಿಸಿದಾಗ ಅಕ್ಟೋಬರ್-2019 ರಿಂದ ಸೆಪ್ಟೆಂಬರ್-2020 ಅವಧಿಯಲ್ಲಿ ಸಂಸ್ಥೆಯು ಉತ್ತಮ ಇಂಧನ ಉಳಿತಾಯ ಸಾಧನೆ ಮಾಡಿದ್ದಕ್ಕಾಗಿ ಈಶಾನ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಗುರುಮಠಕಲ್ ಘಟಕ, ಶಹಾಪೂರ ಘಟಕ ಹಾಗೂ ಕಲಬುರಗಿ ಘಟಕ-4 ಘಟಕಗಳು ರಾಜ್ಯ ಮಟ್ಟದಲ್ಲಿ “Best Depot Award at State Level in KMPL Improvement” ಪ್ರಶಸ್ತಿ ಪಡೆದಿವೆ.

ತೈಲ ಹಾಗೂ ಅನಿಲ ಉಳಿತಾಯವನ್ನು ಪ್ರೊತ್ಸಾಹಿಸಲು, ಪರಿಸರ ಸಂರಕ್ಷಿಸಲು ಹಾಗೂ ಸುಸ್ಥಿರ ಅಭಿವೃದ್ಧಿ (Sustainable Growth) ಸಾಧಿಸಲು ಪ್ರತಿ ವರ್ಷ ಸಂರಕ್ಷಣ ಕ್ಷಮತಾ ಮಹೋತ್ಸವ (ಸಕ್ಷಮ-SAKSHAM) Pಅಖಂ ನಿಂದ SಂಏSಊಂಒ-2021 ಆಯೋಜಿಸಲಾಗುತ್ತಿದೆ.

ಕೇಂದ್ರ ಸರ್ಕಾರದ ಪೆಟ್ರೋಲಿಯಂ ಹಾಗೂ ನೈಸರ್ಗಿಕ ಅನಿಲ ಸಚಿವಾಲಯದ ಅಡಿಯಲ್ಲಿ ಕಾರ್ಯನಿರ್ವಹಿಸುವ Petroleum Conservation Research Association ತೈಲ ಹಾಗೂ ಅನಿಲ ಉಳಿತಾಯದ ಬಗ್ಗೆ ನಿರಂತರವಾಗಿ ಅರಿವು ಮೂಡಿಸುವ ಯೋಜನೆಗಳನ್ನು ಹಮ್ಮಿಕೊಳ್ಳಲಾಗುತ್ತಿದೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here