ಶಾಸಕಿ ಸೌಮ್ಯ ರೆಡ್ಡಿ ವಿರುದ್ಧ ಪ್ರಕರಣ ಹಿಂಪಡೆಯದಿದ್ದರೆ, ಉಗ್ರ ಹೋರಾಟ: ಅರುಣ ರೆಡ್ಡಿ

0
51

ಕಲಬುರಗಿ: ಕೃಷಿ ಕಾಯ್ದೆ ರದ್ದಿತಿಗೆ ಆಗ್ರಹಿಸಿ ಬೆಂಗಳೂರಿನಲ್ಲಿ ನಡೆದ ಪ್ರತಿಭಟನೆಗೆ ಸಂಬಂಧಿಸಿದಂತೆ ಜಯ ನಗರ ಶಾಸಕಿ ಸೌಮ್ಯ ರೆಡ್ಡಿ  ಅವರ ವಿರುದ್ಧ ಸುಳ್ಳು ಪ್ರಕರಣ ದಾಖಲಿಸಿರುವುದು ಜಿಲ್ಲಾ ಯುವ ರೆಡ್ಡಿ ಸಮಾಜ ತೀವ್ರವಾಗಿ ಖಂಡಿಸುತ್ತದೆ.

ರಾಜಕೀಯ ಒತ್ತಡಕ್ಕೆ ಮಣಿದು ಪೋಲಿಸರು ಸೌಮ್ಯ ರೆಡ್ಡಿ ವಿರುದ್ಧ ಹುಸಿ ಪ್ರಕರಣ ದಾಖಲು ಮಾಡಿದ್ದಾರೆ ಎಂದು ಜಿಲ್ಲಾ ಯುವ ರೆಡ್ಡಿ ಸಮಾಜದ ಉಪಾಧ್ಯಕ್ಷ ಅರುಣ ರೆಡ್ಡಿ ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

Contact Your\'s Advertisement; 9902492681

ಪ್ರತಿಭಟನೆಯಲ್ಲಿ ಪಾಲ್ಗೊಂಡಿದ ಸೌಮ್ಯ ರೆಡ್ಡಿ ಶಾಸಕಿಯನು ಮಹಿಳಾ ಹೋಮಗಾಡ೯ ಅವರು ಸೀರೆ ಜುಟ್ಟು ಹಿಡಿದು ಎಳೆದಾಡಿ ಅನುಚಿತವಾಗಿ ವರ್ತಿಸಿದ್ದಾರೆ. ಆದರೆ ಇದನ್ನು ಮರೆಯಾಚಿಸಲು ಸುಳ್ಳು ಆರೋಪ ಹೊರಿಸಿ ಅವರ ವಿರುಧ್ಧವೇ ಪ್ರಕರಣ ದಾಖಲಿಸಲಾಗಿದೆ ಎಂದು ದೂರಿದರು.

ಸೌಮ್ಯ ರೆಡ್ಡಿ ವಿರುಧ್ಧವೆ ಪ್ರಕರಣವನ್ನು ಬೇಷರತ್ತಾಗಿ ಕೂಡಲೇ ಹಿಂಪಡೆಯಬೇಕು ಇಲ್ಲವಾದಲ್ಲಿ ರೆಡ್ಡಿ ಸಮಾಜದ ವತಿಯಿಂದ ರಾಜ್ಯಾದ್ಯಂತ ಉಗ್ರವಾದ ಹೋರಾಟ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here