ಕಲಬುರಗಿ: ಜೇವರ್ಗಿ ಮಾಜಿ ಶಾಸಕ ದೊಡ್ಡಪ್ಪ ಗೌಡ ಪಾಟೀಲ್ ನರಿಬೋಳ ಅವರಿಗೆ ನಿಗಮ ಮಂಡಳಿಯೊದರ ಅಧ್ಯಕ್ಷ ಸ್ಥಾನ ನೀಡುವಂತೆ ಬಿಜೆಪಿ ಯುವ ಮುಂಖಡ ಸೋಮಶೇಖರ ಎಸ್.ಲಾಡ್ಲಾಪೂರ ನಾಲವಾರ ಅವರು ಆಗ್ರಹಿಸಿದ್ದಾರೆ.
ಕಾಂಗ್ರೆಸ್ ಭದ್ರಕೋಟೆಯಾಗಿದ್ದ ಜೇವರ್ಗಿ ಮತಕ್ಷೇತ್ರದಲ್ಲಿ ಮೊಟ್ಟ ಮೊದಲ ಬಾರಿಗೆ ಕಮಲ ಅರಳಿಸಿದ ಮಾಜಿ ಶಾಸಕ ದೊಡ್ಡಪ್ಪ ಗೌಡ ಪಾಟೀಲ ನರಿಬೊಳ ಅತ್ಯಂತ ಹಿಂದುಳಿದ ಜೇವರ್ಗಿ ತಾಲೂಕನ್ನು ಬಿಜೆಪಿ ಸರ್ಕಾರದ ಅವಧಿಯಲ್ಲಿ. ಸಾವಿರಾರು ಕೋಟಿ. ರೊ ಅನುದಾನ ತಂದು ಮಾದರಿ ಕ್ಷೇತ್ರವನ್ನಾಗಿ ಅಭಿವೃದ್ದಿಪಡಿಸಿದ್ದಾರೆ. ಸತತವಾಗಿ ೮ ಭಾರಿ ಗೆದ್ದು ಮಂತ್ರಿ. ಮುಖ್ಯಮಂತ್ರಿಯಾಗಿದ್ದ ಮಾಜಿ ಮುಖ್ಯಮಂತ್ರಿ ಎನ್. ಧರಂಸಿಂಗ್ ಅವರನ್ನು ಸೋಲಿನ ರುಚಿ ತೋರಿಸಿದ ನರಿಬೋಳ ಅವರು ಪಕ್ಷ ನಿಷ್ಟಾರಾಗಿ, ಪ್ರಾಮಾಣಿಕತೆಯಿಂದ ಬಿಜೆಪಿ ಪಕ್ಷದ ಬಲ ವರ್ಧನೆಗಾಗಿ ಹಗಲಿರುಳು ಶ್ರಮಿಸುತ್ತಿದ್ದಾರೆ.
ಅದರ ಪ್ರತಿಫಲವಾಗಿ ಕಳೆದ ಜಿ ಪಂ.ತಾಪಂ. ಪುರಸಭೆ ಗ್ರಾಮ ಪಂಚಾಯತ್ ಚುನಾವಣೆಯಲ್ಲಿ ಅತಿ ಹೆಚ್ಚು ಬಿಜೆಪಿ ಅಭ್ಯರ್ಥಿಗಳು ಗೆಲವು ಸಾದಿಸಿಧ್ಧಾರೆ ಅಲ್ಲದೇ ಕಳೆದ ಲೋಕಸಭಾ ಚುನಾವಣೆಯಲ್ಲಿ, ೨೦ ಸಾವಿರಕ್ಕೊ ಅಧಿಕ ಲೀಡ್ ಬಿಜೆಪಿ ಪಕ್ಷಕ್ಕೆ ಬಂದಿದೆ ವಿಧಾನ ಪರಿಷತ್ ಚುನಾವಣೆಯಲ್ಲಿ ಶಶೀಲ್ ಜಿ ನಮೋಶಿ ಗೆಲುವಿಗೆ ಜೇವರ್ಗಿ ಮತಕ್ಷೇತ್ರದ ಕೊಡುಗೆ ಅಪಾರವಾಗಿದೆ.
ತಾಲೂಕಿನಾಧ್ಯಂತ ಪಾದರಸದಂತೆ ಓಡಾಡುತ್ತಾ ಪಕ್ಷ ಸಂಘಟನೆಗೆ ಹೆಚ್ಚಿನ ಶ್ರಮ ವಹಿಸುತ್ತಿರುವ ಮಾಜಿ ಶಾಸಕ ದೊಡ್ಡಪ್ಪ ಗೌಡ ಪಾಟೀಲ ನರಿಬೋಳ ಅವರಿಗೆ ಕೋಡಲೆ ಬಿಜೆಪಿ ಸರ್ಕಾರ ಸೊಕ್ತ ಸ್ಥಾನಮಾನ ನೀಡಬೇಕು ಎಂದು ಯುವ ಮುಖಂಡ ಸೋಮಶೇಖರ ಎಸ್. ಲಾಡ್ಲಾಪೂರ ಅವರು ಸರ್ಕಾರಕ್ಕೆ ಒತ್ತಾಯಿಸಿದ್ದರು.