ಕುಖ್ಯಾತ ಮನೆಗಳ್ಳರ ಬಂಧನ: ನಗದು ಸೇರಿ 8.65 ಲಕ್ಷದ ಮೌಲ್ಯದ ವಸ್ತು ಜಪ್ತಿ

0
79

ಕಲಬುರಗಿ: ಅಳಂದ ತಾಲ್ಲೂಕಿನ ನಿಂಬರ್ಗಾ ಪೊಲೀಸ್ ಠಾಣೆ ವ್ಯಪ್ತಿಯಲ್ಲಿ ಮನೆಗಳ ಬೀಗ ಮುರಿದು ಆಭರಣಗಳ ಜೊತೆಯಲ್ಲಿ ಆಹಾರ ಧಾನ್ಯವನ್ನು ಕಳ್ಳತನ ಮಾಡುವ ಆರು ಪ್ರಕರಣಗಳಿಗೆ ಸಂಬಂಧಿಸಿದಂತೆ ಮೂವರು ಆರೋಪಿಗಳನ್ನು ಪೊಲೀಸರು ಬಂಧಿಸಿ ನಗದು ಸೇರಿ 8.65 ಲಕ್ಷ ಮೌಲ್ಯದ ವಸ್ತುಗಳನ್ನು ಜಪ್ತಿ ಮಾಡಲಾಗಿದೆ.

ಕಮಸರ ನಾಯಕ ತಾಂಡದ ನಿವಾಸಿ ಶಿವರಾಜ್ ಗಂಗು, ಶಕಾಪೂರ ಪಾರ್ದಿ ನಿವಾಸಿ ರಾಮಜೀ ಜಕಲು ಕಾಳೆ ಹಾಗೂ ಇದೇ ಗ್ರಾಮದ ನಿವಾಸಿ ಬೇಗಂ ರಾಮಜೀ ಕಾಳೆ ಎಂಬ ಮಹಿಳೆಯನ್ನು ಬಂಧಿಸಲಾಗಿದೆ.

Contact Your\'s Advertisement; 9902492681

ಪೊಲೀಸ್ ಉಪಧೀಕ್ಷಕರಾದ ಮಲ್ಲಿಕಾರ್ಜುನ್ ಪ್ರಸನ್ನ ದೇಸಾಯಿ ಅವರ ಮಾರ್ಗದರ್ಶನದಲ್ಲಿ ಆಳಂದ ಸಿ.ಪಿ.ಐ ಮಂಜುನಾಥ ಎಸ್. ಮತ್ತು ಪಿ.ಎಸ್.ಐ ಮಹಾಂತೇಶ ಪಾಟೀಲ (ಕಾ&ಸು). ಆಳಂದ ಠಾಣೆ ಪಿ.ಎಸ್.ಐ ಮಲ್ಲಣ್ಣಾ, ಎ.ಎಸ್.ಐ ಜ್ಯೋತಿ ಹಾಗೂ ಸಿಬ್ಬಂದಿಗಳಾದ ಶಿವಾಜಿ, ಮಹಿಬೂಬ ಶೇಖ, ಚಂದ್ರಶೇಖರ, ಮಲ್ಲಿಕಾರ್ಜುನ ಗೊಟುರ, ಬಸವರಾಜ ಪೂಜಾರಿ, ಗುರುರಾಜ, ದಶರಥ, ಮಹೇಶ, ರತನ, ಹಣಮಂತ, ಮದುಮತಿ. ರೇಖಾಬಾಯಿ ವಿಶೇಷ ತಂಡದಿಂದ ಕಾರ್ಯಾಚರಣೆ ನಡೆದಿದೆ.

ಕಾರ್ಯಾಚರಣೆಯಲ್ಲಿ ಆರೋಪಿಗಳಿಂದ 85 ಗ್ರಾಂ ಬಂಗಾರದ ಆಭರಣಗಳು,4,25 ಮತ್ತು 15 ಸಾವಿರ ಬೆಲೆಯೂಳ್ಳ ಬೆಳ್ಳಿಯ ಆಭರಣ, 25 ಸಾವಿರ ಕಳ್ಳತನಕ್ಕೆ ಉಪಯೊಗಿಸಿದ ಒಂದು ಲಕ್ಷ ಮಾಲ್ಯದ ಎರಡು ಮೋಟಾರ ಸೈಕಲ್ ಮತ್ತು ಮೂರು ಲಕ್ಷ ಮೌಲ್ಯದ ಒಂದು ಮಿನಿ ಗೂಡ್ಭ ವಾಹನ ವಶಕ್ಕೆ ಪಡೆದುಕೊಂಡು ಒಟ್ಟು 8.65 ಲಕ್ಷ ಮೌಲ್ಯದ ವಸ್ತುಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here