ಆನೆಕಾಲು ರೋಗ ನಿರ್ಮೂಲನೆ: ಮಾತ್ರೆ ನುಂಗಿಸುವ ಅಭಿಯಾನಕ್ಕೆ ಚಾಲನೆ

0
39

ಕಲಬುರಗಿ: ಜಿಲ್ಲೆಯಲ್ಲಿ ಆನೆಕಾಲು ರೋಗ ನಿರ್ಮೂಲನೆ ನಿಟ್ಟಿನಲ್ಲಿ ಜನವರಿ ೩೧ವರೆಗೆ ಕೈಗೊಂಡಿರುವ ಸಾಮೂಹಿಕ ಮಾತ್ರೆ ನುಂಗಿಸುವ ಅಭಿಯಾನವನ್ನು ಯಶಸ್ವಿಗೊಳಿಸಬೇಕೆಂದು ಜಿಲ್ಲಾ ಪಂಚಾಯತಿಯ ಅಧ್ಯಕ್ಷೆ ಸುವರ್ಣಾ ಹಣಮಂತರಾಯ ಮಲಾಜಿ ಅವರು ಜನತೆಗೆ ಮನವಿ ಮಾಡಿದರು.

ನಗರದ ಮಾಣಿಕೇಶ್ವರಿ ಕಾಲೋನಿಯ ಆರೋಗ್ಯ ಕೇಂದ್ರದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಇವುಗಳ ಸಂಯುಕ್ತಾಶ್ರಯದಲ್ಲಿ ನಡೆದ, ಆನೆಕಾಲು ರೋಗ ನಿರ್ಮೂಲನೆಗಾಗಿ ೧೭ನೇ ಸುತ್ತಿನ ಸಾಮೂಹಿಕ ಔಷಧಿ ಡಿ.ಇ.ಸಿ., ಐವರ್‌ಮೆಕ್ಟಿನ್ ಮತ್ತು ಅಲ್ಬೆಂಡೊಜೋಲ್ ಮಾತ್ರೆಗಳನ್ನು ನುಂಗಿಸುವ ಕಾರ್ಯಕ್ರಮವನ್ನು ಸಸಿಗೆ ನೀರೆರೆಯುವ ಮೂಲಕ ಶುಕ್ರವಾರ ಉದ್ಘಾಟಿಸಿ ಅವರು ಮಾತನಾಡಿದರು.

Contact Your\'s Advertisement; 9902492681

ಆನೆಕಾಲು ರೋಗ ನಿರ್ಮೂಲನೆಗಾಗಿ ಆಶಾ ಕಾರ್ಯಕರ್ತೆಯರು, ಅಂಗನವಾಡಿ ಕಾರ್ಯಕರ್ತರು ಹಾಗೂ ಆರೋಗ್ಯ ಸಿಬ್ಬಂದಿಯವರು ಸಾರ್ವಜನಿಕರ ಮನೆ-ಮನೆಗೆ ತೆರಳಿ ಮಾತ್ರೆ ನುಂಗಿಸುವ ಕುರಿತು ಅರಿವು ಮೂಡಿಸಬೇಕು ಎಂದು ಕರೆ ನೀಡಿದರು.

ಕಾರ್ಯಕ್ರಮದ ಅಧ್ಯಕ್ಷತೆವಹಿಸಿ ಮಾತನಾಡಿದ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಅಧಿಕಾರಿ ಡಾ.ರಾಜಶೇಖರ್ ಮಾಲಿ ಅವರು, ಆನೆಕಾಲು ರೋಗ ನಿರ್ಮೂಲನೆಗೆ ಸೂಚಿಸಿರುವ ಮಾತ್ರೆಗಳನ್ನು ಕೋವಿಡ್-೧೯ ವ್ಯಾಕ್ಸಿನ್ ತೆಗೆದುಕೊಂಡ ದಿನದಂದು ಅಂತವರು ಆ ದಿನ ಮಾತ್ರ ಹೊರತುಪಡಿಸಿ ಬೇರೆ ದಿನ ಗುಳಿಗೆಗಳನ್ನು ನುಂಗಬಹುದು. ಅಲ್ಲದೇ ಮಾತ್ರೆ ನುಂಗುವ ಮುನ್ನ ಪ್ರತಿಯೊಬ್ಬರೂ ಕಡ್ಡಾಯವಾಗಿ ಆಹಾರ ಸೇವಿಸಿರಬೇಕು ಎಂದರು.

ನಗರ ವ್ಯಾಪ್ತಿಯಲ್ಲಿ ದಿನಕ್ಕೆ ೨೫ ಹಾಗೂ ಗ್ರಾಮೀಣ ಪ್ರದೇಶಗಳಲ್ಲಿ ೫೦ಕ್ಕೂ ಹೆಚ್ಚು ಮನೆ-ಮನೆಗಳಿಗೆ ತೆರಳಿ ಆರೋಗ್ಯ ಕಾರ್ಯಕರ್ತರು ಸಾರ್ವಜನಿಕರಿಗೆ ಮಾತ್ರೆಗಳನ್ನು ನುಂಗಿಸುವಲ್ಲಿ ಯಶಸ್ವಿಯಾಗಬೇಕು ಎಂದು ತಿಳಿಸಿದರು.

ಕಲಬುರಗಿ ವಿಭಾಗೀಯ ಸಹ ನಿರ್ದೇಶಕರಾದ ಡಾ.ಶಿವನಂದ ಸುರಗಾಳಿ ಅವರು ಮಾತನಾಡಿ, ಆನೆಕಾಲು ರೋಗ ನಿರ್ಮೂಲನೆಗೆ ಸಾರ್ವಜನಿಕರಿಗೆ ಮಾತ್ರೆಗಳನ್ನು ಹಂಚುವ ಬದಲು ನುಂಗಿಸುವ ಕಾರ್ಯಕ್ರಮವಾದಾಗ ಮಾತ್ರ‍್ರ ಈ ಅಭಿಯಾನ ಯಶಸ್ವಿಯಾಗಲು ಸಾಧ್ಯ ಎಂದರು.

ಆನೆ ಕಾಲು ರೋಗ ನಿರ್ಮೂಲನೆ ಅಭಿಯಾನದ ಅಂಗವಾಗಿ ಆರಂಭದಲ್ಲಿ ಆಶಾ ಕಾರ್ಯಕರ್ತೆಯರಾದ ತುಕ್ಕಾಬಾಯಿ, ಲಕ್ಷಿö್ಮÃ ಹಾಗೂ ಆರೋಗ್ಯ ಇಲಾಖೆ ಸಿಬ್ಬಂದಿ ಶಾಂತಾ ಅವರು ಮಾತ್ರೆಗಳನ್ನು ನುಂಗಿದರು.

ಕಾರ್ಯಕ್ರಮಕ್ಕೂ ಮುನ್ನ ಆನೆಕಾಲು ರೋಗ ನಿರ್ಮೂಲನೆ ಕುರಿತು ಸಾರ್ವಜನಿಕರಲ್ಲಿ ಅರಿವು ಮೂಡಿಸಲು ಧ್ವನಿವರ್ಧಕವುಳ್ಳ ಪ್ರಚಾರ ಆಟೋಗಳಿಗೆ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಅಧಿಕಾರಿ ಡಾ.ರಾಜಶೇಖರ್ ಮಾಲಿ ಅವರು ಹಸಿರು ನಿಶಾನೆ ತೋರಿಸಿದರು.

ಕಾರ್ಯಕ್ರಮದಲ್ಲಿ ಜಿ.ಪಂ. ಉಪಾಧ್ಯಕ್ಷೆ ಶೋಭಾ ಸಿದ್ದು ಸಿರಸಗಿ, ಬೆಂಗಳೂರಿನ ವೈಜ್ಞಾನಿಕ ಸಲಹೆಗಾರ ಡಾ.ಕುಮಾರ್, ಕಲಬುರಗಿ ವಿಭಾಗೀಯ ಸಹ ನಿರ್ದೇಶಕ ಡಾ. ಹಬೀಬ್ ಉಸ್ಮಾನ, ಎಂ.ಡಿ.ಎ. ಕಾರ್ಯಕ್ರಮದ ಅಧಿಕಾರಿ ಡಾ.ಬಸವರಾಜ ಗುಳಗಿ, ಜಿಲ್ಲಾ ಆರ್‌ಸಿಹೆಚ್ ಅಧಿಕಾರಿ ಡಾ.ಪ್ರಭುಲಿಂಗ ಮಾನಕರ, ಕಲಬುರಗಿ ತಾಲೂಕು ಆರೋಗ್ಯಾಧಿಕಾರಿ ಡಾ.ಶರಣಪ್ಪ ಕ್ಯಾತ್ನಾಳ, ಭಾರತ ಸರ್ಕಾರದ ಫೈಲೇರಿಯಾ ಸಮಾಲೋಚಕ ಡಾ.ಕುಮಾರ್.ಕೆ., ಕಲಬುರಗಿ ಕೀಟ ಶಾಸ್ತçಜ್ಞ ಚಾಮರಾಜ ದೊಡ್ಡಮನಿ, ವಲಯ ಕೀಟ ಶಾಸ್ತçಜ್ಞೆ ಗಂಗೋತ್ರಿ, ಜಿಲ್ಲಾ ವಿಬಿಡಿ ಸಮಾಲೋಚಕ ಕಾರಣಿಕ ಕೋರೆ, ಆಶಾ ಕಾರ್ಯಕರ್ತೆಯರು, ಆರೋಗ್ಯ ಇಲಾಖೆಯ ಸಿಬ್ಬಂದಿ ಮತ್ತಿತರಿದ್ದರು.

ಪ್ರಾರ್ಥನೆ ಗೀತೆಯನ್ನು ಪವಿತ್ರ ಪಾಟೀಲ್ ಹಾಡಿದರೆ, ಕಾರ್ಯಕ್ರಮದ ನಿರೂಪಣೆಯನ್ನು ಜಿಲ್ಲಾ ಘಟಕಾಧಿಕಾರಿ ಗಣೇಶ್ ಚಿನ್ನಾಕಾರ ಅವರು ಮಾಡಿದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here