ಗುಲಬರ್ಗಾ ವಿವಿಯಲ್ಲಿ ಕನ್ನಡ ನ್ಯೂಜ್: ಭಾರತೀಯ ಸಾಹಿತ್ಯದಲ್ಲಿ ಅನುವಾದ, ಸೃಜನಶೀಲತೆ

0
38

ಕಲಬುರಗಿ: ಜವಾಹರಲಾಲ್ ನೆಹರು ವಿಶ್ವವಿದ್ಯಾಲಯ, ನವದೆಹಲಿ ಪ್ರಾಧ್ಯಾಪಕರಾದ ಪ್ರೊ. ಎಚ್.ಎಸ್. ಶಿವಪ್ರಕಾಶ್, ಅವರು ಮಾತಾಡುತ್ತ ಬುದ್ಧನ ತ್ರಿಪಿಠಕಗಳು ಚೀನಿ, ಟಿಬೇಟ್ ಭಾಷೆಗಳಿಗೆ ಅನುವಾದವಾಗದಿದ್ದರೆ, ಏಷ್ಯಾದ ಇತಿಹಾಸದ ಚಿತ್ರಣವೆ ಬೇರೆಯಾಗಿರುತ್ತಿತ್ತು. ಅನುವಾದ ಸಾಹಿತ್ಯಕ್ಕೆ ಮಾತ್ರವಲ್ಲ ನಾಗರಿಕತೆಗೆ ಅನ್ವಯಿಸುತ್ತದೆ. ಅದೊಂದು ವಿಶ್ವವಾತ್ಮಕ ಪ್ರಕ್ರಿಯೆ ಸಂಸ್ಕೃತಿಕ ಅನುವಾದ ಪ್ರಮುಖವಾಗಿ ಸಾಹಿತ್ಯ ಚರಿತ್ರೆಯಲ್ಲಿ ಕಾಣಬಹುದು. ಉದಾಃ ಮಹಾಭಾರತವನ್ನು ಪಂಪ ದೃಷ್ಟಿಯಲ್ಲಿ ಕಾಣುವುದು ಒಂದು ಭಾಷೆಯಿಂದ ಇನ್ನೊಂದು ಭಾಷೆಗೆ ಪಠ್ಯವನ್ನು ಬದಲಾಯಿಸುವುದು, ರೂಪಾಂತರಗೊಳಿಸುವುದು, ಇನ್ನೊಂದು ಪ್ರಕಾರವೆಂದರೆ ಅನೂಕುಲಕ್ಕೆ ತಕ್ಕಂತೆ ಅನುವಾದಿಸುವುದು. ಹೀಗೆ ಹಲವು ಪ್ರಕಾರಗಳು ಅನುವಾದಲ್ಲಿದೆ, ಜಿನಸೇನಾಚಾರ್ಯರ ಪೂರ್ವ ಪುರಾಣದ ಹಾಗೂ ಪಂಪನ ಆದಿಪುರಾಣ ವಸ್ತು ಒಂದಾಗಿದರು, ಹೇಳುವ ಕ್ರಮ, ನೋಡುವ ದೃಷ್ಟಿಕೋನ ವಿಭಿನ್ನವಾಗಿರುತ್ತದೆ. ಅದು ಅನುಕೂಲಕ್ಕೆ ತಂಕ್ಕಂತೆ ಅನುವಾದಿಸುವರು. ಗ್ರೀಕ್ ಭಾಷೆಯಲ್ಲಿ ಚಂದ್ರನನ್ನು ಸ್ತ್ರೀಲಿಂಗವಾಗಿ, ಸಂಸ್ಕೃತದಲ್ಲಿ ಪುಲ್ಲಿಂಗವಾಗಿ ಕರೆಯಲಾಗುತ್ತದೆ. ಭಾಷಾ ಚಿಂತನೆಯಲ್ಲಿ ಕಲ್ಪನೆಯನ್ನು ಬದಲಾಯಿಸುತ್ತದೆ. ಭಾಷೆ ನಮ್ಮ ಮನಲೋಕವನ್ನು ವಿಸ್ತರಿಸುತ್ತದೆ. ಅನುವಾದ ಕೇವಲ ಭಾಷಿಕ ಹಂತದಲ್ಲಿ ಮಾತ್ರವಲ್ಲ ಸಾಂಸ್ಕೃತಿಕವಾಗಿ ಅನುವಾದಿಸುತ್ತದೆ. ಪಶ್ಚಿಮ ಅನುವಾದ ರೂಢಿಯನ್ನು ಬಿಟ್ಟು ಭಾರತೀಯ ಪರಂಪರೆಯಲ್ಲಿ ಕಟ್ಟಿಕೊಳ್ಳಬೇಕೆಂದು ಹೇಳಿದರು.

ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯದ ಪ್ರಾಧ್ಯಾಪಕರ ಪ್ರೊ. ವಿಕ್ರಮ ವಿಸಾಜಿಯವರು ಅತಿಥಿಯಾಗಿ ಭಾಗವಹಿಸಿ ಮಾತಾಡುತ್ತ ಪ್ರೊ. ಎಚ್.ಎಸ್. ಶಿವಪ್ರಕಾಶ್ ಅವರು ಅನೇಕ ಪಠ್ಯಗಳನ್ನು ಆವಾಹಿಸಿಕೊಂಡಿದ್ದಾರೆ. ಕನ್ನಡದಲ್ಲಿ ಹೊಸ ಪ್ರತಿಮಾ ಲೋಕವನ್ನು ಸೃಷ್ಟಿಸಿದಂತವರು. ಕನ್ನಡ ರಂಗಭೂಮಿಯಲ್ಲಿ ಹೊಸ ಪ್ರಯೋಗ ಮಾಡಿದರು. ಉದಾಃ ಬಹುರೂಪಿ ಕಾರ್ಯದ ಮೂಲಕ ಬಸವಯುಗವನ್ನು ಕಟ್ಟಿದ್ದಾರೆ ಮಾಹಾಚೈತ್ರದಲ್ಲಿ. ಮತ್ತೆ ಮತ್ತೆ ರೀವಿಜನ್ ಮಾಡುವ ಕವಿ, ಅನುವಾದಕ, ಪ್ರೊ. ಎಚ್.ಎಸ್. ಶಿವಪ್ರಕಾಶ್ ಆಗಿದ್ದಾರೆ.

Contact Your\'s Advertisement; 9902492681

ಕನ್ನಡ ಅಧ್ಯಯನ ಸಂಸ್ಥೆಯ ನಿರ್ದೇಶಕರಾದ ಪ್ರೊ. ಎಚ್.ಟಿ. ಪೋತೆ ಅವರು ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಮಾತಾಡುತ್ತ ಅನುವಾದ ಪ್ರಕಾರ ಸಾಹಿತ್ಯದಲ್ಲಿ ಇಲ್ಲದಿದ್ದರೆ ನಾವೇಲ್ಲ ಕುಬ್ಜರಾಗುತ್ತಿದ್ದೇವು. ಮನುಷ್ಯ ಕುಲದ ಒಳತಿಗಾಗಿ ಅನ್ಯ ಚಿಂತನೆಗಳು ಮನುಷ್ಯ ಮುಖಿಯಾಗಿದ್ದರೆ ಅವುಗಳನ್ನು ನಮ್ಮದು ಎಂದು ಒಪ್ಪಿಕೊಳ್ಳಬೇಕು. ಅಂತರ್‌ಶಿಸ್ತಿಯ ಅಧ್ಯಯನ ಸದಾ ನಡೆಯುತ್ತಲೆ ಇರಬೇಕು. ಮನ್ಯಷ ಮುಖಿ ಆಲೋಚನೆಗಳನ್ನು ಸದಾ ಬೆಂಬಲಿಸಬೇಕು. ಕಲಿಕೆ ನಿರಂತರ ಚಲನಶೀಲವಾಗಿರಬೇಕು ಎಂದರು.

ಕಾರ್ಯಕ್ರಮದಲ್ಲಿ ನಗರದ ಗಣ್ಯರು ಶ್ರೀ ಸುರೇಶ ಬಡಿಗೇರ, ಸುಬ್ಬರಾವ್ ಕುಲಕರ್ಣಿ, ಡಾ. ಶ್ರೀನಿವಾಸ ಶಿರನೂರಕರ್, ಶ್ರೀ ವೆಂಕಟೇಶ ಮುದಗಲ್ ಉಪಸ್ಥಿತರಿದ್ದರು. ಡಾ. ಹಣಮಂತ ಮೇಲಕೇರಿ ಸ್ವಾಗತಿಸಿದರು. ಡಾ. ಸಿದ್ಧಲಿಂಗ ದಬ್ಬಾ ವಂದಿಸಿದರು. ಡಾ. ಸಂತೋಷಕುಮಾರ ಕಂಬಾರ ನಿರೂಪಿಸಿದರು. ಸಂಶೋಧನಾ ಮತ್ತು ಸ್ನಾತಕೋತ್ತರ ವಿದ್ಯಾರ್ಥಿಗಳು ಹಾಗೂ ಬೋಧಕ ಮತ್ತು ಬೋಧಕೇತರ ಸಿಬ್ಬಂದಿ ಪಾಲ್ಗೊಂಡಿದ್ದರು.

ಹಂಪನಾಗರಾಜಯ್ಯನವರ ಮೇಲಾದ ಪೋಲಿಸ್ ಕೇಸಿನ ವಿಷಯದಲ್ಲಿ ಕೇಳಲಾದ ಪ್ರಶ್ನೆಗೆ ಹೀಗೆ ಉತ್ತರಿಸಿದರು. ಅಭಿವ್ಯಕ್ತಿ ಸ್ವಾತಂತ್ರ್ಯ ಇಂದಿನ ಕಾಲಘಟ್ಟದಲ್ಲಿ ದಮನಗೊಳ್ಳುತ್ತಿದೆ. ಒಬ್ಬ ಬರಹಗಾರನಿಗೂ ಇರುವಂತ ಸ್ವಾತಂತ್ರ್ಯ ಒಬ್ಬ ಸಾಮಾನ್ಯ ವ್ಯಕ್ತಿಗೂ ಕೂಡ ಸ್ವಾತಂತ್ರ್ಯ ಇರಬೇಕೆಂದು ಸಮರ್ಥಿಸಿದರು. ಜನಪ್ರತಿನಿಧಿಗಳು ಹಾಗೂ ಆಡಳಿತ ವರ್ಗ ತಮ್ಮ ಜವಾಬ್ದಾರಿಯನ್ನು ಮರೆತು ವರ್ತಿಸುತ್ತಿರುವುದು ವಿಪರ್ಯಾಸ. -ಕೈಚಾಚುವ ಸ್ಥಿತಿ : ಪ್ರೊ. ಎಚ್.ಎಸ್. ಶಿವಪ್ರಕಾಶ್

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here