ಕಲಬುರಗಿ: ವಾಡಿ ಪೋಲಿಸ್ ಠಾಣೆ ವತಿಯಿಂದ 32ನೇ ರಾಷ್ಟ್ರೀಯ ರಸ್ತೆ ಸುರಕ್ಷತಾ ಸಪ್ತಾಹ ಕಾರ್ಯಕ್ರಮ ಅಂಗವಾಗಿ ವಾಡಿ ಪಟ್ಟಣದ ಆಟೋ ಹಾಗೂ ಕ್ರೂಸರ್ ಚಾಲಕರಿಗೆ ಉಚಿತ ಆರೋಗ್ಯ ತಪಾಸಣೆ ಶಿಬಿರ ಆಯೋಜಿಸಲಾಗಿತ್ತು.
ನಗರದ ಪೋಲಿಸ್ ಠಾಣೆಯಲ್ಲಿ ಆಯೋಜಿಸಿದ್ದ ಆರೋಗ್ಯ ತಪಾಸಣೆ ಶಿಬಿರಕ್ಕೆ ಪಿಎಸ್ ಐ ವಿಜಯಕುಮಾರ್ ಬಾವಗಿ ಚಾಲನೇ ನೀಡಿದರು. ನೂರಕ್ಕೂ ಅಧಿಕ ಆಟೋ ಮತ್ತು ಕ್ರೂಸರ್ ಚಾಲಕರನ್ನು ಉಚಿತ ಆರೋಗ್ಯ ತಪಾಸಣೆ ನಡೆಸುವುದರ ಜೊತೆಗೆ ವಾಹನ ಚಲಾಯಿಸುವ ಸಮಯದಲ್ಲಿ ಪಾಲಿಸಬೇಕಾದ ನಿಯಮಗಳು ಹಾಗೂ ರಸ್ತೆ ಸುರಕ್ಷಿತಯ ಕುರಿತು ತಿಳುವಳಿಕೆ ನೀಡಲಾಯಿತು.