ಕಲಬುರಗಿ: ಚಿಂಚೋಳಿ ತಾಲೂಕಿನ ಸುಲೇಪೇಟ ಗ್ರಾಮದ ಪ್ರವಾಸಿ ಮಂದಿರದ ಆವರಣದ ಒಳಗಡೆ ಪ್ರವೇಶಿಸುವ ಎದುರಗಡೆ ಇರುವ ರಸ್ತೆ ದೊಡ್ಡದಾದ ತೇಗ್ಗು ಬಿದ್ದಿದೆ ವಾಹನಗಳು ತೇಗ್ಗುಗಳಲ್ಲಿ ಸೀಕಿ ಹಾಕಿಕೋಳುತ್ತೀವೆ ಪ್ರವಾಸಿ ಮಂದಿರದ ಒಳಗಡೆ ಪ್ರವೇಶಿಸಬೇಕಾದರೆ ವಾಹನ ಸವಾರರು ಪರದಾಡುವಂತ ಸ್ಥಿತಿ ನಿರ್ಮಾಣವಾಗಿದೆ.
ಪ್ರವಾಸಿ ಮಂದಿರದ ಪ್ರವೇಶಿಸುವ ರಸ್ತೆಯಲ್ಲಿ ತೇಗ್ಗುಗಳಲ್ಲಿ ಚರಂಡಿ ನೀರು ನಿಂತಿರುವುದರಿಂದ ಸೋಳ್ಳೆಗಳ ಕಾಟ ಹೇಚ್ಚಾಗಿದೆ. ಈ ರಸ್ತೆಯ ತೇಗ್ಗುಗಳಲ್ಲಿ ಬೈಕ್ ಸವಾರರು ಆಯಾ ತಪ್ಪಿ ಬೀದ್ದು ಸಣ್ಣ ಪುಟ್ಟ ಗಾಯ ಮಾಡಿಕೂಂಡಿರುವ ಉದಾಹರಣೆ ಸಾಕಷ್ಟಿವೆ ಎಂದು ಸಮಾಜಿಕ ಕಾರ್ಯಕರ್ತರಾದ ಸಂತೋಷ್ ಜಾಬಿನ್ ಸುಲೇಪೇಟ್ ತಾಲ್ಲೂಕಾಧಿಕಾರಿಗಳ ಕಾರ್ಯವೈಖರಿ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಪ್ರವಾಸಿ ಮಂದಿರ ಕಟ್ಟಡವು ಬಿರುಕು ಬೀಟ್ಟಿದ್ದು, ಇವತ್ತು ನಾಳೆ ಕಟ್ಟಡ ಬೀದ್ದು ಹೋಗುವ ಸ್ಥಿತಿಯಲ್ಲಿದ್ದು, ಸಂಪೂರ್ಣ ಪಾಳು ಬಿದ್ದಂತಾಗಿದೆ. ಪ್ರವಾಸಿ ಮಂದಿರದ ಸುತ್ತ ಮುತ್ತ ಕೋಳಚ್ಚೆಯಾಗಿ ಮಾರ್ಪಟ್ಟಿದ್ದು, ಇದರಿಂದ ದುರ್ವಾಸನೆ ಬರತೋಡಗಿದೆ ಎಂದು ತಿಳಿಸಿದ್ದಾರೆ.
ರಾತ್ರಿ ವೇಳೆಯಲ್ಲಿ ಪ್ರವಾಸಿ ಮಂದಿರದಲ್ಲಿ ಪುಂಡರ ಹಾವಳಿ ಹೇಚ್ಚಾಗಿದೆ. ಎಲ್ಲೆಂದರಲ್ಲಿ ಮದ್ಯದ ಬಾಟಲಿ ಸಿಗರೇಟ್, ಇಸ್ಪೇಟ್ ಕಂಡುಬರುವ ಮೂಲಕ ಅನೈತಿಕ ಚಟುವಟಿಕೆಗಳ ತಾಣವಾಗಿದೆ.
ಸಮಸ್ಯೆಗಳ ಬಗ್ಗೆ ಸಂಭಂದಪಟ್ಟ ಅಧಿಕಾರಿಗಳಿಗೆ ಗಮನಕ್ಕೆ ತಂದರೂ ಯಾವುದೆ ಪ್ರಯೋಜನವಾಗಿಲ್ಲಾ. ಇನ್ನಾದರೂ ಅಧಿಕಾರಿಗಳು ಎಚ್ಚತ್ತಿಕೂಂಡು ದುರಸ್ತಿ ಮಾಡಲು ಮುಂದಾಗಬೇಕೆಂದು ಆಗ್ರಹಿಸಿದ್ದಾರೆ