ಸುರಪುರ ಗರುಡಾದ್ರಿ ಕಲಾ ಮಂದಿರದಲ್ಲಿ ವರ್ಷದ ವ್ಯಕ್ತಿ ಸನ್ಮಾನ ಸಮಾರಂಭ

0
26

ಸುರಪುರ: ನಗರದ ಗರುಡಾದ್ರಿ ಕಲಾ ಮಂದಿರದಲ್ಲಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ವರ್ಷದ ವ್ಯಕ್ತಿ ಸನ್ಮಾನ ಸಮಾರಂಭ ಹಾಗು ಉಪನ್ಯಾಸ ಮತ್ತು ಕವಿಗೋಷ್ಠಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.

ಕಾರ್ಯಕ್ರಮವನ್ನು ಉದ್ಘಾಟಿಸಿದ ದೂರದರ್ಶನದ ವಿಶ್ರಾಂತ ಮಹಾನಿರ್ದೇಶಕ ಮಹೇಶ ಜೋಷಿ ಜ್ಯೋತಿ ಪ್ರಜ್ವಲನೆ ಮಾಡಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.ನಂತರ ಮಾತನಾಡಿದ ಅವರು,ಸಗರನಾಡು ಎಂದರೆ ಅದು ಕಲೆ ಸಾಹಿತ್ಯ ಸಂಸ್ಕೃತಿಯ ಸಂಗಮವಾಗಿದೆ,ಇಂತಹ ನಾಡಿನಲ್ಲಿ ಹಿಂದಿನಿಂದಲೂ ಸಾಹಿತ್ಯ ಕ್ಷೇತ್ರ ಯಥೇಚ್ಛವಾಗಿ ಬೆಳೆದು ಬಂದಿದೆ,ಕೆಂಭಾವಿಯ ಬೋಗಣ್ಣ ಮುದನೂರ ದಾಸಿಮಯ್ಯ ಅರಳಗುಂಡಗಿಯ ಶರಣಬಸವ ದೇವಾಪುರದ ಲಕ್ಷ್ಮೀಶ ಹೀಗೆ ಅನೇಕ ಜನ ಸಂತ ಮಹಾಂತರು ಜನಸಿದ ಈ ಭೂಮಿ ಪುಣ್ಯಭೂಮಿಯಾಗಿದೆ ಎಂದರು.

Contact Your\'s Advertisement; 9902492681

ಅಲ್ಲದೆ ವರ್ಷದ ವ್ಯಕ್ತಿ ಪ್ರಶಸ್ತಿಯು ಸುರಪುರ ತಾಲೂಕು ಕನ್ನಡ ಸಾಹಿತ್ಯ ಪರಿಷತ್ ವಿಶೇಷವಾಗಿ ಸಾಧಕರನ್ನು ಗುರುತಿಸುವ ಕೆಲಸ ಅದ್ಭುತವಾಗಿದೆ,ಯಾವುದೇ ಸಾಧಕರಿಗೆ ಪ್ರಶಸ್ತಿಗಳು ಗುರುತಿಸಿ ಬರಬೇಕು ಆದರೆ ಇಂದು ಪ್ರಶಸ್ತಿ ಪಡೆಯುವವರಿಗಿಂತ ಪ್ರಶಸ್ತಿ ಹೊಡೆಯುವವರ ಸಂಖ್ಯೆ ಹೆಚ್ಚುತ್ತಿದೆ ಎಂದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ತಾಲೂಕು ಕಸಾಪ ಅಧ್ಯಕ್ಷ ಶ್ರೀನಿವಾಸ ಜಾಲವಾದಿ ಮಾತನಾಡಿ,ಪ್ರತಿ ವರ್ಷ ನಮ್ಮ ತಾಲೂಕು ಕಸಾಪದ ವತಿಯಿಂದ ಅಧ್ಧೂರಿಯಾಗಿ ಕಾರ್ಯಕ್ರಮವನ್ನು ನಡೆಸುತ್ತಿದ್ದೆವು ಆದರೆ ಈಬಾರಿ ಕೊರೊನಾ ಎನ್ನುವ ಮಹಾಮಾರಿ ನಮ್ಮ ತಾಲೂಕಿನ ಅನೇಕ ಜನ ಸಾಹಿತ್ಯದ ಮನಸ್ಸುಗಳನ್ನು ಬಲಿ ಪಡೆದಿದೆ,ಅದರಲ್ಲಿ ನಮ್ಮ ಸಾಂಸ್ಕೃತಿಕ ರಾಯಭಾರಿ ರಾಜಾ ಮದನಗೋಪಾಲ ನಾಯಕ ಅವರು ಎ.ಕೃಷ್ಣಾ ಅವರು ಹಾಗು ಇನ್ನೂ ಅನೇಕ ಜನರು ನಮ್ಮಿಂದ ದೂರವಾಗಿರುವುದು ದುಃಖವನ್ನು ತರಿಸಿದೆ ಎಂದರು.ಮುಂದಿನ ದಿನಗಳಲ್ಲಿ ಇನ್ನೂ ಅನೇಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ಯೋಜನೆಯನ್ನು ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಹೊಂದಿದೆ ಎಂದರು.

ಇದೇ ಸಂದರ್ಭದಲ್ಲಿ ಖ್ಯಾತ ಗಜಲ್ ಸಾಹಿತಿ ಅಲ್ಲಾಗಿರಿರಾಜ ಕನಕಗಿರಿ ಅವರ ಸರ್ಕಾರ ರೊಕ್ಕ ಮುದ್ರಿಸಬಹುದು ರೊಟ್ಟಿಯನ್ನಲ್ಲ ಎಂಬ ಕವನ ಸಂಕಲನವನ್ನು ಪತ್ರಕರ್ತ ಸಂಜೀವರಾವ್ ಕುಲಕರ್ಣಿ ಬಿಡುಗಡೆಗೊಳಿಸಿದರು.ನಂತರ ವರ್ಷದ ವ್ಯಕ್ತ ಪ್ರಶಸ್ತಿಗೆ ಭಾಜನರಾದ ಖ್ಯಾತ ನಾಟಕಕಾರ ಬಸವರಾಜ ಪಂಜಗಲ್ ಕೊಡೇಕಲ್ ಅವರಿಗೆ ಪ್ರಶಸ್ತಿ ಪ್ರಧಾನ ಮಾಡಿ ಸನ್ಮಾನಿಸಿ ಗೌರವಿಸಲಾಯಿತು ಹಾಗು ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಾದ ಸಾಹಿತಿ ವಿರೇಶ ಹಳ್ಳೂರ,ಚಂದ್ರಹಾಸ ಮಿಠ್ಠಾ ಹಾಗು ಜಾನಪದ ಅಕಾಡೆಮಿ ಪ್ರಶಸ್ತಿ ಪುರಸ್ಕೃತರಾದ ಶಿವಮೂರ್ತಿ ತನಿಖೇದಾರ ಬಸವಲಿಂಗಮ್ಮ ಗೋಗಿ ಇವರಿಗೂ ಸನ್ಮಾನಿಸಿ ಗೌರವಿಸಲಾಯಿತು.ಕೆಂಭಾವಿ ಹಿರೇಮಠದ ಚೆನ್ನಬಸವ ಶೀಶವಾಚಾರ್ಯ ಸ್ವಾಮೀಜಿ ಸಾನಿಧ್ಯ ವಹಿಸಿದ್ದರು.

ಮುಖ್ಯ ಅತಿಥಿಗಳಾಗಿ ಬಸವರಾಜ ಜಮದ್ರಖಾನಿ ನಾಟಕಕಾರ ಎಲ್.ಬಿ.ಕೆ.ಆಲ್ದಾಳ ಹಾಸ್ಯ ಕಲಾವಿದ ಬಸವರಾಜ ಮಹಾಮನಿ ಕಸಾಪ ಜಿಲ್ಲಾಧ್ಯಕ್ಷ ಸಿದ್ದಪ್ಪ ಹೊಟ್ಟಿ ನ್ಯಾಯವಾದಿ ಜೆ.ಅಗಸ್ಟಿನ್ ರಿಕ್ರೀಯೇಷನ್ ಕ್ಲಬ್ ಅಧ್ಯಕ್ಷ ರಾಜಾ ಮುಕುಂದ ನಾಯಕ ನಿವೃತ್ತ ಎಸ್ಪಿ ಸಿ.ಎನ್.ಭಂಡಾರಿ ಜಾನಪದ ಅಕಾಡೆಮಿ ಸದಸ್ಯ ಅಮರಯ್ಯಸ್ವಾಮಿ ಜಾಲಿಬೆಂಚಿ ಜಿಲ್ಲಾ ಕನ್ನಡ ಅಭಿವೃಧ್ಧಿ ಪ್ರಾಧಿಕಾರದ ಸದಸ್ಯ ಪ್ರಕಾಶ ಅಂಗಡಿ ಪ್ರಥಮ ದರ್ಜೆ ಗುತ್ತೇದಾರ ಕುಮಾರಸ್ವಾಮಿ ಗುಡ್ಡಡಗಿ ನೇಕಾರ ಸಂಘದ ಅಧ್ಯಕ್ಷ ವೀರಸಂಗಪ್ಪ ಹಾವೇರಿ ಸುರೇಶ ಸಜ್ಜನ್ ಅಲ್ಲಾಗಿರಿರಾಜ್ ವೇದಿಕೆ ಮೇಲಿದ್ದರು.

ಇದೇ ಸಂದರ್ಭದಲ್ಲಿ ಶ್ರೀಹರಿರಾವ್ ಆದವಾನಿ ಚಂದ್ರಶೇಖರ ಗೋಗಿ ಶರಣಕುಮಾರ ಜಾಲಹಳ್ಳಿಯವರಿಂದ ಸಂಗೀತ ಕಾರ್ಯಕ್ರಮ ಹಾಗು ಕನ್ನಡ ಮತ್ತು ಸಾಂಸ್ಕೃತಿ ಇಲಾಖೆಯ ಕಲಾ ತಂಡಗಳಿಂದ ವಿವಿಧ ಜಾನಪದ ಪ್ರದರ್ಶನ ಜರುಗಿದವು.ಶಿಕ್ಷಕ ಶಿವಶರಣಪ್ಪ ಶಿರೂರ ಕಾರ್ಯಕ್ರಮವನ್ನು ನಿರೂಪಿಸಿ ವಂದಿಸಿದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here