ತ್ರಿವಳಿ ಗುಳಿಗೆ ಸೇವನೆಯೊಂದಿಗೆ ಸಾಮೂಹಿಕ ಔಷಧ ಸೇವನೆಗೆ ಚಾಲನೆ

0
64

ಕಲಬುರಗಿ: ಕರ್ನಾಟಕ ಸರ್ಕಾರವು ರಾಷ್ಟ್ರೀಯ ಆರೋಗ್ಯ ಕಾರ್ಯಕ್ರಮದಡಿಯಲ್ಲಿ ಆನೆಕಾಲು ರೋಗ ನಿವಾರಣೆಯ ಉದ್ದೇಶದಿಂದ ಜಿಲ್ಲೆಯಾದ್ಯಂತ ೨೨ ರಿಂದ ೬ನೇ ಫೆಬ್ರವರಿ ೨೦೨೧ ವರೆಗೆ ಮಾಪ್-ಅಪ್ ಸುತ್ತು ಸೇರಿ ತ್ರಿವಳಿ ಔಷಧಿಗಳೊಂದಿಗೆ        (ಐವರ್‌ಮೆಕ್ಟಿನ್, ಡಿ ಇ ಸಿ ಹಾಗೂ ಅಲ್ಬೆಂಡಜೋಲ್)  ನಡೆಯಲಿರುವ ಸಾಮೂಹಿಕ ಔಷಧಿ ನುಂಗಿಸುವ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು.

ಕರ್ನಾಟಕ ರಾಜ್ಯ ಆರೋಗ್ಯ ಇಲಾಖೆಯ ಎನ್‌ವಿಬಿಡಿಸಿಪಿ ವಿಭಾಗದ ಸಹ ನಿರ್ದೇಶಕರಾದ  ಡಾ. ರಮೇಶ್ ಕೆ. ಕೌಲಗುಡ್ ರವರು ಮಾತನಾಡುತ್ತಾ ೨೦೨೧ರ ವೇಳೆಗೆ ಆನೆಕಾಲು ರೋಗದ ನಿರ್ಮೂಲನೆಗೆ ಕರ್ನಾಟಕವು ಬದ್ದವಾಗಿದೆ. ಸಾಮೂಹಿಕ ಔಷಧ ಸೇವನೆಯು ಆನೆಕಾಲು ರೋಗದ ನಿವಾರಣೆಗ ನಿರ್ಣಾಯಕ ಆಧಾರ ಸ್ತಂಭವಾಗಿದೆ.  ಸಾಮೂಹಿಕ ಔಷಧ ಸೇವನೆಯ (ಎಂಡಿಎ) ಕಾರ್ಯಕ್ರಮದಲ್ಲಿ  ಫೈಲೇರಿಯಾ ತಡೆಗಟ್ಟುವ ಔಷಧಿಗಳ ಸೇವನೆಯು ಸಮುದಾಯದಲ್ಲಿರುವ ಮೈಕ್ರೋ ಫೈಲೇರಿಯಾ ಪರಾವಲಂಬಿಗಳ ಹರಡುವಿಕೆಯನ್ನು  ಮೊಟಕುಗೊಳಿಸುತ್ತದೆ ಎಂದು ತಿಳಿಸಿದರು.

Contact Your\'s Advertisement; 9902492681

ಈಗಾಗಲೇ ಯಾದಗಿರಿ ಜಿಲ್ಲೆಯಲ್ಲಿ ತ್ರಿವಳಿ ಗುಳಿಗೆಗಳ ಸೇವನೆಯೊಂದಿಗೆ  (ಐಡಿಎ) ಎರಡನೇ ಸುತ್ತಿನ ಎಂಡಿಎ ಕಾರ್ಯಕ್ರಮವನ್ನು ಯಶಸ್ವಿಯಾಗಿ ಜಾರಿಗೆ ತಂದಿದ್ದೇವೆ. ಇತ್ತೀಚಿಗೆ ೨೦೨೦ರ ಡಿಸೆಂಬರ್ ನಲ್ಲಿ ಯಾದಗಿರಿ ಜಿಲ್ಲೆಯಲ್ಲಿ ನಡೆದ ಸುತ್ತುಗಳಲ್ಲಿ ೯೨% ರಷ್ಟು ವ್ಯಾಪ್ತಿಯ ಸಾಧನೆಯನ್ನು ಮಾಡಲಾಗಿದೆ. ಇದರಿಂದ ಕಲಬುರಗಿಯಲ್ಲಿ ಈ ಯಶಸ್ಸನ್ನು ಪುನಾರಾವರ್ತಿಸಲು ಸಾಧ್ಯವಾಗುತ್ತದೆ ಎಂಬ ವಿಶ್ವಾಸವಿದೆ  ಎಂದು ತಿಳಿಸಿದರು.

ಆನೆಕಾಲು ರೋಗ ನಿವಾರಣೆಗಾಗಿ ಸಾಮೂಹಿಕ ಔಷಧ ಸೇವನೆ (ಎಂಡಿಎ) ಯಿಂದ ಆಗುವ ಅನುಕೂಲಗಳ ಮಹತ್ವ ಬಗ್ಗೆ ಎನ್.ವಿಬಿಡಿಸಿಪಿ ಸಂಶೋಧನಾ ಅಧಿಕಾರಿ ಡಾ.ಮಹಮದ್ ಷರೀಫ್ ಇವರು  ಈ ಔಷಧವು ಸುರಕ್ಷಿತ ಹಾಗೂ ಪರಿಣಾಮಕಾರಿಯಾಗಿದೆ ಎಂದು ತಿಳಿಸಿದರು.

ಔಷಧ ಸೇವನೆಯಿಂದ ಜಂತುಹುಳುಗಳ ನಿವಾರಣೆಯಾಗಿ  ಮಕ್ಕಳು, ವಯಸ್ಕರಲ್ಲಿ ಪೌಷ್ಠಿಕತೆ ಹಾಗೂ ರೋಗನಿರೋಧಕ ಶಕ್ತಿ ಹೆಚ್ಚುವುದು. ದೈಹಿಕ ಮತ್ತು ಬೌದ್ಧಿಕ ಬೆಳವಣಿಗೆಗೆ ಸಹಾಯ ಮಾಡುತ್ತದೆ. ಹಾಗೂ ಕಜ್ಜಿ ಮತ್ತು ತುರಿಕೆಗೆ ಚಿಕಿತ್ಸೆಯು ದೊರೆಯುತ್ತದೆ.  ಒಂದು ವೇಳೆ ಕೆಲವು ಜನರು ಔಷಧವನ್ನು ಸೇವಿಸಿ ಇನ್ನು ಕೆಲವರು ಸೇವಿಸದಿದ್ದಲ್ಲಿ ಇಡೀ ಸಮುದಾಯಕ್ಕೆ  ಆನೆಕಾಲು ರೋಗದ ಸೋಂಕು ಅಪಾಯವನ್ನುಂಟುಮಾಡುತ್ತದೆ.

ಆದ್ದರಿಂದ ಸಮಸ್ಯಾತ್ಮಕ ಪ್ರದೇಶದ ಎಲ್ಲಾ ಸಮುದಾಯದ ಪ್ರತಿನಿಧಿಗಳು ಸಾಮೂಹಿಕ ಔಷಧ ಸೇವನೆಯನ್ನು ಕೋವಿಡ್ -೧೯ ನ್ನು ತಡೆಗಟ್ಟಲು ತರಬೇತಿಯನ್ನು ಹೊಂದಿರುವ ನುರಿತ ಔಷಧ ವಿತರಕರ ಸಮ್ಮುಖದಲ್ಲಿಯೇ  ಸೇವಿಸುವುದು ಹಾಗೂ ಇತರರಿಗೂ ಸೇವಿಸುವಂತೆ  ಪ್ರೇರೇಪಿಸಬೇಕೆಂದು ಮನವಿ ಮಾಡಿದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here