ಕಲಬುರಗಿ: ನಗರದ ಜಾನ್ ಸ್ಕೂಲ್ ನಲ್ಲಿ ಲೂಷ್, ವಿಷಾರ್, ಹಿಂದುಸ್ತಾನ್ ಕಾನ್ವೆಂಟ್ ಚರ್ಚ್, ಅನೇಕ ಹಾಗೂ ಸ್ನೇಹ ಸೊಸೈಟಿ ಸಹಯೋಗದಲ್ಲಿ ಧರ್ಮ ಮತ್ತು ಲೈಂಗಿಕತೆ ಜಾಗೃತಿ ಜರುಗಿತು.
ಕ್ಯಾಥೋಲಿಕ ಸಭೆಯ ಫಾದರ್ ವಿನ್ಸೆಂಟ್ ಪ್ರಕಾಶ್ ಪರಿಯರ್, ಇಮಾಮ್ ಖತೀಬ್ ಮಸಜೀದ್ ಮೌಲಾನಾ ಶುಕುರ್ ಸಾಬ್, ಹಿಂದುಸ್ತಾನಿ ಚರ್ಚ್ ನ ಘನ ಬೋಧಕರು ಫಾದರ್ ಸ್ಯಾಮುವೆಲ್, ಸೆಂಟ್ ಜಾನ್ ಸ್ಕೂಲ್ ಪ್ರಾಂಶುಪಾಲ ಸುಜಾತಾ, ಹಿರಿಯ ಧರ್ಮ ಚಿಂತಕರಾದ ಶೀಲಾ ಸಿದ್ರಾಮ್, ಸ್ನೇಹ ಸೂಸೈಟಿ ಅಧ್ಯಕ್ಷರಾದ ಮುಸ್ಕಾನ್, ಕಾರ್ಯಕ್ರಮ ನಿರ್ದೇಶಕರಾದ ಮನೀಷಾ ಚಬ್ಹಾಣ ದೀಪಾ ಬೆಳಗಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಲೈಂಗಿಕ ಅಲ್ಪಸಂಖ್ಯಾತರ ಸಮುದಾಯ ಸಮಾಜದ ತಪ್ಪು ಕಲ್ಪನೆಯಿಂದ ಸಾಕಷ್ಟು ಸಮಸ್ಯೆಗಳು ಅನುಭವಿಸುವಂತಹ ಸ್ಥಿತಿ ನಿರ್ಮಿಸಲಾಗುತ್ತಿದೆ ಎಂದು ಲೈಂಗಿಕ ಅಲ್ಪಸಂಖ್ಯಾತರ ಹೋರಾಟಗಾರ್ತಿ ಅನೇಕ ಸಂಸ್ಥೆಯ ಮಲ್ಲು ಕುಂಬಾರ ಕಾರ್ಯಕ್ರಮ ಉದ್ದೇಶಿ ಮಾತನಾಡಿದರು.
ಎಲ್ಲಾ ಇಸ್ಲಾಂ, ಕ್ರೈಸ್ತ ಹಾಗೂ ಹಿಂದೂ ಧರ್ಮಗಳು ಒಳಗೊಂಡಂತೆ ಎಲ್ಲಾ ಧರ್ಮ ಗ್ರಂಥಗಳಲ್ಲಿ ಎಲ್ಲರಿಗೂ ಸಮಾನತೆ ಸಾರುವ ಸಂದೇಶಗಳನ್ನು ನೀಡಿದ್ದು, ಆದರೆ ಲೈಂಗಿಕ ಅಲ್ಪಸಂಖ್ಯಾತರ ವಿಷಯದಲ್ಲಿ ಈ ಅಂಶ ಪಾಲನೆಯಾಗುತ್ತಿದೀಯಾ ಎಂಬುದನ್ನು ಪ್ರಶ್ನಿಸಿಕೊಳ್ಳುವ ಅಗತ್ಯವಿದೆ ಎಂದು ತಿಳಿಸಿದರು.
ಸ್ನೇಹ ಸಂಸ್ಥೆಯ ಮೌನೇಶ್ ಮಾತನಾಡಿದರು. ಈ ವೇಳೆಯಲ್ಲಿ ಫಾದರ್ ಕ್ಯಾಥೋಲಿಕ ಸಭೆಯ ಫಾದರ್ ವಿನ್ಸೆಂಟ್ ಪ್ರಕಾಶ್ ಪರಿಯರ್ ಮಾತನಾಡಿ ಅಲ್ಪಸಂಖ್ಯಾತರ ಸಹ ನಮ್ಮಂತೆ ಜನರು ತಿಳಿಯದೆ, ಸಮಾಜ ಈ ಸಮುದಾಯವನ್ನು ಬಹಿಷ್ಕರಿಸುತ್ತಿದೆ. ಸಮಾಜದ ದ್ವೇಷಕ್ಕೆ ಈ ಸಮುದಾಯ ಸಮಸ್ಯೆ ಎದುರಾಗಿದೆ. ನಮ್ಮಲ್ಲಿ ಮರುವ ದೇಷ ವೇಭಿಚಾರದ ಮನೋಭಾವ ತೊಳೆದುವಹಾಕಿದಾಗ ಮಾತ್ರ ಅಲ್ಪಸಂಖ್ಯಾತರಿಗೆ ನ್ಯಾಯ ಸಿಗಬೇಕು ಎಂದರು.
ನನ್ನ ಮನೆಯಲ್ಲಿದಾಗ ಮಾತ್ರ ಅದು ನನ್ನ ಧರ್ಮ, ನಾನು ಮನೆಯಿಂದ ಹೊರಗಡೆ ಬಂದ ಮೇಲೆ ನನ್ನ ಮಾನವ ಧರ್ಮ ಮತ್ತು ಹೊರಗಡೆ ಬಂದಾಗ ನನ್ನಗೆ ನಮ್ಮ ದೇಶದ ಸಂವಿಧಾನ ಮವೇ ಧರ್ಮ ಗ್ರಂಥ ಎಂದು ಹೇಳಿ ಕೊಳ್ಳಲು ಹೆಮ್ಮೆ ಇದೆ ಎಂದರು.
ಬೀದಿಯಲ್ಲಿ ಇರಬೇಕಾದ ಪ್ರಾಣಿಗಳನ್ನು ಮನೆಯಲ್ಲಿ ಸಾಕುತ್ತಿದ್ದೇವೆ. ಆದರೆ ಮನೆಯಲ್ಲಿ ಇರಬೇಕಾದ ಸಮುದಾಯವನ್ನು ಹೊರಗಟ್ಟುತ್ತಿದೇವೆ. ಇವರ ಸಹಕಾರಕ್ಕೆ ನಾವು ನಿಲ್ಲಬೇಕಾಗಿದೆ ಎಂದು ಮೌಲಾನಾ ಶುಕುರ್ ಕರೆ ನೀಡಿದರು.