ಶಹಾಪುರ: ದೇಶದಲ್ಲಿ ಸಂವಿಧಾನ ರಕ್ಷಣೆಯಾಗುತ್ತಿಲ್ಲ ಸಂವಿಧಾನದ ರಕ್ಷಣೆ ತಾತ್ವಿಕ ನೆಲೆಗಟ್ಟಿನಲ್ಲಿರಬೇಕೇ ಹೊರತು ತಾಂತ್ರಿಕವಾಗಲ್ಲ ಎಂಬುದನ್ನು ಪ್ರತಿಯೊಬ್ಬರೂ ಅರಿತುಕೊಳ್ಳುವುದು ಅಗತ್ಯ ಇದೆ ಎಂದು ಮಾನವ ಬಂಧುತ್ವ ವೇದಿಕೆಯ ಸಂಸ್ಥಾಪಕ ಅಧ್ಯಕ್ಷರು ಹಾಗೂ ಮಾಜಿ ಸಚಿವರಾದ ಸತೀಶ್ ಜಾರಕಿಹೊಳಿ ಹೇಳಿದರು.
ತಾಲ್ಲೂಕಿನ ಭೀಮರಾಯನಗುಡಿ ಕೃಷಿ ಮಹಾ ವಿದ್ಯಾಲಯ ಆಡಿಟೋರಿಯಂ ಹಾಲ್ ನಲ್ಲಿ ಜಿಲ್ಲಾ ಮಾನವ ಬಂಧುತ್ವ ವೇದಿಕೆ ಹಾಗೂ ದಲಿತ ಸೇನೆ ವತಿಯಿಂದ ಹಮ್ಮಿಕೊಂಡಿರುವ ಸಂವಿಧಾನ ಸಂಭ್ರಮಾಚರಣೆ ಹಾಗೂ ಭಾರತ ಸಂವಿಧಾನ ಮತ್ತು ಅದರ ಮುಂದಿರುವ ಸವಾಲುಗಳು ಕುರಿತು ಒಂದು ಗಂಭೀರ ಚರ್ಚೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಇನ್ನೋರ್ವ ಮುಖ್ಯ ಭಾಷಣಕಾರರಾಗಿ ಆಗಮಿಸಿದ ಬಸವರಾಜ್ ಮೌರ್ಯ ಮಾತನಾಡುತ್ತಾ ಸಮಾಜದಲ್ಲಿರುವ ಕೆಲವೊಂದು ಕುತಂತ್ರಿಗಳಿಂದ ಸಂವಿಧಾನವನ್ನು ಸುಟ್ಟು ಹಾಕುವ ಸ್ಥಿತಿಗೆ ತಂದೊಡ್ಡಿದ್ದಾರೆ ನಾವು ಯಾವುದಕ್ಕೂ ಎದೆಗುಂದುವುದಿಲ್ಲ ಇಂತಹ ಗೊಡ್ಡು ಬೆದರಿಕೆಗಳಿಗೆ ನಾವು ಹೆದರುವುದಿಲ್ಲ ಡಾ. ಬಾಬಾಸಾಹೇಬ್ ಅಂಬೇಡ್ಕರ್ ಅವರು ಬರೆದಿರುವ ಸಂವಿಧಾನ ಪ್ರತಿಯೊಬ್ರು ಅರ್ಥೈಸಿಕೊಂಡು ಬದುಕುವುದು ಪ್ರಾಮುಖ್ಯತೆ ಇದೆ ಎಂದು ಉಪನ್ಯಾಸ ನೀಡಿದರು.
ವಿಚಾರವಾದಿ ವಿಶ್ವರಾಧ್ಯ ಸತ್ಯಂಪೇಟೆ ಮಾತನಾಡುತ್ತಾ ವೈಚಾರಿಕತೆಯ ನಿಲುವುಗಳನ್ನು ಬದುಕಿನುದ್ದಕ್ಕೂ ಮೈಗೂಡಿಸಿಕೊಂಡು ಬುದ್ಧ ಬಸವ ಅಂಬೇಡ್ಕರ್ ತತ್ತ್ವಾದರ್ಶ ಗಳ ಜೊತೆಗೆ ಬದುಕಿದರೆ ಬದುಕು ಸಾರ್ಥಕ ಆಗುತ್ತದೆ ಎಂದು ಅವರ ಅಭಿಪ್ರಾಯ ತಿಳಿಸಿದರು.
ಈ ಸಮಾರಂಭದ ವೇದಿಕೆ ಮೇಲೆ ಪೂಜ್ಯ ಬೊಧಿ ಬಂತೇಜಿ ಕರುಣಾನಂದ,ಕೆ.ಕೆ.ಬಿ. ನಿರ್ದೇಶಕರಾದ ದೇವಿಂದ್ರಪ್ಪಗೌಡ ಗೌಡಗೇರಿ, ದಲಿತ ಸೇನೆಯ ರಾಜ್ಯಾಧ್ಯಕ್ಷರಾದ ಹಣಮಂತ ಯಳಸಂಗಿ ಈ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿಕೊಂಡಿದ್ದರು, ಜಿಲ್ಲಾ ಪಂಚಾಯತಿಯ ಅಧ್ಯಕ್ಷರಾದ ಬಸನಗೌಡ ಯಡಿಯಾಪುರ,ಜಿಲ್ಲಾ ಪಂಚಾಯ್ತಿ ಸದಸ್ಯರಾದ ಕಿಶನ್ ರಾಠೋಡ್,ಸಾಹಿತಿಗಳಾದ ಗಾಳೆಪ್ಪ ಪೂಜಾರಿ,ದಲಿತ ಸೇನೆಯ ರಾಜ್ಯ ಉಪಾಧ್ಯಕ್ಷರಾದ ರಾಜಶೇಖರ ಚೌರ,ಶಹಾಪುರ ತಾಲ್ಲೂಕಿನ ದಲಿತ ಸಂಘಟನೆಗಳ ಒಕ್ಕೂಟದ ಅಧ್ಯಕ್ಷರಾದ ನಾಗಣ್ಣ ಬಡಿಗೇರ್,ನಗರಸಭೆಯ ಸದಸ್ಯರಾದ ಶಿವುಕುಮಾರ ತಳವಾರ,ಮಾನಯ್ಯ ಹೊಸಮನಿ,ಬಸ್ಸಪ್ಪ ಭಂಗಿ,ಯುವ ಮುಖಂಡರಾದ ಭೀಮಣ್ಣ ಮೇಟಿ, ಹನುಮೇಗೌಡ ಮರಕಲ್, ಹಾಗೂ ಇತರರು ಉಪಸ್ಥಿತರಿದ್ದರು.
ಕಲಬುರಗಿಯ ಶ್ರೀ ಸಿದ್ಧಾರ್ಥ ಚಿಮ್ಮಾಮಿಡ್ಲ ಕಲಾತಂಡದ ವತಿಯಿಂದ ಕ್ರಾಂತಿಕಾರಿ ಗೀತೆಗಳು ಪ್ರಸ್ತುತಪಡಿಸಿದರು ಈ ಕಾರ್ಯಕ್ರಮವನ್ನು ಮೌನೇಶ್ ಬೀರನೂರ್ ಸ್ವಾಗತಿಸಿದರು, ದಲಿತ ಸೇನೆ ಜಿಲ್ಲಾಧ್ಯಕ್ಷರಾದ ಅಶೋಕ ಹೊಸಮನಿ, ಪ್ರಾಸ್ತಾವಿಕ ಮಾತುಗಳನ್ನಾಡಿದರು ಬಸವರಾಜ ಸಿನ್ನೂರ ನಿರೂಪಿಸಿದರು ನಿಂಗಣ್ಣ ಗೋನಾಲ ವಂದಿಸಿದರು.