ಸುರಪುರ: ವಿವಿಧ ಬೇಡಿಕೆಗಳ ಈಡೇರಿಸಲು ಆಗ್ರಹಿಸಿ ದೆಹಲಿಯಲ್ಲಿ ರೈತರು ನಡೆಸುತ್ತಿರುವ ನಿರಂತರ ಹೋರಾಟವನ್ನು ಬೆಂಬಲಿಸಿ ತಾಲೂಕು ರೈತ ಹೋರಾಟ ಸಮಿತಿ ನೇತೃತ್ವದಲ್ಲಿ ಬೃಹತ್ ಟ್ರ್ಯಾಕ್ಟರ್ ರ‍್ಯಾಲಿ ನಡೆಸಲಾಯಿತು.ನಗರದ ಹಸನಾಪುರ ಪೆಟ್ರೋಲ್ ಬಂಕ್ ಬಳಿಯ ನಾಲ್ವಡಿ ರಾಜಾ ವೆಂಕಟಪ್ಪ ನಾಯಕ ವೃತ್ತದಿಂದ ಸುರಪುರ ನಗರದ ಮಹಾತ್ಮ ಗಾಂಧಿ ವೃತ್ತದ ಮೂಲಕ ದರಬಾರ ರಸ್ತೆಯಿಂದ ಹಳೆ ಬಸ್ ನಿಲ್ದಾಣದ ಮೂಲಕ ತಹಸೀಲ್ ಕಚೇರಿ ವರೆಗೆ ಜಾಥಾ ನಡೆಸಲಾಯಿತು. ಈ ಸಂದರ್ಭದಲ್ಲಿ ಭಾಗವಹಿಸಿದ್ದ ಐದು ನೂರಕ್ಕೂ ಹೆಚ್ಚಿನ ಸಂಖ್ಯೆಯ ಹೋರಾಟಗಾರರು ಕೇಂದ್ರ ಮತ್ತು ರಾಜ್ಯ ಸರಕಾರಗಳ ವಿರುದ್ಧ ಘೋಷಣೆಗಳನ್ನು ಕೂಗಿ ಆಕ್ರೋಶ ವ್ಯಕ್ತಪಡಿಸಿದರು.
ನಂತರ ತಹಸೀಲ್ ಕಚೇರಿ ಮುಂದೆ ನಡೆದ ಬಹಿರಂಗ ಸಮಾವೇಶದಲ್ಲಿ ಮಲ್ಲಯ್ಯ ಕಮತಗಿ ಮತ್ತಿತರೆ ಮುಖಂಡರು ಮಾತನಾಡಿ, ಕೆಂದ್ರ ಸರ್ಕಾರವು ಇತ್ತೀಚಿಗೆ ಜಾರಿಗೆ ತಂದಿರುವ ಕೃಷಿ ಕಾನೂನುಗಳು ರೈತರಿಗೆ ಮಾರಕವಾಗಿವೆ ಇವುಗಳನ್ನು ಹಿಂಪಡೆಯುವಂತೆ ನಮ್ಮ ರೈತ ಬಾಂಧವರು ಕಳೆದ ೬೦ ದಿನಗಳಿಂದ ದೆಹಲಿ ಗಡಿಯಲ್ಲಿ ಪ್ರತಿಭಟಿಸುತ್ತಿದ್ದಾರೆ ಆದರೂ ಕೇಂದ್ರ ಸರ್ಕಾರ ಬರೀ ಸಂಧಾನದ ಮಾತನಾಡುತ್ತಿದೆ ಹೊರತು ಕಾನೂನುಗಳನ್ನು ಯಾವುದೆ ಕಾರಣಕ್ಕೂ ಹಿಂಪಡೆಯುತ್ತಿಲ್ಲಾ ಇತಂಹ ಕಾನೂನುಗಳನ್ನು ಜಾರಿಗೆ ತಂದು ರೈತರ ಮರಣ ಶಾಸನ ಬರೆಯಲು ಹೊರಟಿದೆ ಎಂದು ಆಕ್ರೋಶಗೊಂಡರು.
ಸುಪ್ರೀಂ ಕೋರ್ಟನಿ ಆದೇಶಕ್ಕು ಕೇಂದ್ರ ಸರ್ಕಾರ ಕಿಮ್ಮತ್ತು ನೀಡುತ್ತಿಲ್ಲಾ ರೈತರೊಂದಿಗೆ ಸರ್ಕಾರ ೧೧ ಬಾರಿ ಮಾತುಕತೆಗೆ ಮುಂದಾಗಿ ರೈತರ ಬೇಡಿಕೆಯನ್ನು ತಿರಸ್ಕರಿಸಿರುವುದು ಸಕಾರದ ಕಾರ್ಪೂರೇಟ ನೀತಿಯಿಂದಾಗಿ ರೈತರು ಕಂಗಾಲಾಗಿದ್ದಾರೆ ತಕ್ಷಣವೆ ಸರ್ಕಾರ ಈ ರೈತ ವಿರೋಧಿ ನೀತಿಗಳನ್ನು ಹಿಂಪಡೆಯಬೇಕು ಎಂದು ಆಗ್ರಹಿಸಿದರು.
ನಂತರ ರಾಜ್ಯಪಾಲರಿಗೆ ಬರೆದ ಮನವಿಯನ್ನು ತಹಶೀಲ್ದಾರ ಸುಬ್ಬಣ್ಣ ಜಮಖಂಡಿಯವರ ಮೂಲಕ ಸಲ್ಲಿಸಿದರು.ಪ್ರತಿಭಟನೆಯಲ್ಲಿ ಮುಖಂಡರಾದ ಅಯ್ಯಣ್ಣ ಹಾಲಭಾವಿ, ಅಹ್ಮದ್ ಪಠಾಣ, ಹಣಮಂತ್ರಾಯ ಮಡಿವಾಳ ದೇವೀಮದ್ರ ಪ್ಪತ್ತಾರ ಯಲ್ಲಪ್ಪ ಚಿನ್ನಾಕರ, ರಾಹುಲ್ ಹುಲಿಮನಿ,ಮಾಳಪ್ಪ ಕಿರದಹಳ್ಳಿ ಜೆಟ್ಟೆಪ್ಪ ನಾಗರಾಳ ಶಿವಲಿಂಗ ಹಸನಾಪುರ ಸೇರಿದಂತೆ ಅನೇಕರು ಭಾಗವಹಿಸಿದ್ದರು.