ಜನನಿ ಮಹಿಳಾ ಕಾಲೇಜಿಗೆ ರಾಜ್ಯಮಟ್ಟದ ಮೂರು ಸಾಂಸ್ಕೃತಿಕ ಪ್ರಶಸ್ತಿ

0
117

ಸುರಪುರ: ಈ ತಿಂಗಳ 6 ರಿಂದ 10 ರ ವರೆಗೆ ಐದು ದಿನಗಳ ಕಾಲ ಶಿವಮೊಗ್ಗದ ಕುವೆಂಪು ವಿಶ್ವವಿದ್ಯಾಲಯದಲ್ಲಿ ನಡೆದ ರಾಜ್ಯ ಮಟ್ಟದ ರಾಷ್ಟ್ರೀಯ ಸೇವಾ ಯುವಜನೋತ್ಸವದಲ್ಲಿ ಅಕ್ಕಮಹಾದೇವಿ ವಿಶ್ವವಿದ್ಯಾಲಯದ ಪ್ರತಿನಿಧಿಗಳಾಗಿ ನಗರದ ಜನನಿ ಮಹಿಳಾ ಪದವಿ ಮಹಾವಿದ್ಯಾಲಯದ ರಾಷ್ಟ್ರೀಯ ಸೇವಾಯೋಜನೆ ಕಾರ್ಯಕ್ರಮಾಧಿಕಾರಿ ಡಾ.ಮಲ್ಲಿಕಾರ್ಜುನ ಕಮತಗಿ ಮಾರ್ಗದರ್ಶನದಲ್ಲಿ ಹತ್ತು ಜನ ವಿದ್ಯಾರ್ಥಿನಿಯರ ತಂಡಭಾಗವಹಿಸಿ ವಿವಿಧ ಸಾಂಸ್ಕೃತಿಕ ವಿಭಾಗಗಳಲ್ಲಿ ನಡೆದ ಸ್ಪರ್ಧೆಗಳಲ್ಲಿ ದ್ವಿತೀಯ ಸ್ಥಾನವನ್ನು ಪಡೆದಿದ್ದಾರೆ.

ಏಕವ್ಯಕ್ತಿ ಗಾಯನ ಸ್ಪರ್ಧೆಯಲ್ಲಿ ಹುಲಗಮ್ಮ ಶೇಖರ್ ದ್ವಿತೀಯ ಸ್ಥಾನ ಮತ್ತು ರಸಪ್ರಶ್ನೆ ಸ್ಪರ್ಧೆಯಲ್ಲಿ ಸರಸ್ವತಿ ಹಣಮಂತ, ಬಸಮ್ಮ ಮಡಿವಾಳಪ್ಪ ದ್ವಿತೀಯ ಸ್ಥಾನ ಹಾಗೂ ಸಾಂಸ್ಕೃತಿಕ ಮೆರವಣಿಗೆಯಲ್ಲಿ ಅಕ್ಕಮಹಾದೇವಿ ವೇಷಧಾರಿ ಶೃತಿ ಗೋವಿಂದಪ್ಪ ದ್ವಿತೀಯ ಸ್ಥಾನವನ್ನು ಪಡೆದು ವಿಶ್ವವಿದ್ಯಾಲಯ ಮತ್ತು ಮಹಾವಿದ್ಯಾಲಯಕ್ಕೆ ಉತ್ತಮ ಹೆಸರನ್ನು ತಂದುಕೊಟ್ಟಿರುತ್ತಾರೆ.

Contact Your\'s Advertisement; 9902492681

ವಿದ್ಯಾರ್ಥಿನಿಯರ ಈ ಸಾಧನೆಗೆ ವಿಶ್ವವಿದ್ಯಾಲಯದ ಕುಲಪತಿಗಳಾದ ಪ್ರೊ. ಸಬಿಹಾ ಭೂವಿಗೌಡ, ಕುಲಸಚಿವರಾದ ಪ್ರೊ ಆರ್ ಸುನಂದಮ್ಮ, ರಾಷ್ಟ್ರೀಯ ಸೇವಾ ಯೋಜನೆಯ ಸಂಯೋಜನಾಧಿಕಾರಿಗಳಾದ ಬಿ.ಎಲ್ ಲಕ್ಕಣ್ಣವರ್, ಸಂಸ್ಥೆಯ ಕಾರ್ಯದರ್ಶಿ ಆದಿಶೇಷ ನಿಲಗಾರ ಹಾಗುಕಾಲೇಜಿನ ಆಡಳಿತ ಮಂಡಳಿಯ ಸದಸ್ಯರು ಹಾಗೂ ಪ್ರಾಂಶುಪಾಲರು ಮತ್ತು ಉಪನ್ಯಾಸಕ ವರ್ಗ ವಿದ್ಯಾರ್ಥಿಗಳ ಸಾಧನೆಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here